ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.100ರ ಗಡಿ ದಾಟಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದರಿಂದ ಮಧ್ಯಮ ವರ್ಗದ ಗೃಹಿಣಿಯರು ಸಹ ಆತಂಕಕ್ಕೊಳಗಾಗಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದರೆ ಅಗತ್ಯ ವಸ್ತುಗಳ ಬೆಲೆ ಸಹ ಹೆಚ್ಚಾಗುತ್ತದೆ ಎಂಬುದು ಈ ಆತಂಕಕ್ಕೆ ಕಾರಣವಾಗಿದೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಬೇಕೆಂದು ವಾಹನ ಸವಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ. ಆದರೆ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಒಂದೇ ಸಮನೆ ಬೆಲೆ ಏರಿಕೆಯಾಗುತ್ತಿರುವುದರಿಂದ ಜನರು ಪೆಟ್ರೋಲ್, ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ತುಂಬಾ ಕಡಿಮೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಜೊತೆಗೆ ಎಲೆಕ್ಟ್ರಿಕ್ ವಾಹನಗಳು ಪೆಟ್ರೋಲ್, ಡೀಸೆಲ್ ವಾಹನಗಳ ರೀತಿ ಪರಿಸರವನ್ನು ಕಲುಷಿತಗೊಳಿಸುವುದಿಲ್ಲ. ಈಗ ಮಧುರೈನ ಕಾಲೇಜು ವಿದ್ಯಾರ್ಥಿಯಾದ ಧನುಷ್ ಕುಮಾರ್ ಎಂಬುವವರು ಸೌರ ಶಕ್ತಿಯಿಂದ ಚಲಿಸಬಲ್ಲ ಎಲೆಕ್ಟ್ರಿಕ್ ಬೈಕ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಈ ಎಲೆಕ್ಟ್ರಿಕ್ ಬೈಕ್‌ನಲ್ಲಿ ಸೋಲಾರ್ ಪ್ಯಾನೆಲ್'ಗಳನ್ನು ಅಳವಡಿಸಲಾಗಿದೆ. ಇವುಗಳ ಸಹಾಯದಿಂದ ಈ ಎಲೆಕ್ಟ್ರಿಕ್ ಬೈಕ್ 50 ಕಿ.ಮೀಗಳವರೆಗೆ ಚಲಿಸಬಲ್ಲದು. ಪೆಟ್ರೋಲ್ ಬೈಕಿಗೆ ಹೋಲಿಸಿದರೆ ಈ ಎಲೆಕ್ಟ್ರಿಕ್ ಬೈಕಿನ ನಿರ್ವಹಣಾ ವೆಚ್ಚ ತುಂಬಾ ಕಡಿಮೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಈ ಎಲೆಕ್ಟ್ರಿಕ್ ಬೈಕಿನಲ್ಲಿ 50 ಕಿ.ಮೀಗಳವರೆಗೆ ಪ್ರಯಾಣಿಸಲು ಕೇವಲ ರೂ.1.50 ವೆಚ್ಚವಾಗುತ್ತದೆ. ಅಂದರೆ ಒಂದು ಕಿ.ಮೀ ಪ್ರಯಾಣಕ್ಕೆ ಕೇವಲ 0.03 ಪೈಸೆ ಖರ್ಚಾಗುತ್ತದೆ. ಈ ಎಲೆಕ್ಟ್ರಿಕ್ ಬೈಕ್ 30-40 ಕಿ.ಮೀ ವೇಗದಲ್ಲಿ ಚಲಿಸಬಲ್ಲದು.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಮಧುರೈನಂತಹ ನಗರಗಳಲ್ಲಿ ಪ್ರಯಾಣಿಸಲು ಇಷ್ಟು ವೇಗ ಸಾಕು ಎಂದು ವಿದ್ಯಾರ್ಥಿ ಧನುಷ್ ಕುಮಾರ್ ಹೇಳಿದ್ದಾರೆ. ಅವರ ಆವಿಷ್ಕಾರವನ್ನು ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಜನರು ಶ್ಲಾಘಿಸುತ್ತಿದ್ದಾರೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಭಾರತದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಎಲೆಕ್ಟ್ರಿಕ್ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಹಲವು ವಿದ್ಯಾರ್ಥಿಗಳು ಎಲೆಕ್ಟ್ರಿಕ್ ಬೈಕ್'ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ಕೆಲವರು ಪೆಟ್ರೋಲ್ ಬೈಕ್'ಗಳನ್ನೆ ಎಲೆಕ್ಟ್ರಿಕ್ ಬೈಕ್'ಗಳಾಗಿ ಪರಿವರ್ತಿಸಿದ್ದಾರೆ. ಈ ಸಂಶೋಧನೆಗಳು ಭಾರತೀಯ ವಿದ್ಯಾರ್ಥಿಗಳ ಪ್ರತಿಭೆಗೆ ಸ್ಪಷ್ಟ ಉದಾಹರಣೆಗಳಾಗಿವೆ. ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಹಾಯ ಹಾಗೂ ಮಾರ್ಗದರ್ಶನ ದೊರೆತರೆ ಮತ್ತಷ್ಟು ಆವಿಷ್ಕಾರಗಳು ಹೊರ ಹೊಮ್ಮುತ್ತವೆ.

ಸೋಲಾರ್'ನಿಂದ ಚಲಿಸುವ ಬೈಕ್ ಅಭಿವೃದ್ಧಿ ಪಡಿಸಿದ ಕಾಲೇಜು ವಿದ್ಯಾರ್ಥಿ

ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳು ಮಾರಾಟಕ್ಕೆ ಲಭ್ಯವಾಗುತ್ತಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದಂತೆ ಕಚ್ಚಾ ತೈಲ ಆಮದಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ.

Most Read Articles

Kannada
English summary
College student from Madurai develops solar powered electric bike. Read in Kannada.
Story first published: Saturday, July 10, 2021, 18:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X