ಅರ್ಥವತ್ತಾದ ಸಂದೇಶ ಸಾರುವ ವ್ಯಂಗ್ಯ ರಸ್ತೆ ಸೂಚನಾ ಫಲಕಗಳು
ಸುರಕ್ಷಿತ ಚಾಲನೆಗಾಗಿ ರಸ್ತೆ ಸಂಚಾರ ಸೂಚನಾ ಫಲಕಗಳನ್ನು ಲಗತ್ತಿಸಲಾಗುತ್ತದೆ. ಆದರೆ ಸಂಯಮದ ಕೊರತೆಯಿರುವ ಚಾಲಕರು ರಸ್ತೆ ಸಂಚಾರ ಫಲಕಗಳ ಸೂಚನೆಗಳನ್ನು ಪಾಲಿಸದೇ ಮನಬಂಂದಂತೆ ವಾಹನ ಚಲಾಯಿಸುತ್ತಾರೆ. ಇದು ಫ್ರಾನ್ಸ್ ನಲ್ಲಿ ಕ್ಲೆಟ್ ಅಬ್ರಹಾಂರಂತಹ ಕಲಾವಿದರಿಗೆ ತಮ್ಮ ಕಲಾ ಸೃಷ್ಟಿಗಳನ್ನು ವಿಶ್ವಕ್ಕೆ ಪರಿಚಯಿಸಲು ಹೇತುವಾಗಿದೆ.
'ಸ್ಟ್ರೀಟ್ ಆರ್ಟ್' ಕಲೆಯಲ್ಲಿ ನಿಪುಣರಾಗಿರುವ ಕ್ಲೆಟ್ ಅಬ್ರಹಾಂ ಯುರೋಪ್ ದೆಲ್ಲೆಡೆ ಬೀದಿಗಳಲ್ಲಿ ತಮ್ಮ ಜಾಣತಣವನ್ನು ಮೆರೆದಿದ್ದಾರೆ. ಇದು ಕಾನೂನಾತ್ಮಕ ಅಲ್ಲದಿದ್ದರೂ ಪೊಲೀಸರ ಸಹಾಯದಿಂದಲೇ ಚಾಲಕರನ್ನು ಎಚ್ಚರಿಸಲು ಸಾಧ್ಯವಾಗಿದೆ. ನೋಡುವಾಗ ವ್ಯಂಗ್ಯ ಮೂಡಿಸುವ ಇಂತಹ ರಸ್ತೆ ಚಿಹ್ನೆಗಳು ಗಂಭೀರವಾದ ಸಂದೇಶಗಳನ್ನು ಸಾರುತ್ತಿರುವುದು ಅಷ್ಟೇ ಸತ್ಯ.

ಮೂಲತ: ಇಟಲಿಯವರಾಗಿರುವ ಫ್ರಾನ್ಸ್ ಕಲಾವಿದ ಕ್ಲೆಟ್ ಅಬ್ರಹಾಂ, ತಮ್ಮ ವ್ಯಂಗ ಚಿತ್ರಕಲೆಯ ಮೂಲಕ ರಸ್ತೆ ಸಂಚಾರದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ಕಲಾವಿದ ಕ್ಲೆಟ್ ಅಬ್ರಹಾಂ ತಮ್ಮ ಮಾತುಗಳಲ್ಲೇ ಹೇಳುವ ಪ್ರಕಾರ, "ತಮ್ಮ ಚಿಹ್ನೆಯನ್ನು ನೋಡಿ ಮುಂದಿನ ಬಾರಿ ಚಾಲಕರು ಕಣ್ಣು ಮುಚ್ಚಿ ಸವಾರಿ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಲಿದ್ದಾರೆ" ಎಂದಿದ್ದಾರೆ.

ಶಿಲುಬೇಗೇರಿಸಿದ ಯೇಸುವಿನ ಸೂಚನಾ ಫಲಕವು ಕೆಲವರಲ್ಲಿ ಕೋಪ ಮೂಡಿಸಿದರೂ ಬಹಳ ಅರ್ಥವತ್ತಾದ ಸಂದೇಶವನ್ನು ಸಾರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಸುಗಮ ಸಂಚಾರಕ್ಕಾಗಿ ನಿಮಯಗಳನ್ನು ರಚಿಸಲಾಗುತ್ತದೆ. ಹಾಗಿರುವಾಗ ಇದನ್ನು ಗಾಳಿಗೆ ತೂರುವುದು ಸಮಂಜಸವಲ್ಲ ಎಂದು ಕ್ಲೆಟ್ ಅಭಿಪ್ರಾಯಪಡುತ್ತಾರೆ.

