ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚುತ್ತಿದೆ. ಇತ್ತೀಚಿಗೆ ಪೆಟ್ರೋಲ್ ಬೈಕುಗಳನ್ನು ಎಲೆಕ್ಟ್ರಿಕ್ ಬೈಕುಗಳಾಗಿ ಪರಿವರ್ತಿಸುತ್ತಿರುವ ಟ್ರೆಂಡ್ ಹೆಚ್ಚುತ್ತಿದೆ. ಯೂಟ್ಯೂಬ್‌ನಲ್ಲಿ ಪೆಟ್ರೋಲ್ ಬೈಕುಗಳನ್ನು ಎಲೆಕ್ಟ್ರಿಕ್ ಬೈಕುಗಳಾಗಿ ಬದಲಿಸುವ ಹಲವಾರು ವೀಡಿಯೊಗಳಿವೆ.

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಈ ಇಂಟರ್ ನೆಟ್ ಯುಗದಲ್ಲಿ ಎಲ್ಲಾ ರೀತಿಯ ಟ್ಯುಟೋರಿಯಲ್'ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿರುತ್ತವೆ. ಶಿಕ್ಷಣ ಕ್ಷೇತ್ರವೇ ಆಗಿರಲಿ, ದೈನಂದಿನ ಜೀವನಕ್ಕೆ ಸಂಬಂಧಿಸಿದ್ದೇ ಆಗಿರಲಿ ಎಲ್ಲಾ ವಿಷಯಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಕಾಣಬಹುದು.

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಯೂಟ್ಯೂಬ್‌ನಲ್ಲಿರುವ ವೀಡಿಯೊಗಳು ಅತ್ಯಂತ ಕಠಿಣ ಕಾರ್ಯಗಳನ್ನು ಸಹ ಸುಲಭಗೊಳಿಸುತ್ತವೆ. ಆನ್‌ಲೈನ್ ವೀಡಿಯೊ ನೋಡಿ ಎಲೆಕ್ಟ್ರಿಕ್ ಬೈಕ್ ತಯಾರಿಸುವುದು ಜನರು ಅಂದುಕೊಂಡಷ್ಟು ಕಷ್ಟವಲ್ಲ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ನೀವು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದರೆ ಅಥವಾ ನೀವು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರೆ ಈ ಸುದ್ದಿ ನಿಮಗೆ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಜೇಮ್ಸ್ ಬಿಗ್ಗರ್ ಎಂಬುವವರು ಯೂಟ್ಯೂಬ್‌ನಲ್ಲಿ ವೀಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದಾರೆ.

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಈ ವೀಡಿಯೊದಲ್ಲಿ ಎಲೆಕ್ಟ್ರಿಕ್ ಬೈಕ್ ತಯಾರಿಸುವ ಪೂರ್ಣ ಪ್ರಕ್ರಿಯೆಯನ್ನು ವಿವರವಾಗಿ ತೋರಿಸಲಾಗಿದೆ. ಈ ಮೆಕಾನಿಕಲ್ ಯೋಜನೆಗಳಲ್ಲಿ ಕಂಪ್ಯೂಟರ್ ಏಡೆಡ್ ಡಿಸೈನ್ (ಸಿಎಡಿ) ಫೈಲ್‌ಗಳ ಪಾತ್ರ ಪ್ರಮುಖವಾಗಿರುತ್ತದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಸಿಎಡಿ ಫೈಲ್‌ಗಳ ಸಹಾಯದಿಂದ, ಬೈಕ್ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿದುಕೊಳ್ಳುವ ಮೂಲಕ ಸುಲಭವಾಗಿ ಬೈಕ್ ತಯಾರಿಸಬಹುದು. ಸಿಎಡಿ ಅಂದರೆ ಕಂಪ್ಯೂಟರ್ ಏಡೆಡ್ ಡಿಸೈನ್ ಸಹಾಯದಿಂದ ಸುಲಭವಾಗಿ ಬೈಕ್‌ ವಿನ್ಯಾಸ ಮಾಡಬಹುದು.

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಈ ರೀತಿ ಬೈಕ್ ವಿನ್ಯಾಸ ಮಾಡುವ ಹಲವು ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಈ ಇಂಟರ್ ನೆಟ್ ಯುಗದಲ್ಲಿ ಸಿಎಡಿ ಹಾಗೂ ಟ್ಯುಟೋರಿಯಲ್ ವೀಡಿಯೊಗಳು ಹೆಚ್ಚು ಸಹಾಯಕವಾಗುತ್ತವೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ರಿನಿವೆಬಲ್ ಸಿಸ್ಟಂ ಟೆಕ್ನಾಲಜಿ ಹೆಸರಿನ ವೆಬ್‌ಸೈಟ್‌ನಲ್ಲಿ ಎಲೆಕ್ಟ್ರಿಕ್ ಬೈಕ್'ಗಳನ್ನು ತಯಾರಿಸಲು ಸಿಎಡಿ ಫೈಲ್‌ಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗೀ 10 ಡಾಲರ್‌ಗಳನ್ನು ಪಾವತಿಸಬೇಕಾಗುತ್ತದೆ.

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಅಂದರೆ ಈ ಸಿಎಡಿ ಫೈಲ್‌ ಪಡೆಯಲು ಸುಮಾರು 724 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ವೀಡಿಯೊದಲ್ಲಿ ಈ ಫೈಲ್‌ಗಳ ಸಹಾಯದಿಂದ ಎಲೆಕ್ಟ್ರಿಕ್ ಬೈಕ್ ತಯಾರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಕಾಣಬಹುದು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಈ ವೀಡಿಯೊದಲ್ಲಿ ತಯಾರಿಸಲಾದ ಬೈಕಿನ ಒಟ್ಟು ತೂಕ 91 ಕೆ.ಜಿಗಳಾಗಿದೆ. ಈ ಎಲೆಕ್ಟ್ರಿಕ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 120 ಕಿ.ಮೀಗಳಾಗಿದೆ. ಈ ಬೈಕ್ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 150 ಕಿ.ಮೀಗಳವರೆಗೆ ಚಲಿಸುತ್ತದೆ.

ಸ್ವಂತವಾಗಿ ಎಲೆಕ್ಟ್ರಿಕ್ ಬೈಕ್ ತಯಾರಿಸಲು ನೆರವಾಗುತ್ತವೆ ಈ ಕಂಪ್ಯೂಟರ್ ಏಡೆಡ್ ಡಿಸೈನ್ ಫೈಲ್‌ಗಳು

ಈ ಬೈಕಿನಲ್ಲಿ 72 ವಿ ಸಾಮರ್ಥ್ಯದ ಬ್ರಷ್ ಲೆಸ್ ಗೇರ್ ಲೆಸ್ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಈ ವೀಡಿಯೊದಲ್ಲಿ ನೀಡಲಾದ ಮಾಹಿತಿಯ ಪ್ರಕಾರ ಈ ಬೈಕ್ ತಯಾರಿಕೆಗೆ ಅವಶ್ಯವಿರುವ ಘಟಕಗಳನ್ನು ಖರೀದಿಸುವ ಬಗ್ಗೆಯೂ ಮಾಹಿತಿ ಪಡೆಯಬಹುದು.

ಚಿತ್ರ ಕೃಪೆ: ಜೇಮ್ಸ್ ಬಿಗ್ಗರ್

Most Read Articles

Kannada
English summary
Computer Aided Design files makes electric bike manufacturing easier. Read in Kannada.
Story first published: Wednesday, June 2, 2021, 17:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X