ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಬಿಡುಗಡೆಗಾಗಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಈಗ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮವನ್ನುಂಟು ಮಾಡಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

ಈ ಚಿತ್ರದ ಟ್ರೈಲರ್ ಮತ್ತೊಮ್ಮೆ ಫೆರಾಟಾ ರೆಕ್ರ್ಯೂಟ್'ಮೆಂಟ್ ಕಾರುಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿವೆ ಎಂಬುದನ್ನು ಸಾಬೀತುಪಡಿಸಿದೆ. ಇದರ ಜೊತೆಗೆ ಈ ಚಿತ್ರದಲ್ಲಿ ಹೊಸ ಕಾರುಗಳ ಜೊತೆಗೆ ಹೆಚ್ಚಿನ ಸಂಖ್ಯೆಯ ಕ್ಲಾಸಿಕ್ ಕಾರುಗಳು ಸಹ ಕಂಡುಬರಲಿವೆ. ಈ ಚಿತ್ರದಲ್ಲಿರುವ ಕ್ಲಾಸಿಕ್ ಕಾರುಗಳ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

2020ರ ಟೊಯೊಟಾ ಸುಪ್ರಾ

ಟೊಯೊಟಾ ಸುಪ್ರಾ ಕ್ಲಾಸಿಕ್ ಸ್ಪೋರ್ಟ್ಸ್ ಕಾರ್ ಆಗಿದ್ದು, ಫಾಸ್ಟ್ ಅಂಡ್ ಫ್ಯೂರಿಯಸ್ ಸರಣಿಯ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ಈ ಬಾರಿಯೂ ಈ ಕಾರು ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

ಈ ಬಾರಿ ಟೊಯೊಟಾ ಸುಪ್ರಾ 2020 ಮಾದರಿ ಕಾರ್ ಅನ್ನು ಬಳಸಲಾಗಿದೆ. ಈ ಕಾರು ತನ್ನ ಪರ್ಫಾಮೆನ್ಸ್ ಮೂಲಕ ಪ್ರೇಕ್ಷಕರನ್ನು ರೋಮಾಂಚನಗೊಳಿಸುವುದು ಖಚಿತ. ಈ ಕಾರನ್ನು ಈ ಹಿಂದೆ ಫಾಸ್ಟ್ ಅಂಡ್ ಫ್ಯೂರಿಯಸ್ - ಟೋಕಿಯೋ ಡ್ರಿಫ್ಟ್ ನಲ್ಲಿ ತೋರಿಸಲಾಗಿತ್ತು.

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

1970ರ ಡಾಡ್ಜ್ ಚಾರ್ಜರ್ ಆರ್ / ಟಿ

ಡಾಡ್ಜ್ ಚಾರ್ಜರ್ ಹಳೆಯ ಕಾರ್ ಆಗಿದ್ದು, ಈ ಕಾರಿನ ಉತ್ಪಾದನೆಯನ್ನು ಈಗ ಸ್ಥಗಿತಗೊಳಿಸಲಾಗಿದೆ. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ವಿನ್ ಡೀಸೆಲ್ ಈ ಕ್ಲಾಸಿಕ್ ಕಾರನ್ನು ಚಾಲನೆ ಮಾಡುವುದನ್ನು ಕಾಣಬಹುದು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

ಈ ಟ್ರೈಲರ್‌ನಲ್ಲಿ 1970ರ ಡಾಡ್ಜ್ ಚಾರ್ಜರ್ ಅನ್ನು ಕಾಣಬಹುದು. ಡಾಡ್ಜ್ ಚಾರ್ಜರ್ ಕಾರಿನ ಪರ್ಫಾಮೆನ್ಸ್ ಹೆಚ್ಚಿಸಲು ಈ ಕಾರಿನಲ್ಲಿ ಸೂಪರ್ ಚಾರ್ಜರ್ ಅನ್ನು ಅಳವಡಿಸಲಾಗಿದೆ.

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

2020ರ ಹೆಲ್‌ಕ್ಯಾಟ್ ಚಾರ್ಜರ್ ವೈಡ್‌ಬಾಡಿ

ಫಾಸ್ಟ್ ಅಂಡ್ ಫ್ಯೂರಿಯಸ್ 9 ಟ್ರೈಲರ್‌ನಲ್ಲಿ ವೀಕ್ಷಕರು ಹೊಸ ಹೆಲ್‌ಕ್ಯಾಟ್ ಚಾರ್ಜರ್‌ ಅನ್ನು ಸಹ ಕಾಣಬಹುದು. ಚಿತ್ರದ ಪ್ರಮುಖ ಪಾತ್ರಧಾರಿ ವಿನ್ ಡೀಸೆಲ್ ಈ ಕಾರನ್ನು ಸಹ ಚಾಲನೆ ಮಾಡುತ್ತಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

2020ರ ಹೆಲ್‌ಕ್ಯಾಟ್ ಚಾರ್ಜರ್ ವಿ 8 ಎಂಜಿನ್‌ ಹೊಂದಿದೆ. ಈ ಎಂಜಿನ್ 650 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಟ್ರೈಲರ್‌ನಲ್ಲಿ ಈ ಕಾರು ಅದರ ಶಮ್ದಾರ್ ಕ್ಲಾಸಿಕ್ ಲುಕ್‌ನಲ್ಲಿ ಕಾಣಿಸುತ್ತದೆ.

