ಬಡತನದಿಂದ ಬಂದ ಖ್ಯಾತ ನಟ: ದುಬಾರಿ ಕಾರು ಖರೀದಿಸಿ ಬಡ ಮಕ್ಕಳೊಂದಿಗೆ ಸವಾರಿ!

ಸೆಲೆಬ್ರಿಟಿಗಳು ವಾಹನ ಖರೀದಿಸುವುದು ಸಾಮಾನ್ಯ ಸಂಗತಿಯೇ ಆದರೂ, ತಮ್ಮ ನೆಚ್ಚಿನ ನಟ-ನಟಿಯರ ಕಾರುಗಳ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಹೆಚ್ಚಿನ ಆಸಕ್ತಿ ತೋರುತ್ತಾರೆ. ಇತ್ತೀಚೆಗೆ ತಮಿಳು ಸಿನಿಮಾ ಹಾಗೂ ಟಿವಿ ಶೋಗಳ ಮೂಲಕ ಖ್ಯಾತಿ ಗಳಿಸಿರುವ ತಂಗದುರೈ ದುಬಾರಿ ಬಿಎಂಡಬ್ಲ್ಯು ಕಾರು ಖರೀದಿಸಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇದರಲ್ಲೇನಿದೆ ದುಡ್ಡಿದ್ರೆ ಎಲ್ಲರೂ ಖರೀದಿಸುತ್ತಾರೆ ಎಂದೆನಿಸಬಹುದು, ಆದ್ರೆ ಈತ ತಮ್ಮ ಹೊಸ ಕಾರಿನಲ್ಲಿ ಬಡ ಮಕ್ಕಳನ್ನು ಕೂರಿಸಿಕೊಂಡು ಓಡಿಸಿ ಆನಂದಿಸಿದ್ದಾರೆ. ಎಲ್ಲರೂ ಇದನ್ನು ಮಾಡುವುದಿಲ್ಲ, ಆ ಕಷ್ಟದಿಂದ ಬೆಳೆದುಬಂದವರಿಗೆ ಅದರ ಬೆಲೆ ಗೊತ್ತಿರುತ್ತದೆ ಎಂದು ತಂಗದೊರೈ ಹೇಳಿದ್ದಾರೆ.

ತಂಗದುರೈ ವಿಜಯ್ ಟಿವಿಯಲ್ಲಿ ಕಾಣಿಸಿಕೊಳ್ಳುವ ತಮಿಳಿನ ಜನಪ್ರಿಯ ಹಾಸ್ಯನಟ. ಇವರ ಹಳೆಯ ಹಾಸ್ಯಗಳನ್ನು ಪುಸ್ತಕದಲ್ಲೂ ಪ್ರಕಟಿಸಿದ್ದಾರೆ. ಪುಸ್ತಕ ಕೂಡ ತಮಿಳುನಾಡಿನಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಈ ಮಧ್ಯೆ, ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದಾರೆ. ಇದು ಇಲ್ಲಿಗೆ ನಿಲ್ಲದೇ ಅವರ ಪ್ರತಿಭೆ ಚಲನಚಿತ್ರಗಳಲ್ಲಿಯೂ ನಟಿಸುವಂತೆ ಮಾಡಿದೆ.

comedy-actor-thangadurai-buys-bmw-x3-suv

ದುಬಾರಿ ಕಾರು ಖರೀದಿ: ತಂಗದುರೈ ಸದ್ಯ ತಮ್ಮದೇ ಆದ ಬಿಎಂಡಬ್ಲ್ಯು ಎಕ್ಸ್ 3 ಖರೀದಿಸಿದ್ದಾರೆ. ಈ ಕಾರಿನ ಬೆಲೆಯು ರೂ.75 ಲಕ್ಷಗಳಾಗಿದೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಕಾರನ್ನು ಖರೀದಿಸಿದ ಸಂತೋಷವನ್ನು ಅವರು ಆಚರಿಸಿದ ರೀತಿ ಅನೇಕರನ್ನು ಮೆಚ್ಚಿಸಿದೆ.

