ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಹಲವು ದಶಕಗಳ ಹಿಂದೆ ಬಿಡುಗಡೆಯಾಗುತ್ತಿದ್ದ ಕಾರುಗಳು ಸೀಮಿತ ಸಂಖ್ಯೆಯ ಫೀಚರ್ ಗಳನ್ನು ಹೊಂದಿರುತ್ತಿದ್ದವು. ತಂತ್ರಜ್ಞಾನ ಬೆಳೆದಂತೆಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಹೊಸ ಹೊಸ ಫೀಚರ್ ಗಳನ್ನು ಅಳವಡಿಸಿ ಬಿಡುಗಡೆಗೊಳಿಸುತ್ತಿವೆ. ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಹೆಚ್ಚು ಫೀಚರ್ ಗಳನ್ನು ಅಳವಡಿಸಲಾಗಿರುತ್ತದೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಕಾರು ತಯಾರಕ ಕಂಪನಿಗಳು ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ವಿನೂತನ ಫೀಚರ್ ಗಳನ್ನು ಅಳವಡಿಸುತ್ತವೆ. ಬಹುತೇಕ ಎಲ್ಲಾ ಕಾರು ತಯಾರಕ ಕಂಪನಿಗಳು ಆರ್ ಅಂಡ್ ಡಿ ಘಟಕಗಳನ್ನು ಹೊಂದಿರುತ್ತವೆ. ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ಸೆನ್ಸಾರ್‌ಗಳನ್ನು ನೀಡಲಾಗುತ್ತದೆ. ಈ ಲೇಖನದಲ್ಲಿ ವಿಶ್ವದಾದ್ಯಂತ ಮಾರಾಟವಾಗುವ ಕಾರುಗಳಲ್ಲಿ ಹೆಚ್ಚಾಗಿ ಬಳಸುವ 5 ಸೆನ್ಸಾರ್‌ಗಳು ಯಾವುವು ಎಂಬುದನ್ನು ನೋಡೋಣ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಆಕ್ಸಿಜನ್ ಸೆನ್ಸಾರ್

ಆಕ್ಸಿಜನ್ ಸೆನ್ಸಾರ್‌ಗಳು ಕಾರುಗಳ ಎಂಜಿನ್ ಕಾರ್ಯಾಚರಣೆಗೆ ಪ್ರಮುಖವಾಗಿವೆ. ಆಕ್ಸಿಜನ್ ಸರಿಯಾಗಿ ಲಭ್ಯವಿಲ್ಲದಿದ್ದಾಗ ಕೆಲವು ಕಾರುಗಳ ಇಂಜಿನ್ ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ. ಈ ಸಮಸ್ಯೆಯನ್ನು ಸರಿಪಡಿಸಲು ಆಕ್ಸಿಜನ್ ಸೆನ್ಸಾರ್‌ಗಳನ್ನು ಕಂಡು ಹಿಡಿಯಲಾಯಿತು.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಸಾಮಾನ್ಯವಾಗಿ ಈ ಸೆನ್ಸಾರ್‌ಗಳನ್ನು ಕಾರಿನ ಮುಂಭಾಗದಲ್ಲಿ ಎಕ್ಸಾಸ್ಟ್ ಪೈಪ್ ಬೇರ್ಪಡಿಸುವ ಪ್ರದೇಶದಲ್ಲಿ ಅಳವಡಿಸಲಾಗುತ್ತದೆ. ಕಾರಿನ ಎಕ್ಸಾಸ್ಟ್ ಪೈಪ್ ಸ್ವೀಕರಿಸುವ ಆಕ್ಸಿಜನ್ ಪ್ರಮಾಣ ಹಾಗೂ ಕಾರಿನ ಹೊರಗಿನ ಆಕ್ಸಿಜನ್ (O2) ಪ್ರಮಾಣವನ್ನು ಹೋಲಿಸುವ ಮೂಲಕ ಈ ಸೆನ್ಸಾರ್‌ಗಳು ನಿಯಮಿತವಾಗಿ ಎಂಜಿನ್‌ಗೆ ಆಕ್ಸಿಜನ್ ಮಟ್ಟವನ್ನು ಸರಿ ಹೊಂದಿಸಲು ನೆರವಾಗುತ್ತವೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಹೆಚ್ಚುವರಿ ಗಾಳಿ ಹರಿವಿನ ಸೆನ್ಸಾರ್‌

