ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವವೇ ನಲುಗಿಹೋಗಿತ್ತು. ಇದೀಗ ಕೊರೋನಾದ ಹಾವಳಿ ಕಡಿಮೆಯಾಗಿದೆ. ಆದರೆ ಕೊರೋನಾದಿಂದ ಆದ ಬದಲಾವಣೆಗಳು ಮಾತ್ರ ಜನಸಾಮನ್ಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದರ ಬೆನೆಲ್ಲೇ ಬೆಲೆ ಏರಿಕೆ ಹೊರೆಯಲ್ಲಿ ಜನರು ಒದ್ದಾಡುತ್ತಿದ್ದಾರೆ.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಹೊರಗೆ ಕಾಫಿ, ಟೀ ಕುಡಿಯೋಣ ಅಂತ ಹೋಟೆಲ್ ಹೋದರೆ ದುಬಾರಿ. ಮನೆಗೆ ಬೇಕಾದ ಸಾಮಾಗ್ರಿಗಳು ತರಲು ಹೋದರೂ ದುಬಾರಿ, ಹೌದು, ಎಲ್ಲಾ ವಸ್ತುಗಳು ಈಗ ದುಬಾರಿಯಾಗಿದೆ. ಒಟ್ಟಿನಲ್ಲಿ ಜನಸಾಮಾನ್ಯರಿಗೆ ಸಾಲು ಸಾಲು ಬೆಲೆ ಏರಿಕೆ ಶಾಕ್ ಗಳು ಎದುರಾಗುತ್ತಲೇ ಇವೆ. ಇನ್ನೊಂದು ಕಡೆ ನಿರುದ್ಯೋಗ್ಯಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವರು ಹೆಚ್ಚಾಗುತ್ತಿದೆ. ಇಂತವರಿಗೆ ಈ ಮಹಿಳೆ ಸ್ಫೂರ್ತಿಯಾಗಿದೆ. ಅಲ್ಲದೇ ಕೆಜಿಎಫ್ ಸಿನಿಮಾದಲ್ಲಿ ಯಶ್ ಹೇಳುವ ' ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ' ಎಂಬ ಡೈಲಾಂಗ್ ನಿಜ ಜೀವನದಲ್ಲಿ ಈ ತಾಯಿಯೇ ಸಾಕ್ಷಿ

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಕ್ಲೌಡ್‌ಸೆಕ್ ಕಂಪನಿಯ ಸಹಸಂಸ್ಥಾಪಕ ರಾಹುಲ್ ಸಾಸಿ ಎನ್ನುವವರು ಲಿಂಕಡಿನ್​ನಲ್ಲಿ ಬೆಂಗಳೂರಿನ ಮಹಿಳಾ ಉಬರ್ ಡ್ರೈವರೊಬ್ಬರ ಕಥೆಯನ್ನು ಹಂಚಿಕೊಂಡಿದ್ದಾರೆ. ರಾಹುಲ್​ ಅವರ ಸ್ನೇಹಿತರು ಅವರಿಗಾಗಿ ಕ್ಯಾಬ್​ ಬುಕ್ ಮಾಡಿದ್ದರು. ಕಲ ಹೊತ್ತಿನ ಬಳಿಕ ಅವರನ್ನು ಪಿಕ್ ಮಾಡಲು ಮಹಿಳಾ ಡ್ರೈವರ್ ಬಂದರು.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಈ ಉಬರ್ ಕಾರಿನಲ್ಲಿ ಸ್ವಲ್ಪ ದೂರ ಪ್ರಯಾಣಿಸುವಾಗ ಡ್ರೈವರ್ ಸೀಟಿನ ಪಕ್ಕದ ಸೀಟ್ ನಲ್ಲಿ ಮಗುವೊಂದು ಮಲಗಿರುವುದು ಕಂಡಿತು. ಮೇಡಮ್ ಇದು ನಿಮ್ಮ ಮಗಳೇ ಎಂದು ಕೇಳಿದೆ. ಅದಕ್ಕೆ ಆಕೆ, ಹೌದು ಸರ್ ನನ್ನ ಮಗಳೇ. ಈಗ ಅವಳ ಶಾಲೆಗೆ ರಜೆ. ಹಿಗಾಗಿ ನಾನೇ ಅವಳನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಉತ್ತರಿಸಿದರು.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ನಂತರ ಉಬರ್ ಡ್ರೈವರ್ ನಂದಿನಿ ತಮ್ಮ ಕಥೆಯನ್ನು ಹೇಳತೊಡಗಿದರು. ಅವರೊಬ್ಬ ಉದ್ಯಮಿಯಾಗಬೇಕು ಎಂದು ಕನಸನ್ನು ಹೊಂದಿದ್ದರು.