ನನ್ನ ಸಂದೇಶವನ್ನು ನೋಡಿದ ಹಲವರು ತನ್ನನ್ನು ಮೂರ್ಖರೆಂದು ಭಾವಿಸುತ್ತಾರೆ. ಆದರೆ ಇದನ್ನು ಅರ್ಥ ಮಾಡಿಕೊಂಡ ಜನರಿಗೆ ಗಂಭೀರ ಸಂದೇಶವನ್ನು ರವಾನಿಸಲಾಗುತ್ತದೆ ಎಂದು ವಿವರಿಸುತ್ತಾರೆ.

ಇನ್ನು ಕೆಲವು ಬಾರಿ ನಿಯಮಪಾಲಕರ ಅನುಮತಿಯಿಲ್ಲದೆ ಮಧ್ಯ ರಾತ್ರಿಗಳಲ್ಲಿ ರಸ್ತೆ ಬೀದಿಗಳಿಗೆ ತೆರಳಿ ತಮ್ಮ ವ್ಯಂಗ್ಯ ಚಿತ್ರಗಳನ್ನು ಅಂಟಿಸಿಕೊಂಡಿರುವುದಕ್ಕಾಗಿ ದಂಡನೆಗೊಳಗಾದ ಪ್ರಕರಣವೂ ಎದುರಾಗಿದೆ.

ಬೆಳಗ್ಗೆ ಬಿಡುವಿಲ್ಲದ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಾಗ ಸಂಚಾರಿಗಳಿಗೆ ಕ್ಲೆಟ್ ನಿರ್ಮಿಸಿದ ಅರ್ಥವತ್ತಾದ ಚಿಹ್ನೆಗಳು ದರ್ಶನವಾಗುತ್ತದೆ.

ನೈಜ ರಸ್ತೆ ಚಿಹ್ನೆಗಳಿಗೆ ಹಾನಿಯನ್ನುಂಟು ಮಾಡುವ ಉದ್ದೇಶ ನನ್ನದ್ದಲ್ಲ. ಆದರೆ ನನ್ನದೇ ಸೂಚನೆ ರಚಿಸುವ ಮೂಲಕ ಸಂಚಾರಿಗಳ ಗಮನ ಸೆಳೆದುಕೊಳ್ಳುವುದು ನನ್ನ ಇರಾದೆಯಾಗಿದೆ ಎಂದಿದ್ದಾರೆ.

ಕ್ಲೆಟ್ ವ್ಯಂಗ್ಯ ಸೂಚನಾ ಫಲಕಗಳಿಗೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಈ ನಡುವೆ ಪ್ಯಾರಿಸ್ ಪ್ರದರ್ಶನ ಮೇಳದಲ್ಲೂ ತಮ್ಮ ಸಂದೇಶ ತೋರಿಸುವ ಅವಕಾಶವೂ ದೊರೆದಿತ್ತು.

2010ರ ಇಸವಿಯಿಂದಲೇ ಕ್ಲೆಟ್ ಅಬ್ರಹಾಂ ಚಿತ್ರ ವಿಚಿತ್ರ ರಸ್ತೆ ಸಂಚಾರ ರಚಿಸುವುದರಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.

ಕ್ಲೆಟ್ ನಿರ್ಮಿಸುವ ನೊ ಎಂಟ್ರಿ ಬೋರ್ಡ್ ಗಳು ನಿಜಕ್ಕೂ ಅಮೋಘ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಕೆಲವೇ ನಿಮಿಷಗಳಲ್ಲಿ ರಸ್ತೆ ಚಿಹ್ನೆಗಳನ್ನು ರಚಿಸುವ ಅವರು ತೆಗೆಯಬಹುದಾದ ವಿನೈಲ್ ಸ್ಟಿಕ್ಕರ್ ಗಳನ್ನು ಬಳಕೆ ಮಾಡುತ್ತಾರೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿಯೂ ಅನೇಕ ರಸ್ತೆ ಚಿಹ್ನೆಗಳನ್ನು ಕ್ಲೆಟ್ ನಿರ್ಮಿಸಿರುತ್ತಾರೆ.

ಜಪಾನ್ ನಲ್ಲಿ ತಮ್ಮ ಗೆಳತಿ ರಸ್ತೆ ಟ್ರಾಫಿಕ್ ನಿಯಮ ಉಲ್ಲಂಘನೆಗಾಗಿ ಪೊಲೀಸರಿಂದ ಸೆರೆ ಹಿಡಿಯಲ್ಪಟ್ಟಾಗ ತಮ್ಮ ಪ್ರತಿಭಟನೆ ತೋರ್ಪಡಿಸಲು ಬೆತ್ತಲಾದ ಮಹಿಳೆಯ ನೊ ಎಂಟ್ರಿ ಬೋರ್ಡ್ ರಚಿಸುವ ಮೂಲಕ ಕ್ಲೆಟ್ ಗಮನ ಗಿಟ್ಟಿಸಿಕೊಂಡಿದ್ದರು.