MAF ಎಂಬ ಹೆಚ್ಚುವರಿ ಏರ್ ಫ್ಲೋ ಸೆನ್ಸಾರ್‌ಗಳನ್ನು ಏರ್ ಫಿಲ್ಟರ್ ಬಳಿ ಅಳವಡಿಸಲಾಗಿರುತ್ತದೆ. ಈ ಸೆನ್ಸಾರ್ ಅಸಮರ್ಪಕವಾಗಿದ್ದರೆ ಕಾರು ತಕ್ಷಣವೇ ನಿಂತು ಹೋಗುತ್ತದೆ. ಒಂದು ವೇಳೆ ಪೆಟ್ರೋಲ್ ಕಾರ್ ಆಗಿದ್ದರೆ, ಕಾರು ಹೆಚ್ಚು ಪೆಟ್ರೋಲ್ ಅನ್ನು ಹೀರಿ ಕೊಳ್ಳುತ್ತದೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಒಂದು ವೇಳೆ ಮುರಿದು ಹೋದರೆ ರೆಡ್ ಲೈಟ್ ಆನ್ ಆಗುತ್ತದೆ. ಆಟೋ ಮೊಬೈಲ್ ಉದ್ಯಮದಲ್ಲಿ MAF ಸೆನ್ಸಾರ್‌ ಅನ್ನು ಸಹ ಒಂದು ಪ್ರಮುಖ ಸೆನ್ಸಾರ್ ಎಂದು ಪರಿಗಣಿಸಲಾಗುತ್ತದೆ. ಈ ಸೆನ್ಸಾರ್ ಎಂಜಿನ್ ಸಿಸ್ಟಂಗೆ ಎಷ್ಟು ಗಾಳಿ ಹೋಗಬೇಕು ಎಂಬುದನ್ನು ನಿರ್ಧರಿಸುತ್ತದೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಎಂಜಿನ್ ಸ್ಪೀಡ್ ಸೆನ್ಸಾರ್

ಎಂಜಿನ್ ಸ್ಪೀಡ್ ಸೆನ್ಸಾರ್ ಕಾರುಗಳಲ್ಲಿರುವ ಮತ್ತೊಂದು ಸೆನ್ಸಾರ್ ಆಗಿದೆ. ಕ್ರ್ಯಾಂಕ್ಶಾಫ್ಟ್ ಮೇಲೆ ಅಳವಡಿಸಲಾಗಿರುವ ಎಂಜಿನ್ ಸ್ಪೀಡ್ ಸೆನ್ಸಾರ್‌ನ ಪ್ರಮುಖ ಕಾರ್ಯವೆಂದರೆ ಕ್ರ್ಯಾಂಕ್ ಶಾಫ್ಟ್ ನ ವೇಗವನ್ನು ಪತ್ತೆ ಮಾಡುವುದು.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಕ್ರ್ಯಾಂಕ್ಶಾಫ್ಟ್'ನ ವೇಗವನ್ನು ಅವಲಂಬಿಸಿ ಎಂಜಿನ್ ವೇಗ ಹಾಗೂ ಇಂಧನ ವಿತರಣೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸಲಾಗುತ್ತದೆ. ಈ ಸೆನ್ಸಾರ್ ಅಸಮರ್ಪಕವಾಗಿದ್ದರೆ, ಕಾರಿನ ಕ್ರೂಸ್ ಕಂಟ್ರೋಲ್‌ನಲ್ಲಿ ಸಮಸ್ಯೆ ಉಂಟಾಗುತ್ತದೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಮಲ್ಟಿಪಲ್ ಕಂಪ್ಲೀಟ್ ಪ್ರೆಷರ್ ಸೆನ್ಸಾರ್