ತಮ್ಮ ಉಳಿತಾಯದ ಹಣದಿಂದ ಒಂದು ಫುಡ್​ ಟ್ರಕ್​ ಅನ್ನು ಪ್ರಾರಂಭಿಸಿದ್ದರು. ಆದರೆ ಕೊರೋನಾ ಪರಿಣಾಮದಿಂದ ಆ ಉದ್ಯಮ ಭಾರೀ ನಷ್ಟವನ್ನು ಅನುಭವಿಸಿದರು.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ನಂತರ ಉಬರ್ ಡ್ರೈವರ್ ಆಗಿ​ ಕೆಲಸಕ್ಕೆ ಸೇರಿದರು. ದಿನಕ್ಕೆ 12 ಗಂಟೆಗಳ ಕೆಲಸ. ಆನಂತರ ಕೆಲಸ ಮಾಡುವ ಶಕ್ತಿ ಮನಸ್ಸು ಉಳಿಯುವುದಿಲ್ಲ. ಆದರೆ ಕಳೆದುಕೊಂಡ ಹಣವನ್ನು ಮರುಹೊಂದಿಸುವುದು ಅನಿವಾರ್ಯ ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ ಎಂದರು.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಉಬರ್ ಇಂಡಿಯಾ ಮುಖ್ಯಸ್ಥ ಪ್ರಭಜಿತ್​ ಸಿಂಗ್​ ಅವರು ನಂದಿನಿಗೆ ಹೆಚ್ಚಿನ ಸಹಾಯ ಬೇಕಾದಲ್ಲಿ ಮಾಡುವುದಾಗಿ ತಿಳಿಸಿದ್ದಾರೆ. ರಾಹುಲ್ ಸಾಸಿ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಸಾಕಷ್ಟು ಜನರು ಈ ಸ್ಟೋರಿಯನ್ನು ಶೇರ್ ಮಾಡಿದ್ದಾರೆ.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಇನ್ನು ಆ್ಯಪ್‌ ಆಧಾರಿತ ಆಟೋ ರಿಕ್ಷಾಗಳ ದರ ನಿಗದಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಓಲಾ, ಉಬರ್‌ ಹಾಗೂ ರಾರ‍ಯಪಿಡೋ ಕಂಪನಿಗಳ ಜೊತೆ ರಾಜ್ಯ ಸರ್ಕಾರ ಸಭೆಯನ್ನು ನಡೆಸಿದೆ. ದರ ಹೆಚ್ಚಳ ಕುರಿತಂತೆ ಕಂಪನಿಗಳು ವಿವಿಧ ಬೇಡಿಕೆಗಳನ್ನು ಸಲ್ಲಿಸಿದೆ. ಅವುಗಳನ್ನು ವಿಶ್ಲೇಷಣೆ ಮಾಡಿ ಅಂತಿಮ ದರ ಪಟ್ಟಿಯನ್ನು ನವೆಂಬರ್ 7 ರಂದು ಹೈಕೋರ್ಟ್‌ಗೆ ಸಲ್ಲಿಸಲು ತೀರ್ಮಾನಿಸಲಾಗಿದೆ.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಸಭೆಯಲ್ಲಿ ಆ್ಯಪ್‌ ಆಧಾರಿತ ಕಂಪನಿಯೊಂದು 2 ಕಿ.ಮೀ. ಕನಿಷ್ಠ ದೂರಕ್ಕೆ 100 ರು. ಶುಲ್ಕ ನಿಗದಿ ಮಾಡಬೇಕು. ಆನಂತರ ಪ್ರತಿ ಕಿ.ಮೀ 15 ರೂ. ಇದ್ದು, ಶೇ.30ರಷ್ಟುದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದೆ. ಜೊತೆಗೆ ಹೆಚ್ಚುವರಿ, ಕಾಯುವಿಕೆ, ಬುಕಿಂಗ್‌ ರದ್ದು ಶುಲ್ಕ ವಿಧಿಸಲು ಕಂಪನಿಗಳು ಮನವಿ ಮಾಡಿವೆ.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಆ್ಯಪ್‌ ಆಧರಿತ ಆಟೋಗಳ ಅನಧಿಕೃತ ಸೇವೆ, ಹೆಚ್ಚು ದರ ವಸೂಲಿಗೆ ಸಾರಿಗೆ ಇಲಾಖೆ ಕಡಿವಾಣ ಹಾಕಿತ್ತು. ಇದನ್ನು ಪ್ರಶ್ನಿಸಿ ಓಲಾ, ಉಬರ್‌ ಹೈಕೋರ್ಟ್‌ ಮೊರೆ ಹೋಗಿದ್ದವು. 