ಕಾರಿನ ದೋಷ ಸರಿಪಡಿಸುವಲ್ಲಿ ವಿಫಲ: ರೂ.26 ಲಕ್ಷ ಪರಿಹಾರ ನೀಡುವಂತೆ ಬಿಎಂಡಬ್ಲ್ಯುಗೆ ಕೋರ್ಟ್ ಆದೇಶ

ಯಾವುದೇ ಸರಕುಗಳನ್ನು ಖರೀದಿಸುವ ಮತ್ತು ಯಾವುದೇ ಸರ್ವೀಸ್‌ ಅನ್ನು ಪಡೆಯುವ ವ್ಯಕ್ತಿ ಗ್ರಾಹಕ ಎಂದು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರಡಿ ವ್ಯಾಖ್ಯಾನಿಸಲಾಗಿದೆ. ಇದು ಎಲೆಕ್ಟ್ರಾನಿಕ್ ವಿಧಾನಗಳು, ಟೆಲಿಶಾಪಿಂಗ್, ನೇರ ಮಾರಾಟ ಅಥವಾ ಬಹು ಮಟ್ಟದ ಮಾರ್ಕೆಟಿಂಗ್‌ನಿಂದ ಆನ್‌ಲೈನ್ ಮತ್ತು ಆಫ್‌ಲೈನ್ ವಹಿವಾಟುಗಳನ್ನು ಕೂಡ ಒಳಗೊಂಡಿದೆ.

ಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಗ್ರಾಹಕನಿಗೆ ಜೀವನಕ್ಕೆ ಅಪಾಯಕಾರಿಯಾದ ಸರಕು ಮತ್ತು ಸೇವೆಗಳಿಂದ ರಕ್ಷಣೆ ಪಡೆಯುವ ಹಕ್ಕು, ಸರಕು ಮತ್ತು ಸೇವೆಗಳ ಬಗ್ಗೆ ತಿಳಿಸುವ ಹಕ್ಕು, ಸರಕು ಮತ್ತು ಸೇವೆಗಳ ಗುಣಮಟ್ಟದ ಬಗ್ಗೆ ಭರವಸೆ ನೀಡುವ ಹಕ್ಕು, ಕೇಳುವ ಹಕ್ಕು, ಪರಿಹಾರವನ್ನು ಪಡೆಯುವ ಹಕ್ಕನ್ನು ಹೊಂದಿದೆ. ಇತ್ತೀಚೆಗೆ ದೆಹಲಿ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಜರ್ಮನ್ ಮೂಲದ ಜನಪ್ರಿಯ ವಾಹನ ತಯಾರಕ ಬಿಎಂಡಬ್ಲ್ಯುಗೆ ಕಾರಿನ ಮಾಲೀಕನಿಗೆ ಸಂಪೂರ್ಣ ವೆಚ್ಚವನ್ನು 26.3 ಲಕ್ಷ ರೂ. ಮರುಪಾವತಿಸುವಂತೆ ನಿರ್ದೇಶಿಸಿದೆ.

 ರೂ.26 ಲಕ್ಷ ಪರಿಹಾರ ನೀಡುವಂತೆ ಬಿಎಂಡಬ್ಲ್ಯುಗೆ ಕೋರ್ಟ್ ಆದೇಶ

ದೆಹಲಿ ಮೂಲದ ವ್ಯಕ್ತಿಯೊಬ್ಬರು 2014ರಲ್ಲಿ ಐಷಾರಾಮಿ ಬಿಎಂಡಬ್ಲ್ಯು 1 ಸಿರೀಸ್ ಹ್ಯಾಚ್ ಅನ್ನು ಖರೀದಿಸಿಸಿದ್ದರು. ಈ ಐಷಾರಾಮಿ ಕಾರು ಖರೀದಿಸಿದ 5 ತಿಂಗಳ ನಂತರ ಕಾರಿನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು. ಸುಮಾರು 8 ವರ್ಷಗಳಿಂದ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ, ಈಗ ವಾಹನ ತಯಾರಕರು ಒದಗಿಸಿದ ಸೇವೆಗಳು ತೃಪ್ತಿಕರವಾಗಿಲ್ಲ ಎಂದು ಪರಿಗಣಿಸಲಾಗಿದೆ. ಎರಡನೇ ತಲೆಮಾರಿನ ಬಿಎಂಡಬ್ಲ್ಯು 1 ಸೀರಿಸ್ ಕಾರು ಭಾರತದಲ್ಲಿ 2013 ರಲ್ಲಿ ಬಿಡುಗಡೆಯಾಯಿತು.

