ನಾಲ್ಕು ಚಕ್ರಗಳನ್ನು ಹೊಂದಿದೆ ಈ ಎಲೆಕ್ಟ್ರಿಕ್ ಸೈಕಲ್
ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚಾದಂತೆಲ್ಲಾ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಕಾರು, ಬೈಕ್ ಹಾಗೂ ಸೈಕಲ್‌ಗಳ ನಂತರ, ಕಾರಿನ ರೀತಿಯಲ್ಲಿರುವ ಎಲೆಕ್ಟ್ರಿಕ್ ಸೈಕಲ್ ಅನ್ನು ಸಹ ಬಿಡುಗಡೆಗೊಳಿಸಲಾಗಿದೆ.

ಯುರೋಪಿನ ಸಿಟಿಕ್ಯೂ ಕಂಪನಿಯು ಬಿಡುಗಡೆಗೊಳಿಸಿರುವ ಎಲೆಕ್ಟ್ರಿಕ್ ಕಾರು ಸೈಕಲ್‌ನಂತೆ ಪೆಡಲ್ ಹೊಂದಿದೆ. ಈ ಸೈಕಲ್ ನಾಲ್ಕು ವ್ಹೀಲ್‌ಗಳನ್ನು ಹೊಂದಿದ್ದು, ನೋಡಿದ ತಕ್ಷಣ ಕಾರಿನಂತೆ ಕಾಣುತ್ತದೆ. ಎರಡು ಡೋರ್‌ಗಳನ್ನು ಹೊಂದಿರುವ ಈ ಕಾರಿನಲ್ಲಿ ಮೂರು ಸೀಟುಗಳಿವೆ.

ಲಗೇಜ್‌ಗಾಗಿಯೂ ಸ್ಥಳವಕಾಶ ನೀಡಲಾಗಿದೆ. ಈ ವಾಹನವು ಸ್ಟೀಯರಿಂಗ್ ವ್ಹೀಲ್ ಅನ್ನು ಸಹ ಹೊಂದಿದೆ. ಒಂದು ವ್ಯತ್ಯಾಸವೆಂದರೆ ಈ ಕಾರಿನಲ್ಲಿ ಚಾಲಕನ ಸೀಟಿನ ಮುಂದೆ ಪೆಡಲ್ ನೀಡಲಾಗಿದೆ. ಈ ಪೆಡಲ್‌ಗಳು ಸಾಮಾನ್ಯ ಪೆಡಲ್‌ಗಳಿಗಿಂತ ಭಿನ್ನವಾಗಿವೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಪೆಡಲ್‌ಗಳನ್ನು ಚೈನ್ ಹಾಗೂ ಶಾಫ್ಟ್‌ಗೆ ಜೋಡಿಸಿಲ್ಲ. ಇವು ಸೈಕಲ್‌ನಲ್ಲಿರುವ ಸಾಫ್ಟ್‌ವೇರ್‌ನಿಂದ ಕಂಟ್ರೋಲ್ ಮಾಡಲಾಗುವ ಎಲೆಕ್ಟ್ರಾನಿಕ್ ಪೆಡಲ್‌ಗಳಾಗಿವೆ. ಈ ವಾಹನವನ್ನು ಸುಮಾರು 3 ವರ್ಷಗಳ ಕಾಲ ಅಭಿವೃದ್ಧಿಪಡಿಸಲಾಗಿದೆ.

ಯುರೋಪಿನಲ್ಲಿ ಬಿಡುಗಡೆಯಾಗಿರುವ ಈ ನಾಲ್ಕು ವ್ಹೀಲ್‌ಗಳ ಸೈಕಲ್‌ನ ಬೆಲೆ 7,450 ಯುರೋಗಳಾಗಿದೆ. ಈ ಸೈಕಲ್ ರಿವರ್ಸ್ ಗೇರ್, ಕ್ರೂಸ್ ಕಂಟ್ರೋಲ್, ಕಾರ್ಗೋ ಮೋಡ್, ಆಟೋಮ್ಯಾಟಿಕ್ ಗೇರ್‌ನಂತಹ ಹಲವಾರು ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

70 ಕೆ.ಜಿ ತೂಕವನ್ನು ಹೊಂದಿರುವ ಈ ಸೈಕಲ್‌ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀಗಳಾಗಿದೆ. ಯುರೋಪಿನಲ್ಲಿ ಈ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್ ಹಾಗೂ 3-4 ವ್ಹೀಲ್‌ಗಳನ್ನು ಹೊಂದಿರುವ ಕಾರ್ಗೋ ವಾಹನವೆಂದು ವರ್ಗೀಕರಿಸಲಾಗಿದೆ.

ಇದರನ್ವಯ ಈ ಸೈಕಲ್ ಅನ್ನು ಹೆದ್ದಾರಿ ಹಾಗೂ ಕಾರ್ ಲೇನ್‌ಗಳಲ್ಲಿ ಚಾಲನೆ ಮಾಡಲು ಸಾಧ್ಯವಿಲ್ಲ. ಯುರೋಪಿನ ಸಂಚಾರ ನಿಯಮಗಳ ಪ್ರಕಾರ, ಈ ವಾಹನಕ್ಕೆ ಸೈಕಲ್ ಟ್ರ್ಯಾಕ್ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ಮಾತ್ರ ಸಂಚರಿಸಲು ಅನುಮತಿ ನೀಡಲಾಗಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸಿಟಿಕ್ಯೂ ಸೈಕಲ್, 800 ವ್ಯಾಟ್ ಬ್ಯಾಟರಿ ಹಾಗೂ ಹಿಂದಿನ ವ್ಹೀಲ್‌ಗಳಲ್ಲಿ ಎರಡು 150 ವ್ಯಾಟ್‌ನ ಎಲೆಕ್ಟ್ರಿಕ್ ಮೋಟರ್‌ಗಳನ್ನು ಹೊಂದಿದೆ. ಈ ಸೈಕಲ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 75-100 ಕಿ.ಮೀಗಳವರೆಗೆ ಚಲಿಸಬಹುದು.

ತೂಕವನ್ನು ಕಡಿಮೆಗೊಳಿಸಲು ಈ ಸೈಕಲ್‌ನ ಫ್ರೇಮ್ ಅನ್ನು ಅಲ್ಯೂಮಿನಿಯಂ ಅಲಾಯ್‌ನಿಂದ ತಯಾರಿಸಲಾಗಿದೆ. ಸಿಟಿಕ್ಯೂ ಭಾರತದಲ್ಲಿಯೂ ಈ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಕಂಪನಿಯು ಭಾರತದ ಇತರ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.


Click it and Unblock the Notifications