'ಮುಂದಿನ 15 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು. ಆ್ಯಪ್‌ಗಳ ಆಟೋ ರಿಕ್ಷಾ ಸೇವೆಗೆ ಅನುಮತಿ ನೀಡುವ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿತ್ತು.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನ ಬಹುಮಹಡಿ ಕಟ್ಟಡದ ಸಾರಿಗೆ ಇಲಾಖೆ ಕಚೇರಿಯಲ್ಲಿ ಇಲಾಖೆ ಕಾರ್ಯದರ್ಶಿ ಡಾ. ಎನ್‌.ವಿ. ಪ್ರಸಾದ್‌ ನೇತೃತ್ವದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಎಲ್ಲಾ ಆ್ಯಪ್‌ ಆಧಾರಿತ ಟ್ಯಾಕ್ಸಿ (ಅಗ್ರಿಗೇಟರ್ಸ್‌) ಕಂಪನಿಗಳು, ಸಾರಿಗೆ ಇಲಾಖೆ ಆಯುಕ್ತರು, ಜಂಟಿ ಆಯುಕ್ತರು, ಆಟೋರಿಕ್ಷಾ ಯೂನಿಯನ್‌ಗಳು, ಆಟೋರಿಕ್ಷಾ ಗ್ರಾಹಕರ ಹಿತರಕ್ಷಣಾ ವೇದಿಕೆಗಳು ಭಾಗಿಯಾಗಿದ್ದರು.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಸದ್ಯ ರಾಜ್ಯ ಸರ್ಕಾರ ಆಟೋರಿಕ್ಷಾಗಳಿಗೆ ನಿಗದಿಪಡಿಸಿರುವ ಕನಿಷ್ಠ ದರ 30 ರು., ಅನಂತರ ಪ್ರತಿ ಕಿ.ಮೀ. 15 ರು. ಮೊತ್ತಕ್ಕೆ ಸೇವೆ ನೀಡಲು ಕಷ್ಟವಾಗುತ್ತದೆ. ಆ್ಯಪ್‌ಗಳ ನಿರ್ವಹಣೆ ಸೇರಿದಂತೆ ಇತರೆ ವೆಚ್ಚ ತಗುಲುತ್ತದೆ. ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡುತ್ತೀದೆ.

 ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ: ಕೆಜಿಎಫ್ ಡೈಲಾಗ್‌ಗೆ ಈ ಮಹಿಳೆಯೇ ಸಾಕ್ಷಿ

ಅಲ್ಲದೇ ಚಾಲಕರ ಕಾಯುವಿಕೆ ಅವಧಿ ಇರುತ್ತದೆ. ಕೇಂದ್ರ ಸರ್ಕಾರದ ನಿಯಮಗಳಲ್ಲಿ ದರ ಹೆಚ್ಚಳಕ್ಕೆ ಅವಕಾಶಗಳಿವೆ. ಬೇಡಿಕೆ ಹೆಚ್ಚು (ಪೀಕ್‌ ಅವರ್‌) ಇದ್ದಾಗ ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶ ನೀಡಬೇಕು. ಕಾಯುವಿಕೆ ಶುಲ್ಕಕ್ಕೆ ಅನುಮತಿ ನೀಡಬೇಕು. ಗ್ರಾಹಕ ಬುಕಿಂಗ್‌ ರದ್ದುಗೊಳಿಸಿದಾಗ ದಂಡ ಶುಲ್ಕ ವಿಧಿಸಲು ಅವಕಾಶ ನೀಡಬೇಕು ಎಂದು ಕಂಪನಿಗಳು ಪ್ರತ್ಯೇಕವಾಗಿ ಬೇಡಿಕೆ ಸಲ್ಲಿಸಿದವು.

Article Published On: Thursday, November 3, 2022, 13:51 [IST]
English summary
Cloudsek ceo shares story of woman uber driver from bengaluru details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+