Just In
Don't Miss!
- News
ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರುಗಳನ್ನು ಮನುಷ್ಯರಂತೆ ಅಭಿವೃದ್ಧಿಪಡಿಸಿದ ಚೀನಿ ಯುವಕ
ಹಾಲಿವುಡ್‌ನಲ್ಲಿ ಬಿಡುಗಡೆಯಾದ ಕೆಲವು ಸಿನಿಮಾಗಳಲ್ಲಿ ಕಾರುಗಳು ಮಾನವ ರೂಪವನ್ನು ಪಡೆದುಕೊಳ್ಳುವುದನ್ನು ಕಾಣಬಹುದು. ಈ ರೀತಿಯ ದೃಶ್ಯವನ್ನು ಟ್ರಾನ್ಸ್‌ಫಾರ್ಮರ್ ಸಿನಿಮಾದಲ್ಲಿ ನೋಡಬಹುದು.

ಈ ರೀತಿಯ ದೃಶ್ಯಗಳನ್ನು ಗ್ರಾಫಿಕ್ಸ್‌ನಂತಹ ಆಧುನಿಕ ತಂತ್ರಜ್ಞಾನಗಳ ಮೂಲಕ ಸೃಷ್ಟಿಸಲಾಗುತ್ತದೆ. ಆದರೆ ಈ ರೀತಿಯ ಯಾವುದೇ ತಂತ್ರಜ್ಞಾನವಿಲ್ಲದೆ ಯುವಕನೊಬ್ಬ ತನ್ನ ಕೌಶಲ್ಯದಿಂದ ಹಳೆಯ ಕಾರುಗಳನ್ನು ಮಾನವರಂತೆ ಮಾಡಿಫೈ ಮಾಡಿದ್ದಾನೆ. ಉತ್ತರ ಚೀನಾದ ಹೆಬೈ ಪ್ರಾಂತ್ಯದ ಬಾಡಿಂಗ್'ನಲ್ಲಿ ವಾಸಿಸುತ್ತಿರುವ ಕ್ವಾನ್ ಲಿಗುನ್ ಎಂಬಾತನೇ ಕಾರುಗಳನ್ನು ಈ ರೀತಿಯಾಗಿ ಮಾಡಿಫೈಗೊಳಿಸಿರುವ ಯುವಕ.

ಕ್ವಾನ್ ಲಿಗುನ್'ಗೆ ದೀರ್ಘಕಾಲದಿಂದ ಕಾರುಗಳನ್ನು ಟ್ರಾನ್ಸ್‌ಫಾರ್ಮರ್'ಗಳ ರೀತಿಯಲ್ಲಿ ಮಾಡಿಫೈಗೊಳಿಸಬೇಕೆಂಬ ಕನಸಿತ್ತು. ಈ ಕಾರಣಕ್ಕೆ ಕೆಲವು ಹಳೆಯ ಅನುಪಯುಕ್ತ ಕಾರುಗಳನ್ನು ಬಳಸಿ ಟ್ರಾನ್ಸ್‌ಫಾರ್ಮರ್ ಸಿನಿಮಾದಲ್ಲಿ ಬರುವ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾನೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಾಡಿಫೈಗೊಳ್ಳುವ ಮೊದಲು ಈ ಕಾರುಗಳು ಸಾಮಾನ್ಯ ಕಾರುಗಳಂತೆ ಕಾಣುತ್ತವೆ. ಇವು ರಸ್ತೆಯ ಮೇಲೆ ನಿಂತಿರುವಾಗ ಅವುಗಳನ್ನು ಪಾರ್ಕ್ ಮಾಡಿ ನಿಲ್ಲಿಸಿರುವಂತೆ ಕಂಡು ಬರುತ್ತವೆ. ಆದರೆ ಸಿಗ್ನಲ್ ಬಂದ ನಂತರ ಇವೆಲ್ಲವೂ ಬದಲಾಗುತ್ತವೆ.

ಸಿಗ್ನಲ್ ನೀಡುವ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ರಿಮೋಟ್ ಗಳಿಂದ ಸಿಗ್ನಲ್ ಬಂದ ನಂತರ ಈ ಕಾರುಗಳು ಮಾನವರ ರೂಪವನ್ನು ಪಡೆಯುತ್ತವೆ. ಈ ಕಾರುಗಳು ಸಹಜ ಸ್ಥಿತಿಯಲ್ಲಿರುವಾಗ ಅವುಗಳನ್ನು ಚಲಾಯಿಸಬಹುದು ಎಂಬುದು ಗಮನಾರ್ಹ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕ್ವಾನ್ ಲಿಗುನ್ ಈ ಟ್ರಾನ್ಸ್‌ಫಾರ್ಮರ್ ಕಾರುಗಳನ್ನು ಅಂತಹ ಸಾಮರ್ಥ್ಯಗಳೊಂದಿಗೆ ಅಭಿವೃದ್ಧಿಪಡಿಸಿದ್ದಾನೆ. ಈ ಕಾರಿನ ಕುರಿತ ವೀಡಿಯೊವನ್ನು ಚೀನಾ ಮೂಲದ ಸಿಜಿಟಿಎನ್ ಸೈಟ್ ತನ್ನ ಯೂಟ್ಯೂಬ್ ಚಾನೆಲ್'ನಲ್ಲಿ ಪೋಸ್ಟ್ ಮಾಡಿದೆ.

ವರದಿಗಳ ಪ್ರಕಾರ ಕ್ವಾನ್ ಲಿಗುನ್ ಒಟ್ಟು ನಾಲ್ಕು ಟ್ರಾನ್ಸ್‌ಫಾರ್ಮರ್ ಕಾರುಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಇವುಗಳಲ್ಲಿ ಎರಡು ಕಪ್ಪು, ಒಂದು ಕೆಂಪು ಹಾಗೂ ಮತ್ತೊಂದು ಹಳದಿ ಬಣ್ಣದ ಕಾರುಗಳು ಸೇರಿವೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ
ಹಳೆಯ ಕಾರುಗಳು ಹಾಗೂ ಅವುಗಳ ಬಿಡಿಭಾಗಗಳೊಂದಿಗೆ ಕ್ವಾನ್ ಲಿಗುನ್ ಟ್ರಾನ್ಸ್‌ಫಾರ್ಮರ್ ಕಾರುಗಳನ್ನು ಅಭಿವೃದ್ಧಿಪಡಿಸಿದ್ದಾನೆ. ಈ ಟ್ರಾನ್ಸ್‌ಫಾರ್ಮರ್ ಕಾರುಗಳನ್ನು ತಿರುಗುವಂತೆ, ಮುಂದಕ್ಕೆ ಹೋಗುವಂತೆ ಹಾಗೂ ಇನ್ನಿತರ ಕಾರ್ಯಗಳನ್ನು ನಿರ್ವಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಈ ಕಾರುಗಳು ಥೇಟ್ ಹಾಲಿವುಡ್ ಸಿನಿಮಾಗಳಲ್ಲಿರುವ ಕಾರುಗಳಂತೆಯೇ ಕಾಣುತ್ತವೆ. ಕ್ವಾನ್ ಲಿಗುನ್ ಈ ಕಾರುಗಳನ್ನು ವಿನ್ಯಾಸಗೊಳಿಸಲು ಯಾರ ನೆರವನ್ನೂ ಪಡೆಯದೇ ಏಕಾಂಗಿಯಾಗಿಯೇ ಅಭಿವೃದ್ಧಿಪಡಿಸಿದ್ದಾನೆ.