ತಮ್ಮ ಸುದೀರ್ಘ ಪ್ರಯಾಣದಲ್ಲಿ ಅನೇಕ ಕಷ್ಟಕರ ಕ್ಷಣಗಳನ್ನು ಎದುರಿಸಿದ ನಂತರ, ಕನಸಿನ ಕಾರನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಡ ಮಕ್ಕಳೊಂದಿಗೆ ಈ ಕಾರನ್ನು ಖರೀದಿಸಿದ ಸಂತೋಷವನ್ನು ಆಚರಿಸಲು ಅವರು ಬಯಸಿದ್ದರು. ಕೆಲ ಬಡ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದು ಖುಷಿ ಹಂಚಿಕೊಂಡಿದ್ದಾರೆ. ಯಾವಾಗಲೂ ಜನರ ಪ್ರೀತಿ ಮತ್ತು ಬೆಂಬಲ ಬೇಕು ಎಂದು ಅವರು ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

comedy-actor-thangadurai-buys-bmw-x3-suv

ಕಾರಿನ ವಿಶೇಷತೆಗಳು: ಬಿಎಂಡಬ್ಲ್ಯು ಎಕ್ಸ್ 3 ಎಂಬುದು 5 ಸೀಟರ್ ಎಸ್‌ಯುವಿ ಆಗಿದ್ದು, ಬೆಲೆಯು ರೂ.68.50 ಲಕ್ಷದಿಂದ ರೂ.74.90 ಲಕ್ಷಗಳವರೆಗೆ ಇದೆ. ಇದು ಮೂರು ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಸೇಫ್ಟಿ ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಹೊಂದಿವ ಮೂಲಕ ಸುರಕ್ಷಿತ ಕಾರೆನಿಸಿಕೊಂಡಿದೆ. ಅಲ್ಲದೇ ಒಟ್ಟು 6 ಏರ್ ಬ್ಯಾಗ್‌ಗಳನ್ನು ಒಳಗೊಂಡು ಬರುವ ಪ್ರೀಮಿಯಂ ಕಾರಾಗಿದೆ.

ಈ ಕಾರು ಒಟ್ಟು 6 ಬಣ್ಣಗಳಲ್ಲಿ ಲಭ್ಯವಿದ್ದು, ತಂಗದುರೈ ಫೈಟೊನಿಕ್ ಬ್ಲೂ ಬಣ್ಣವನ್ನು ಆಯ್ಕೆ ಮಾಡಿದ್ದಾರೆ. ಇದು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ, ಆಡಿ ಕ್ಯೂ 5, ವೋಲ್ವೋ ಎಕ್ಸ್ ಸಿ 60, ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಮತ್ತು ಇತರ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ವೈಶಿಷ್ಟ್ಯಗಳು: 360 ಡಿಗ್ರಿ ಕ್ಯಾಮೆರಾ, 3-ಝೋನ್ ಕ್ಲೈಮೆಟ್ ಕಂಟ್ರೋಲ್, ಆಂಬಿಯನ್ಸ್ ಲೈಟಿಂಗ್, 12.3-ಇಂಚಿನ ಫುಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ. ಡಿಸೈನ್ ವಿಷಯಕ್ಕೆ ಬಂದರೆ ಕಾರಿನಲ್ಲಿ ದೊಡ್ಡ ಕಿಡ್ನಿ ಗ್ರಿಲ್ ಹೊಂದಾಣಿಕೆಯ ಎಲ್ಇಡಿ ಹೆಡ್ ಲೈಟ್‌ಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್ ಒದಗಿಸಲಾಗಿದೆ.

ಈ ಎಂಜಿನ್ 188 ಬಿಹೆಚ್‌ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 0-100 ಕಿ.ಮೀ ವೇಗವನ್ನು ಕೇವಲ 7.9 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಎಂಜಿನ್ ನೊಂದಿಗೆ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಒಟ್ಟಾರೆ ಬಿಎಂಡಬ್ಲ್ಯು ಲೈನ್‌ಅಪ್‌ನಲ್ಲಿ ಈ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಕಾರೆನಿಸಿಕೊಂಡಿದೆ.

More from DriveSpark

Article Published On: Friday, July 26, 2024, 12:10 [IST]
English summary
Comedy actor thangadurai buys bmw x3 suv
Read more on celebrity car off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+