ತಮ್ಮ ಪ್ರತಿಭೆ ಕೇವಲ ಯುರೋಪ್ ಗಷ್ಟೇ ಮೀಸಲಿರಿಸದ ಕ್ಲೆಟ್ ಅಮೆರಿಕದ ಪ್ರಸಿದ್ಧ ನ್ಯೂಯಾರ್ಕ್ ಸಿಟಿ ಮತ್ತು ಜಪಾನ್ ನ ಒಸಕದಲ್ಲೂ ಜಾಣತನ ಮೆರೆದಿದ್ದಾರೆ.

ಕ್ಲೆಟ್ ಅಬ್ರಹಾಂ ಅವರ ಕಲಾ ಸೃಷ್ಟಿಯನ್ನು "ಕಲಾತ್ಮಕ ಉಪನ್ಯಾಸ"ವೆಂದು ಬಿಂಬಿಸಲಾಗುತ್ತಿದೆ.

ತಾನು ಯಾವುದೇ ಸಾಂಪ್ರದಾಯಿಕ ಸ್ಟ್ರೀಟ್ ಆರ್ಟ್ ಸಂಸ್ಕೃತಿಯನ್ನು ಪಾಲಿಸುತ್ತಾ ಬಂದಿಲ್ಲ ಎಂದವರು ತಿಳಿಸುತ್ತಾರೆ.

ನನ್ನದೇ ಆದ ವೈಯಕ್ತಿಕ ಮತ್ತು ಸ್ವತಂತ್ರ ಅಧ್ಯಯನದಿಂದ ರಸ್ತೆ ಸೂಚನಾ ಫಲಕಗಳನ್ನು ರಚಿಸುತ್ತಿದ್ದೇನೆ ಎಂದಿದ್ದಾರೆ.

ತವರೂರಾದ ಫ್ಲೋರನ್ಸ್ ನಲ್ಲಿ ಕ್ಲೆಟ್ ಅಬ್ರಹಾಂ ಅತಿ ಹೆಚ್ಚು ರಸ್ತೆ ಸಂಚಾರ ಸೂಚನಾ ಫಲಕಗಳನ್ನು ಬಳಕೆ ಮಾಡಿದ್ದಾರೆ.

ಬಹುತೇಕ ಸಂದರ್ಭಗಳಲ್ಲಿ ಕ್ರೆಟ್ ಅಬ್ರಹಾಂ ಕೆಲಸವು ವಿಮರ್ಶತ್ಮಾಕ ಮತ್ತು ಪ್ರಚೋದನಕಾರಿಯಾಗಿದೆ.

ಶತಮಾನದಿಂದಲೂ ಸಮಾಜದ ಮೇಲೆ ಧರ್ಮ ಪ್ರಭಾವ ಬೀರಿದೆ. ಹಾಗಾಗಿ ಕೆಲವು ಬಾರಿ ಧರ್ಮದ ಸಂಕೇತಗಳನ್ನೇ ತಮ್ಮ ಸಂದೇಶ ಸಾರಲು ಬಳಕೆ ಮಾಡುತ್ತಾರೆ.

ಕೇವಲ ರಸ್ತೆಗಳಲ್ಲಿ ಮಾತ್ರವಲ್ಲದೆ ಕಟ್ಟಡಗಳಲ್ಲೂ ತಮ್ಮ ಕಲಾ ಸೃಷ್ಟಿಯನ್ನು ಕ್ರೆಟ್ ಮೆರೆದಿದ್ದಾರೆ.

ಟ್ರಾಫಿಕ್ ನಿಯಮಗಳು ಅತಿ ಹೆಚ್ಚು ಉಲ್ಲಂಘನೆಯಾಗುತ್ತಿರುವ ಭಾರತದಲ್ಲೂ ಇಂತಹ ವ್ಯಂಗ್ಯ ಸೂಚನಾ ಫಲಕಗಳನ್ನು ಆಳವಡಿಸಬೇಕಾಗಿರುವುದು ಅನಿವಾರ್ಯವೆನಿಸುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

ಕಾರಿನ ರಿಯರ್ ವ್ಯೂ ಮಿರರ್ ನಲ್ಲಿ ಕ್ಲೆಟ್ ಸಂದೇಶ

ವಿಶ್ವ ಪ್ರಸಿದ್ಧ ಐಫೆಲ್ ಗೋಪುರ

ರಸ್ತೆ ಕಾಮಗಾರಿ

ಸೈಕಲ್ ಸವಾರಿಗೆ ಪ್ರೇರಣೆ

ಹಕ್ಕಿಗಳ ಕಾಟ

ಮಗದೊಂದು ರಸ್ತೆ ಸಂಚಾರ ಸೂಚನಾ ಫಲಕ

ನೊ ಎಂಟ್ರಿ ಬೋರ್ಡ್

ಕಾರು ಸಂದೇಶ

ಸುಮೋ ಗುಸ್ತಿ ಪಟು

ಕಾರು ಸಾವರಿ ವೇಳೆ ಮದ್ಯಪಾನ ಬೇಡ


Click it and Unblock the Notifications








