40 ಲಕ್ಷ ದುಬಾರಿಯ ಆಡಿ ಕಾರು ಕದ್ದ ಚೋರ ಪೊಲೀಸ್ ಬಲೆಗೆ
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆಡಿ ಕಾರು ಕದ್ದ ಚೋರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ನಕಲಿ ವೈದ್ಯನ ರೂಪದಲ್ಲಿ ಐಷಾರಾಮಿ ಕಾರು ಡೀಲರ್ ಶಿಪ್ ವೊಂದಕ್ಕೆ ತೆರಳಿ ಟೆಸ್ಟ್ ಡ್ರೈವ್ ಮಾಡುವುದಾಗಿ ಅಧಿಕೃತರನ್ನು ನಂಬಿಸಿದ ಚೋರ 40 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಲಗ್ಷುರಿ ಕಾರನ್ನು ಎಗರಿಸಿದ ಘಟನೆ ವರದಿಯಾಗಿದೆ. ಆದರೆ ಪೊಲೀಸರ ಸಮಯೋಚಿತವಾಗಿ ಕಾರ್ಯಾಚರಣೆಯ ಫಲವಾಗಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೈದರಾಬಾದ್ ನ ಆಡಿ ಡೀಲರ್ ಶಿಪ್ ನಲ್ಲಿ ಘಟನೆ ನಡೆದಿದೆ. ಇಲ್ಲಿಗೆ ವೈದ್ಯನ ರೂಪದಲ್ಲಿ ತಲುಪಿದ ವ್ಯಕ್ತಿಯೋರ್ವ ಟೆಸ್ಟ್ ಡ್ರೈವ್ ಮಾಡಲು ಉತ್ಸುಕತೆ ತೋರಿದ್ದರು.

ಎಸ್ ವೆಂಕಟ ರಾಮಣ್ಣ ಎಂಬಾತನೇ ತಪ್ಪಿತ್ತಸ್ಥ ವ್ಯಕ್ತಿ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಈತ 23ರಷ್ಟು ಕೇಸುಗಳಲ್ಲಿ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ.

ಆಂಧ್ರ ಪ್ರದೇಶ ಹೊರತಾಗಿ ಕರ್ನಾಟಕ, ತೆಲಂಗಾಣ, ಗುಜರಾತ್, ರಾಜಸ್ತಾನ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲೂ ರಾಮಣ್ಣ ವಿರುದ್ಥ ಪ್ರಕರಣ ದಾಖಲಾಗಿದೆ.

ಅಷ್ಟೇ ಯಾಕೆ ಈ ಕುಖ್ಯಾತ ಚೋರನ ಮೇಲೆ ಆರರಷ್ಟು ಜಾಮೀನು ರಹಿತ ವಾರೆಂಟ್ ಸಹ ದಾಖಲಾಗಿದೆ. ಹಾಗಿರುವಾಗ ಜರ್ಮನಿಯ ಐಷಾರಾಮಿ ಡೀಲರ್ ಶಿಪ್ ಬಳಿ ತೆರಳಿ ವಂಚಿಸುವ ಪ್ರಯತ್ನ ಮಾಡಿದ್ದಾನೆ.

ಬಳಿಕ ನಡೆಸಿದ ತೀವ್ರ ತನಿಖೆಯಲ್ಲಿ ತಾನು 40ರಷ್ಟು ಕಾರುಗಳನ್ನು ಇದುವರೆಗೆ ಅಪಹರಿಸಿರುವುದಾಗಿ ರಾಮಣ್ಣ ತಪ್ಪೊಪ್ಪಿಕೊಂಡಿದ್ದಾರೆ.

ನ್ಯಾಯಾಲಕಕ್ಕೆ ವಿಚಾರಣೆಗಾಗಿ ಪೊಲೀಸ್ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಎರಡು ಬಾರಿ ಪಲಾಯನ ಮಾಡಿರುವ ಈತ ಇನ್ನು ಹಲವಾರು ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿದ್ದರು.

ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಶಿಪ್ ಗೆ ತೆರಳಿ 40 ಲಕ್ಷ ರುಪಾಯಿಗಳಷ್ಟು ಬೆಲೆ ಬಾಳುವ ಆಡಿ ಕ್ಯೂ3 ಕಾರನ್ನು ಖರೀದಿಸುವ ಇರಾದೆ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ವಿವರಿಸುತ್ತಾರೆ.

ಅಪೊಲೊ ಆಸ್ಪತ್ರೆಯಲ್ಲಿ ಡಾಕ್ಟರ್ ಗೌತಂ ರೆಡ್ಡಿ ಎಂಬುದಾಗಿ ನಂಬಿಸಿದ್ದ ಈತ ಟೆಸ್ಟ್ ಡ್ರೈವ್ ಗಾಗಿ ಮನವೊಳಿಸಿದ್ದ. ಬಳಿಕ ಕಾರು ಶೋ ರೂಂ ತಲುಪುತ್ತಿದ್ದಂತೆಯೇ ಸಹದ್ಯೋಗಿಗಳಿಗೆ ಕಾರನ್ನು ತೋರಿಸಿಕೊಡುವುದಾಗಿ ತಿಳಿಸಿ ಡೀಲರ್ ವ್ಯಕ್ತಿಯನ್ನು ಕಾರಿನಿಂದ ಹೊರಗಿಳಿಯಲು ಒತ್ತಾಯಿಸಿದ್ದರು.

ಡೀಲರ್ ವ್ಯಕ್ತಿ ಹೊರಗಿಳಿಯುತ್ತಿದ್ದಂತೆಯೇ ನಕಲಿ ವೈದ್ಯ ಕಾರಿನೊಂದಿಗೆ ಜಾಗ ಖಾಲಿ ಮಾಡಿದ್ದರು.

ಆದರೆ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.


Click it and Unblock the Notifications