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

1974ರ ಶೆವ್ರೊಲೆಟ್ ನೋವಾ ಎಸ್‌ಎಸ್

ಈ ಚಿತ್ರದಲ್ಲಿ ಜೋರ್ಡಾನ್ ಬ್ರೆಸ್ಟ್‌ಸ್ಟರ್ ಮಿಯಾ ಟೊರೆಂಟೊ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರು 1974ರ ಕ್ಲಾಸಿಕ್ ಷೆವರ್ಲೆ ನೋವಾ ಎಸ್‌ಎಸ್ ಕಾರ್ ಅನ್ನು ಚಾಲನೆ ಮಾಡುತ್ತಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

ಶೆವ್ರೊಲೆಟ್ ನೋವಾ ಎಸ್‌ಎಸ್ ಅಮೆರಿಕನ್ ಕ್ಲಾಸಿಕ್ ಕಾರುಗಳ ಇತಿಹಾಸದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ಫಾಸ್ಟ್ ಅಂಡ್ ಫ್ಯೂರಿಯಸ್‌ ಚಿತ್ರದಲ್ಲಿ ಮಾತ್ರವಲ್ಲದೆ ಈ ಕಾರನ್ನು ಡೆತ್ ರೇಸ್‌ನಂತಹ ರೋಚಕ ಆಕ್ಷನ್ ಚಿತ್ರಗಳಲ್ಲಿಯೂ ಕಾಣಬಹುದು.

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

1968ರ ಚಾರ್ಜರ್ 500

ಶೆವ್ರೊಲೆಟ್ ನೋವಾ ಎಸ್ಎಸ್ ಹಾಗೂ ಡಾಡ್ಜ್ ಚಾರ್ಜರ್ ಜೊತೆಗೆ ಈ ಚಿತ್ರದಲ್ಲಿ 1968ರ ವಿಂಟೇಜ್ ಕಾರ್ ಚಾರ್ಜರ್ 500 ಅನ್ನು ಸಹ ಬಳಸಲಾಗಿದೆ. ಡೇಟೋನಾ ಕಾರಿನಿಂದ ಸ್ಫೂರ್ತಿ ಪಡೆದಿರುವ ಈ ಕಾರು 426 ಹೆಮಿ ಎನ್ಎಎಸ್‌ಸಿಎಆರ್ ಚಾರ್ಜರ್ ಎಂಜಿನ್ ಹೊಂದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

2020ರ ಜೀಪ್ ಗ್ಲಾಡಿಯೇಟರ್

ಚಿತ್ರದ ಪಾತ್ರಧಾರಿ ಟೈರಿಸ್ ಗಿಬ್ಸನ್ 2020ರ ಜೀಪ್ ಗ್ಲಾಡಿಯೇಟರ್ ಅನ್ನು ಚಾಲನೆ ಮಾಡುತ್ತಾರೆ. ಈ ಆಫ್ ರೋಡ್ ಎಸ್‌ಯುವಿಯನ್ನು ಎರಡು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

ಮೊದಲನೆಯದಾದ 3.6 ಲೀಟರ್ ಪೆಂಟಾಸ್ಟಾರ್ ವಿ 6 ಎಂಜಿನ್ 285 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, ಎರಡನೇಯದಾದ 3.0 ಲೀಟರ್ ವಿ 6 ಇಕೋಡೀಸೆಲ್ ಎಂಜಿನ್ 260 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

2018ರ ನೋಬಲ್ ಎಂ 600

ನೋಬಲ್ ಎಂ 600 ಸೀಮಿತ ಉತ್ಪಾದನೆಯ ಸೂಪರ್ ಕಾರ್ ಆಗಿದ್ದು ಫೆರಾರಿ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಕಾರನ್ನು ಇಂಗ್ಲೆಂಡಿನ ಲೀಸೆಸ್ಟರ್ ಶೈರ್ ಮೈನ್'ನಲ್ಲಿ ಉತ್ಪಾದಿಸಲಾಗುತ್ತಿದೆ.

ಈ ಸೂಪರ್ ಕಾರ್ ಅನ್ನು ಸ್ಟೀಲ್ ಹಾಗೂ ಕಾರ್ಬನ್ ಫೈಬರ್ ಬಳಸಿ ಉತ್ಪಾದಿಸಲಾಗುತ್ತದೆ. ನೋಬಲ್ ಎಂ 600 ಕಾರಿನಲ್ಲಿ ಟ್ವಿನ್ ಟರ್ಬೋಚಾರ್ಜ್ಡ್ ವಿ 8 ಎಂಜಿನ್ ಅಳವಡಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡ ಕ್ಲಾಸಿಕ್ ಕಾರುಗಳು

2015ರ ಶೆಲ್ಬಿ ಮುಸ್ಟಾಂಗ್ ಜಿಟಿ 350

ಡಬ್ಲ್ಯುಡಬ್ಲ್ಯುಎಫ್ ಖ್ಯಾತಿಯ ಜಾನ್ ಸೆನಾ ಫಾಸ್ಟ್ ಅಂಡ್ ಫ್ಯೂರಿಯಸ್ 9 ನಲ್ಲಿ ನಟಿಸುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಶೆಲ್ಬಿ ಮುಸ್ಟಾಂಗ್ ಜಿಟಿ 350 ಚಾಲನೆ ಮಾಡುವ ಮೂಲಕ ವಿನ್ ಡೀಸೆಲ್ ಕಡೆಯವರಿಗೆ ಪೈಪೋಟಿ ನೀಡಲಿದ್ದಾರೆ.

ಚಿತ್ರ ಕೃಪೆ: ಯೂನಿವರ್ಸಲ್ ಪಿಕ್ಚರ್ಸ್

Most Read Articles

Kannada
English summary
Classic cars seen in Fast and Furious 9 trailer. Read in Kannada.
Story first published: Friday, April 16, 2021, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X