70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ಸಾರಿಗೆ ಕ್ಷೇತ್ರವು ಯಾವುದೇ ದೇಶದ ಜೀವನಾಡಿಯಾಗಿದೆ. ಭಾರತದಲ್ಲಿಯೂ ಸರಕುಗಳನ್ನು ಸಾಗಿಸಲು ಟ್ರಕ್ ಚಾಲಕರು ಸಾವಿರಾರು ಕಿ.ಮೀ ಸಂಚರಿಸುತ್ತಾರೆ. ಹೆದ್ದಾರಿಗಳಲ್ಲಿ ಟ್ರಕ್ ಗಳನ್ನು ಪರಿಶೀಲಿಸಲೆಂದೇ ಬ್ಯಾರಿಕೇಡ್‌ಗಳನ್ನು ಹಾಕಲಾಗಿರುತ್ತದೆ.

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸುವ ಟ್ರಕ್‌ಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುತ್ತಾರೆ. ದಾಖಲೆ ಸರಿ ಇಲ್ಲದ ಕಾರಣಕ್ಕೆ ಅಥವಾ ಅಕ್ರಮವಾಗಿ ಸರಕುಗಳನ್ನು ಸಾಗಿಸುವ ಟ್ರಕ್ ಚಾಲಕರು ಬ್ಯಾರಿಕೇಡ್‌ಗಳಿದ್ದರೂ ನಿಲ್ಲಿಸದೇ ತಪ್ಪಿಸಿಕೊಂಡು ಪರಾರಿಯಾಗುವ ಹಲವಾರು ಘಟನೆಗಳು ವರದಿಯಾಗಿವೆ.

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ಇದೇ ರೀತಿಯ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಟ್ರಕ್ ಚಾಲಕನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು 70 ಕಿ.ಮೀ ಚಲಿಸಿ ಕೊನೆಗೂ ಸಿಕ್ಕಿ ಬಿದ್ದ ಬಗ್ಗೆ ವರದಿಯಾಗಿದೆ. ಈ ಟ್ರಕ್ ಚಾಲಕನನ್ನು ಹಿಡಿಯಲು ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಸಹಕರಿಸಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ಟ್ರಕ್ ನ ಎಡ ಭಾಗದ ಟಯರ್ ಪಂಕ್ಚರ್ ಆಗಿದ್ದರೂ ಸಹ ಟ್ರಕ್ ಅತಿ ವೇಗದಲ್ಲಿ ಚಲಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಯಾವುದೇ ವಾಹನ ಅಡ್ಡ ಬಂದರೂ ಯಾರೇ ಅಡ್ಡ ಬಂದರೂ ಟ್ರಕ್ ಚಾಲಕ ಟ್ರಕ್ ನಿಲ್ಲಿಸದೇ ಚಾಲನೆ ಮಾಡುತ್ತಲೇ ಇರುತ್ತಾನೆ.

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ತನ್ನ ಬೆನ್ನು ಬಿದ್ದಿರುವ ಪೊಲೀಸರಿಂದ ತಪ್ಪಿಸಿಕೊಳ್ಳಲು ಟ್ರಕ್ ಚಾಲಕ 70 ಕಿ.ಮೀಗಳವರೆಗೆ ಟ್ರಕ್ ಚಾಲನೆ ಮಾಡಿದ್ದಾನೆ. ವಿವಿಧ ಪ್ರದೇಶಗಳಲ್ಲಿದ್ದ ಜನರು ರೆಕಾರ್ಡ್ ಮಾಡಿರುವ ವೀಡಿಯೊಗಳಿಂದ ಟ್ರಕ್‌ನ ಎಡಭಾಗದ ಎರಡೂ ಟಯರ್‌ಗಳು ಸಿಡಿದಿರುವುದನ್ನು ಕಾಣಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ವರದಿಗಳ ಪ್ರಕಾರ ಈ ಟ್ರಕ್ ಹಾಗೂ ಮತ್ತೊಂದು ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತವು ಸಣ್ಣದಾದರೂ ಪೊಲೀಸರು ಸ್ಥಳಕ್ಕೆ ಬಂದ ಕಾರಣ ಈ ಟ್ರಕ್ ಚಾಲಕ ಮುಖೇಶ್ ಕುಮಾರ್ ಸ್ಥಳದಿಂದ ಪರಾರಿಯಾಗಿದ್ದಾನೆ.

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ಟ್ರಕ್ ಚಾಲಕನು ಯಾವುದೋ ನಿಷೇಧಿತ ವಸ್ತುವನ್ನು ಹೊತ್ತೊಯ್ಯುತ್ತಿರ ಬಹುದು ಎಂಬ ಅನುಮಾನದಿಂದ ಪೊಲೀಸರು ಆತನ ಬೆನ್ನಟ್ಟಿದ್ದಾರೆ. ಆತನ ಟ್ರಕ್ ಅನ್ನು ನಿಲ್ಲಿಸಲು ಬ್ಯಾರಿಕೇಡ್ ಗಳನ್ನು ಅಡ್ಡ ಹಾಕಿದ್ದಾರೆ. ಆದರೆ ಬ್ಯಾರಿಕೇಡ್ ಗಳನ್ನು ಮುರಿದು ತಪ್ಪಿಸಿಕೊಂಡಿದ್ದಾನೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ಟ್ರಕ್ ಚಾಲಕ ಹೆಚ್ಚಿನ ಜನಸಂದಣಿ ಇದ್ದ ಮಾರುಕಟ್ಟೆಯಲ್ಲೂ ವೇಗವಾಗಿ ಚಲಿಸಿದ್ದಾನೆ. ಪೊಲೀಸರು ಟ್ರಕ್ ತಡೆಯಲು ಟ್ರಾಕ್ಟರ್ ಟಯರ್ ಗಳನ್ನು ಅಡ್ಡ ಹಾಕಿದರೂ ತಪ್ಪಿಸಿಕೊಂಡಿದ್ದಾನೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಟ್ರಕ್‌ ಚಾಲಕ ಮುಖೇಶ್ 40 ಕಿ.ಮೀ ದೂರ ರಿಮ್ ಗಳಲ್ಲಿಯೇ ಟ್ರಕ್ ಚಾಲನೆ ಮಾಡಿದ ಕಾರಣಕ್ಕೆ ರಸ್ತೆಗಳಿಗೆ ಹಾಗೂ ಟ್ರಕ್‌ಗೆ ಹಾನಿಯಾಗಿದೆ. ಟ್ರಕ್ ಅನ್ನು ನಿಲ್ಲಿಸಲು ಪೊಲೀಸರು ಬೃಹತ್ ಬ್ಯಾರಿಕೇಡ್ ಅನ್ನು ಅಡ್ಡ ಹಾಕಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

70 ಕಿ.ಮೀ ಚೇಸಿಂಗ್ ನಂತರ ಸಿಕ್ಕಿ ಬಿದ್ದ ಟ್ರಕ್ ಚಾಲಕ

ಈ ಬ್ಯಾರಿಕೇಡ್ ಗೆ ಗುದ್ದಿದ ನಂತರ ಮುಂದೆ ಚಲಿಸಲು ಸಾಧ್ಯವಾಗದೇ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಟ್ರಕ್ ನಲ್ಲಿ ನಿಷಿದ್ಧ ವಸ್ತುಗಳನ್ನು ಸಾಗಿಸಲಾಗುತ್ತಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Most Read Articles
 

Kannada
English summary
Cops arrests truck driver after 70 kilo meters chase. Read in Kannada.
Story first published: Friday, September 25, 2020, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X