ಮೊಮ್ಮಗನಿಗಾಗಿ ಎಲೆಕ್ಟ್ರಿಕ್ ಲಂಬೊರ್ಗಿನಿ ನಿರ್ಮಿಸಿದ ಚೀನಾ ರೈತ
ಇದು ಚೀನಾದ ರೈತರೊಬ್ಬರ ಕಥೆ. ತನ್ನ ಮೊಮ್ಮಗನನ್ನು ಶಾಲೆಗೆ ಕರೆದುಕೊಂಡು ಹೋಗುವ ಸಲುವಾಗಿ ವಿದ್ಯುತ್ ಚಾಲಿತ ಲಂಬೊರ್ಗಿನಿ ಕಾರೊಂದನ್ನು ತಯಾರಿಸಿದ್ದಾರೆ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ, ಲಂಬೊರ್ಗಿನಿ ಜಗತ್ತಿನ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇಟಲಿ ಮೂಲದ ಈ ಸೂಪರ್ ಕಾರು, ಕೋಟಿ ಕೋಟಿ ರು.ಗಳಷ್ಟು ದುಬಾರಿಯಾಗಿದೆ. ಹಾಗಿರುವಾಗ ಈ ಕೃಷಿಕ ಇಷ್ಟು ದುಬಾರಿಯ ಕಾರನ್ನು ಹೇಗೆ ತಯಾರಿಸಿರಬಹುದು ಅಂತೀರಾ? ಉತ್ತರಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಸತ್ಯಾಂಶ ಏನೆಂದರೆ ಇದು ನೈಜ ಲಂಬೊರ್ಗಿನಿ ಕಾರಲ್ಲ. ಬದಲಾಗಿ ಲಂಬೊರ್ಗಿನಿ ತದ್ರೂಪ ಹೊಂದಿರುವ ಎಲೆಕ್ಟ್ರಿಕ್ ಕಾರು.

ಮಧ್ಯ ಚೀನಾದ ಜೆಂಗ್‌ಜುವೋ ಪ್ರಾಂತ್ಯ ನಿವಾಸಿ 50ರ ಹರೆಯದ ಓಲ್ಡ್ ಗುವೋ ಎಂಬವರು ಇದನ್ನು ತಯಾರಿಸಿದ್ದಾರೆ. ಸ್ಟೈನ್‌ಲೆಸ್ ಸ್ಟೀಲ್‌ನಿಂದ ಇದನ್ನು ನಿರ್ಮಿಸಲಾಗಿದೆ.

ಕೇವಲ ಆರು ತಿಂಗಳೊಳಗೆ ಈ ಚೊಕ್ಕದಾದ ಎಲೆಕ್ಟ್ರಿಕ್ ಕಾರನ್ನು 815 ಅಮೆರಿಕನ್ ಡಾಲರ್ ವೆಚ್ಚದಲ್ಲಿ ಇದನ್ನು ತಯಾರಿಸಿದ್ದಾರೆ.

ಪ್ರಸ್ತುತ ಕಾರು ಕೇವಲ ಎರಡು ಮೀಟರ್ ಮಾತ್ರ ಉದ್ದವಿದ್ದು, ಒಂದು ಮೀಟರ್ ಅಗಲ ಹೊಂದಿದೆ. ಅಲ್ಲದೆ ಐದು ಬ್ಯಾಟರಿಗಳಿಂದ ನಿಯಂತ್ರಿತ ಈ ಕಾರಿನಲ್ಲಿ 60 ಕೀ.ಮೀ. ವರೆಗೆ ಸರಾಗವಾಗಿ ಚಲಿಸಬಹುದಾಗಿದೆ.

ಮೇಲ್ಗುಖವಾಗಿ ತೆರೆಯಲ್ಪಡುವ ಬಾಗಿಲುಗಳ ಹೊರತಾಗಿ ಅದು ಲಂಬೊರ್ಗಿನಿ ಕಾರೆನಿಸಿಕೊಳ್ಳುವುದಿಲ್ಲ. ಇಲ್ಲಿಯೂ ಚೀನಾ ರೈತನ ಕಾರಲ್ಲೂ ಇದನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ.

ಇನ್ನು ಮುಂದಕ್ಕೆ ಹಾಗೂ ಹಿಂದಕ್ಕೆ ಚಲಿಸಲು ಬಟನ್ ಸ್ವಿಚ್ ಆಳವಡಿಸಲಾಗಿದೆ. ಅಲ್ಲದೆ ಸ್ಟೀರಿಂಗ್ ಮೇಲೆ ಲಂಬೊರ್ಗಿನಿ ಲೊಗೊ ಕೂಡಾ ಲಗತ್ತಿಸಲಾಗಿದೆ. ಇನ್ನು ಗರಿಷ್ಠ ಗಂಟೆಗೆ 42 ಕೀ.ಮೀ. ವೇಗದಲ್ಲಿ ಚಲಿಸಲಿದೆ.

ಅದೇ ರೀತಿ ಮಳೆ ಬಂದಾಗ ಈ ಕನ್ವರ್ಟಿಬಲ್ ಕಾರಿನ ಮೇಲಾವರಣ ಸ್ವಯಂಚಾಲಿತವಾಗಿ ಮುಚ್ಚಲ್ಪಡಲಿದೆ. ಹಾಗೆಯೇ ಬಾಗಿಲುಗಳು ಸಹ ವಿದ್ಯುತ್‌ನಿಂದ ನಿಯಂತ್ರಿಸಲ್ಪಡಲಿದೆ.

ಇಷ್ಟೆಲ್ಲ ಆದರೂ ಗುವೋ ಅವರ ವಿದ್ಯುತ್ ಚಾಲಿತ ಕಾರನ್ನು ಮುಖ್ಯ ರಸ್ತೆಯಲ್ಲಿ ಚಾಲನೆ ಮಾಡುವ ಹಾಗಿಲ್ಲ. ಹಾಗಿದ್ದರೂ ತಮ್ಮ ಉದ್ದೇಶದಂತೆ ಮೊಮ್ಮಗನನ್ನು ಶಾಲೆಗೆ ಕರೆದುಕೊಂಡು ಹೋಗುವ ಭರವಸೆಯಲ್ಲಿದ್ದಾರೆ.
ಆಕರ್ಷಕ ವೀಡಿಯೋ ವೀಕ್ಷಿಸಿ


Click it and Unblock the Notifications