ಈ ಬಿಎಂಡಬ್ಲ್ಯು 1 ಸೀರಿಸ್ ಕಾರನ್ನು ಬಿಎಂಡಬ್ಲ್ಯು ಕಂಪನಿಯು 2017 ರಲ್ಲಿ ಸ್ಥಗಿತಗೊಳಿಸಿತು. ಕೇವಲ 5 ತಿಂಗಳ ಮಾಲೀಕತ್ವದ ನಂತರ, ದೂರುದಾರರು ತಮ್ಮ ಬಿಎಂಡಬ್ಲ್ಯು ಕಾರಿನ ಬ್ರೇಕ್ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು. ದೂರನ್ನು ಸ್ವೀಕರಿಸಿದ ನಂತರ, ತಯಾರಕರು ಬಿಎಂಡಬ್ಲ್ಯುನ ಮಾನೇಸರ್ R&D ಕೇಂದ್ರದಲ್ಲಿ ಜಂಟಿ ಟೆಸ್ಟ್ ಡ್ರೈವ್ ಅನ್ನು ನಡೆಸಿದರು ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆಯಲ್ಲಿನ ಸಮಸ್ಯೆಯನ್ನು ಒಪ್ಪಿಕೊಂಡರು ಮತ್ತು ಕಳಪೆ ಎಂದು ಹೇಳಿಕೆ ನೀಡಿದರು.

ಕಾರನ್ನು ರಿಪೇರಿಗೆ ಕಳುಹಿಸಲಾಗಿದ್ದು, ದುರಸ್ತಿ ಕಾರ್ಯದ ನಂತರವೂ ದೂರುದಾರರಿಗೆ ಮೊದಲಿಗಿಂತ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.ನ್ಯಾಯಾಲಯದ ನಿರ್ದೇಶನದಲ್ಲಿ, "ಪ್ರಸ್ತುತ ಪ್ರಕರಣದಲ್ಲಿ ಕಾರನ್ನು ಬದಲಾಯಿಸಲಿಲ್ಲ ಅಥವಾ ದೋಷಗಳನ್ನು ಸರಿಪಡಿಸಲಿಲ್ಲ. . ಆದ್ದರಿಂದ, ಸೇವೆಗಳಲ್ಲಿ ಕೊರತೆಯಿದೆ ಎಂಬ ದೂರುದಾರರ ವಾದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ನ್ಯಾಯಲಯ ಹೇಳಿದೆ, ಇದರ ಪರಿಣಾಮವಾಗಿ, ಬಿಎಂಡಬ್ಲ್ಯು ಕಂಪನಿಯು ಈಗ 1 ಸರಣಿಯ ಹ್ಯಾಚ್‌ಬ್ಯಾಕ್‌ನ ಸಂಪೂರ್ಣ ಎಕ್ಸ್ ಶೋ ರೂಂ ಮೊತ್ತವಾದ 26.3 ಲಕ್ಷ ರೂ.ಗಳನ್ನು ದೂರುದಾರರಿಗೆ ಮರುಪಾವತಿಸಲು ಸೂಚಿಸಲಾಗಿದೆ.

ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರಿನ 2019ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತು. ಈ ಕಾರು ಹೊಸ ವಿನ್ಯಾಸ ಹಾಗೂ ಹೊಸ ಬಗೆಯ ಇಂಟಿರಿಯರ್ಸ್‍‍ಗಳನ್ನು ಹೊಂದಿದೆ. ಜೊತೆಗೆ ಈ ಕಾರಿನಲ್ಲಿ ಹೊಸ ಪವರ್‍‍ಟ್ರೇನ್ ಆಯ್ಕೆಗಳಿರಲಿವೆ. ಹೊರಭಾಗದಲ್ಲಿ ಹೊಸ ಕಾರು ಬ್ರಾಂಡ್ ನ್ಯೂ ಸ್ಟೈಲ್ ಹೊಂದಿದೆ. ಮೊದಲಿದ್ದ ಕಾರಿಗಿಂತ 34 ಎಂಎಂ ಹೆಚ್ಚು ಅಗಲವಾಗಿರುವ ಕಾರಣ, ಈ ಕಾರು ಅಗಲವಾಗಿದ್ದು, ಬಲಿಷ್ಟವಾಗಿ ಕಾಣುತ್ತದೆ. ಮುಂಭಾಗದಲ್ಲಿ ಬಿ‍ಎಂ‍‍ಡಬ್ಲ್ಯು ಗ್ರಿಲ್ ಅಳವಡಿಸಲಾಗಿದೆ. ಹೊಸ ಕಾರಿನಲ್ಲಿ ಮಸ್ಕ್ಯುಲರ್‍‍ನ ಜೊತೆಗೆ ಮುಂಭಾಗ ಹಾಗೂ ಹಿಂಭಾಗದಲ್ಲಿ ಫಾಗ್ ಲ್ಯಾಂಪ್‍ ಹೊಂದಿರುವ ಬಂಪರ್‍‍ಗಳನ್ನು ಅಳವಡಿಸಲಾಗಿದೆ.