ಮಲ್ಟಿಪಲ್ ಕಂಪ್ಲೀಟ್ ಪ್ರೆಷರ್ ಸೆನ್ಸಾರ್ ಅನ್ನು MCP ಸೆನ್ಸಾರ್ ಎಂದು ಕರೆಯಲಾಗುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ ಎಂಜಿನ್ ಸಿಸ್ಟಂ ಮೇಲೆ ಬೀಳುವ ಒತ್ತಡವನ್ನು ವಿವಿಧ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವುದು ಈ ಸೆನ್ಸಾರ್'ನ ಪ್ರಮುಖ ಕಾರ್ಯವಾಗಿದೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಈ ಸೆನ್ಸಾರ್ ಪಡೆಯುವ ಮಾಹಿತಿಯ ಆಧಾರದ ಮೇಲೆ ಎಂಜಿನ್ ಕಾರ್ಯಕ್ಷಮತೆಗಾಗಿ ಇಂಧನ ಅನುಪಾತಗಳನ್ನು ಸುಧಾರಿಸಲು ಬಳಸಲಾಗುತ್ತದೆ. ಮಲ್ಟಿಪಲ್ ಕಂಪ್ಲೀಟ್ ಪ್ರೆಷರ್ ಸೆನ್ಸಾರ್ ಪ್ರಮುಖ ಕಾರ್ ಸೆನ್ಸಾರ್‌ಗಳಲ್ಲಿ ಒಂದಾಗಿದೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಟೆಂಪರೇಚರ್ ಸೆನ್ಸಾರ್

ಈ ಸೆನ್ಸಾರ್ ಹೆಸರಿಗೆ ತಕ್ಕಂತೆ ಎಂಜಿನ್ ಕೂಲರ್‌ನ ತಾಪಮಾನವನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ಸೆನ್ಸಾರ್ ಪಡೆಯುವ ವಿವರಗಳನ್ನು ಎಂಜಿನ್ ಸಿಸ್ಟಂ ಕೂಲಿಂಗ್ ವ್ಯವಸ್ಥೆಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಹೆಚ್ಚಾಗಿ ಕೂಲರ್‌ನಲ್ಲಿರುವ ಫ್ಯಾನ್ ಈ ಸೆನ್ಸಾರ್ ಮೇಲೆ ಅವಲಂಬಿತವಾಗಿರುತ್ತದೆ. ಈ ಸೆನ್ಸಾರ್ ಅಸಮರ್ಪಕವಾಗಿದ್ದರೆ, ಕೂಲರ್ ಸ್ಥಗಿತಗೊಳ್ಳುತ್ತದೆ. ನಂತರ ಕಾರುಚಾಲನೆಯಲ್ಲಿರುವಾಗ ಎಂಜಿನ್‌ನ ಉಷ್ಣತೆಯು ಹೆಚ್ಚುತ್ತಲೇ ಇರುತ್ತದೆ. ಇದರಿಂದ ಕಾರು ಬೆಂಕಿಗಾಹುತಿಯಾಗುವ ಸಾಧ್ಯತೆಗಳಿರುತ್ತವೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಈ ಮೇಲೆ ತಿಳಿಸಿದ ಎಲ್ಲಾ ಸೆನ್ಸಾರ್'ಗಳು ಕಾರುಗಳು ಹೊಂದಿರಬೇಕಾದ ಪ್ರಮುಖ ಐದು ಸೆನ್ಸಾರ್'ಗಳಾಗಿವೆ. ಇವುಗಳಲ್ಲಿ ಯಾವುದಾದರೂ ಒಂದು ಅಸಮರ್ಪಕವಾಗಿದ್ದರೆ ತಕ್ಷಣವೇ ಕಾರ್ ಅನ್ನು ಹತ್ತಿರದ ಸರ್ವೀಸ್ ಸೆಂಟರಿಗೆ ಕೊಂಡೊಯ್ದು ಸರಿ ಪಡಿಸಿ.ಸಮಯಕ್ಕೆ ಸರಿಯಾಗಿ ಸರಿ ಪಡಿಸದೇ ಇದ್ದರೆ ರಸ್ತೆ ಅಪಘಾಗಳಾಗಬಹುದು. ವಿಶ್ವದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. 2020 ರಲ್ಲಿ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸುಮಾರು 1.20 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಕಾರುಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಸೆನ್ಸಾರ್‌ಗಳಿವು