ಈ ಕಾರಿನಲ್ಲಿ ಹೊಸ ಬಗೆಯ ಸ್ವೇಪ್ಟ್ ಬ್ಯಾಕ್ ಹೆಡ್‍‍ಲ್ಯಾಂಪ್ ಡಿಸೈನ್‍‍ಗಳಿದ್ದು, ಪ್ರತಿ ಹೆಡ್‍‍ಲ್ಯಾಂಪ್ ಯೂನಿಟ್‍‍ನಲ್ಲಿ ಎರಡು ಎಲ್‍ಇ‍‍ಡಿ ಕ್ಲಸ್ಟರ್‍‍ಗಳಿದ್ದು, ಮುಂದಿರುವ ರಸ್ತೆಯನ್ನು ಎದ್ದು ಕಾಣುವಂತೆ ಮಾಡಲಿವೆ. ಹೆಡ್‍‍ಲ್ಯಾಂಪ್ ಯೂನಿಟ್‍‍ನೊಳಗೆ ಸಿ ಶೇಪಿನಲ್ಲಿರುವ ಎಲ್‍‍ಇ‍‍ಡಿ ಡಿ‍ಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ. ಬಾನೆಟ್‍‍ನ ಮೇಲೆ ಮಸ್ಕುಲರ್ ಸ್ಟಾಂನ್ಸ್ ಗಳನ್ನು ಕಾಣಬಹುದು. ಕಾರಿನ ಪಕ್ಕದ ವಿನ್ಯಾಸವು ರೈಡಿಂಗ್ ವಿಂಡೋ ಲೈನ್ ಹಾಗೂ ಕ್ಲಾಸಿ ಅಲಾಯ್ ವ್ಹೀಲ್‍‍ಗಳನ್ನು ಹೊಂದಿದೆ. ಹಿಂಭಾಗದಲ್ಲಿ ಡ್ಯೂಯಲ್ ಟೋನ್ ಬಂಪರ್ ಹಾಗೂ ಸ್ವೇಪ್ಟ್ ಬ್ಯಾಕ್ ಟೇಲ್ ಲ್ಯಾಂಪ್‍‍ಗಳಿವೆ.

ಇದರಲ್ಲಿ ಎಂ ಮಾದರಿಯ ಕಾರಿದ್ದು, ಅದಕ್ಕೆ ಎಂ135ಐ ಎಂಬ ಹೆಸರಿಡಲಾಗಿದೆ. ಈ ಮಾದರಿಯ ಕಾರಿನಲ್ಲಿ ವಿಭಿನ್ನವಾದ ಗ್ರಿಲ್ ಹಾಗೂ ಬಂಪರ್ ಡಿಸೈನ್‍‍ಗಳಿವೆ. ಮುಂಭಾಗದ ಬಂಪರ್‍ ವರ್ಟಿಕಲ್ ಏರ್‍‍ವೆಂಟ್‍‍ಗೆ ಹಾಗೂ ಹಿಂಭಾಗದ ಬಂಪರ್‍‍ಗಳು ಡ್ಯೂಯಲ್ ಎಕ್ಸಾಸ್ಟ್ ಗಳಿಗೆ ದಾರಿ ಮಾಡಿಕೊಡುತ್ತವೆ. ಬಿ‍ಎಂ‍‍ಡಬ್ಲ್ಯು 1 ಸೀರಿಸ್‍‍ನ ಇಂಟಿರಿಯರ್ಸ್‍‍ನಲ್ಲಿ ಅನೇಕ ಫೀಚರ್ಸ್‍‍ಗಳಿವೆ. ಈ ಕಾರಿನಲ್ಲಿ 8.8 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍‍ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಜರ್ಮನಿಯ ಕಾರು ತಯಾರಕ ಕಂಪನಿಯ ಪ್ರಕಾರ ಬೂಟ್ ಸ್ಪೇಸ್ ಈಗ 280 ಲೀಟರ್‍‍ನಷ್ಟಿದೆ.

Article Published On: Thursday, December 29, 2022, 17:45 [IST]
English summary
Consumer court orders bmw to pay rs 26 lakh compensation to car owner details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+