ಕೆಲವೊಮ್ಮೆ ಕಾರು ಐಡ್ಲಿಂಗ್'ನಲ್ಲಿರುವಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ. ಕಾರು ಐಡ್ಲಿಂಗ್'ನಲ್ಲಿರುವಾಗ ಕಾರುಗಳಲ್ಲಿರುವ ಎಸಿಗಳು ಕಾರ್ಯ ನಿರ್ವಹಿಸದೇ ಇರಲು ಕಾರಣಗಳೇನು ಎಂಬುದನ್ನು ನೋಡುವುದಾದರೆ,ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯನಿರ್ವಹಿಸದೇ ಇದ್ದರೆ ಮೊದಲು ಕಂಡೆನ್ಸರ್‌ನಲ್ಲಿರುವ ಕೂಲಿಂಗ್ ಫ್ಯಾನ್ ಅನ್ನು ಗಮನಿಸಿ. ಈ ಫ್ಯಾನ್ ಹಾನಿಗೊಳಗಾಗಿದ್ದರೆ ಕಂಡೆನ್ಸರ್ ಮೂಲಕ ಫ್ರೀಯಾನ್‌ನಿಂದ ಬರುವ ಶಾಖವನ್ನು ತಣ್ಣಗಾಗಿಸಲು ಸಾಧ್ಯವಾಗುವುದಿಲ್ಲ.ಕಾರು ವೇಗವಾಗಿ ಹೋಗುತ್ತಿರುವಾಗ, ಫ್ರೀಯಾನ್ ಅನ್ನು ತಂಪಾಗಿಸಲು ಕಂಡೆನ್ಸರ್'ಗೆ ಫ್ಯಾನ್ ಅಗತ್ಯವಿಲ್ಲ. ಏಕೆಂದರೆ ಸಾಕಷ್ಟು ಗಾಳಿಯು ಪಾಸ್ ಆಗುತ್ತದೆ. ಆದರೆ ಕಾರು ಐಡ್ಲಿಂಗ್'ನಲ್ಲಿದ್ದಾಗ ಫ್ರೀಯಾನ್ ಅನ್ನು ತಂಪಾಗಿಡಲು ಕಂಡೆನ್ಸರ್ ಫ್ಯಾನ್ ಅವಶ್ಯಕವಾಗಿದೆ.ಫ್ರೀಯಾನ್ ಪ್ರಮಾಣವು ಕಡಿಮೆಯಾಗಿದ್ದರೂ ಸಹ, ಕಾರು ಐಡ್ಲಿಂಗ್'ನಲ್ಲಿದ್ದಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ.ಕಾರು ವೇಗವಾಗಿ ಸಾಗುವಾಗ ಕಂಪ್ರೆಸರ್ ಫ್ರೀಯಾನ್ ಅನ್ನು ಸುಲಭವಾಗಿ ಪಂಪ್ ಮಾಡುತ್ತದೆ. ಆದರೆ ಕಾರು ಐಡ್ಲಿಂಗ್'ನಲ್ಲಿದ್ದಾಗ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.

Most Read Articles

Kannada
English summary
Common sensors used in cars and their functions details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X