ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಕರೋನಾ ವೈರಸ್ ಎರಡನೇ ಅಲೆಯಿಂದಾಗಿ ಭಾರತವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಕಳೆದ ವರ್ಷದಂತೆ ಈ ವರ್ಷ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿಲ್ಲ. ಆದರೆ ಕರೋನಾ ವೈರಸ್ ಹರಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಇದೇ ವೇಳೆ ವಿವಿಧ ರಾಜ್ಯಗಳಲ್ಲಿ ಪೂರ್ಣ ಕರ್ಫ್ಯೂ ಹಾಗೂ ಸೆಮಿ ಕರ್ಫ್ಯೂಗಳನ್ನು ಜಾರಿಗೊಳಿಸಲಾಗಿದೆ. ಈ ಕರ್ಫ್ಯೂಗಳು ಜನರು ಅನಗತ್ಯವಾಗಿ ಹೊರಬರುವುದನ್ನುತಡೆದು, ಕರೋನಾ ವೈರಸ್ ಹರಡುವುದನ್ನು ಕಡಿಮೆ ಮಾಡುತ್ತವೆ.

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಕರ್ಫ್ಯೂ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಸಹ ಶ್ರಮಿಸುತ್ತಿದ್ದಾರೆ. ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸುವವರಿಗೆ ಪಾಠ ಕಲಿಸಲು ಪೊಲೀಸರು ಕೆಲವು ವಿಶಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಈ ವಿಶಿಷ್ಟ ಕ್ರಮಗಳಿಗೆ ಸಂಬಂಧಿಸಿದ ವೀಡಿಯೊವೊಂದು ರಾಜಸ್ಥಾನದ ಜೋಧ್ಪುರದಿಂದ ಬಿಡುಗಡೆಯಾಗಿದೆ. ಜೋಧ್ಪುರದಲ್ಲಿ ಕರೋನಾ ಸೋಂಕಿತ ಪ್ರಕರಣಗಳು ಹೆಚ್ಚಿರುವ ಕಾರಣಕ್ಕೆ ರಾಜಸ್ಥಾನ ಸರ್ಕಾರವು ರೆಡ್ ಅಲರ್ಟ್ ಹೊರಡಿಸಿದೆ.

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಅಲ್ಲಿ ಹೊರಡಿಸಲಾದ ನಿಯಮಗಳ ಪ್ರಕಾರ ಅಗತ್ಯ ಮಳಿಗೆಗಳನ್ನು ಕೆಲವು ಗಂಟೆಗಳವರೆಗೆ ತೆರೆದಿರಬಹುದು. ಆದರೆ ಸಾರ್ವಜನಿಕರು ಸೂಕ್ತ ಕಾರಣವಿಲ್ಲದೆ ಮನೆಗಳಿಂದ ಹೊರ ಬರುವಂತಿಲ್ಲ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಯಾರಾದರೂ ಅನಗತ್ಯವಾಗಿ ಹೊರ ಬಂದರೆ ಅಂತಹವರನ್ನು ಮೇಲ್ವಿಚಾರಣೆ ಮಾಡಿ ದಂಡ ವಿಧಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ನಿಯೋಜನೆಗೊಂಡಪೊಲೀಸರು ವಿಶಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಈ ವೀಡಿಯೊದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಹೊರ ಬರುವ ಬೈಕ್ ಸವಾರ ಮೊದಲು ಪೊಲೀಸರಿಂದ ತಪ್ಪಿಸಿಕೊಂಡರೂ ನಂತರ ಸಿಕ್ಕಿ ಬೀಳುವುದನ್ನು ಕಾಣಬಹುದು. ಸಿಕ್ಕಿ ಬೀಳುವ ಬೈಕ್ ಸವಾರನನ್ನು ಪೊಲೀಸರು ಬಲವಂತವಾಗಿ ಆಂಬ್ಯುಲೆನ್ಸ್'ನೊಳಕ್ಕೆ ಕರೆದೊಯ್ಯುತ್ತಾರೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಪೊಲೀಸರ ಬಳಿಯೇ ಆಂಬ್ಯುಲೆನ್ಸ್ ನಿಲ್ಲಿಸಲಾಗಿತ್ತು. ಸಿಕ್ಕಿ ಬೀಳುವ ಬೈಕ್ ಸವಾರರನ್ನು ಪೊಲೀಸರು ಬಲವಂತವಾಗಿ ಆಂಬ್ಯುಲೆನ್ಸ್'ನೊಳಕ್ಕೆ ಕಳುಹಿಸುತ್ತಾರೆ. ಬೈಕ್ ಸವಾರರು ತಪ್ಪಿಸಿಕೊಳ್ಳಲು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಾರೆ.

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಒಬ್ಬ ಬೈಕ್ ಸವಾರ ಆಂಬ್ಯುಲೆನ್ಸ್ ಕಿಟಕಿಯ ಮೂಲಕ ಹೊರಬರಲು ಪ್ರಯತ್ನಿಸುತ್ತಾನೆ. ಆದರೆ ಆತನಿಗೆ ಸಾಧ್ಯವಾಗುವುದಿಲ್ಲ. ಹೊಸ ನಿಯಮಗಳ ಪ್ರಕಾರ ಯಾರಾದರೂ ಅನಗತ್ಯವಾಗಿ ಹೊರಬಂದು ಸಿಕ್ಕಿ ಬಿದ್ದರೆ ಅವರನ್ನು ಕ್ವಾರಂಟೈನ್ ಮಾಡಲಾಗುತ್ತದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಜೊತೆಗೆ ಅವರಿಗೆ ಪರೀಕ್ಷೆಯನ್ನೂ ಸಹ ನಡೆಸಲಾಗುತ್ತದೆ. ಕರೋನಾ ವೈರಸ್ ಇಲ್ಲವೆಂದು ಖಚಿತವಾದರೆ ಮಾತ್ರ ಅವರನ್ನು ಬಿಡಲಾಗುತ್ತದೆ. ಈ ವೀಡಿಯೊದಲ್ಲಿ ಸಿಕ್ಕಿಬಿದ್ದವರನ್ನು ಎಷ್ಟು ಹೊತ್ತು ಕ್ವಾರಂಟೈನ್ ಮಾಡಲಾಗಿತ್ತು ಎಂಬುದು ತಿಳಿದು ಬಂದಿಲ್ಲ.

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಈ ಹಿಂದೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ಪೊಲೀಸರು ದಂಡ ವಿಧಿಸಿದ್ದರು. ಆಗಲೂ ಸಹ ಸಾರ್ವಜನಿಕರು ನಿಯಮಗಳನ್ನು ಪಾಲಿಸುತ್ತಿರಲಿಲ್ಲ. ಈ ಕಾರಣಕ್ಕೆಪೊಲೀಸರು ಈ ರೀತಿಯ ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಬಲವಂತವಾಗಿ ಆಂಬ್ಯುಲೆನ್ಸ್‌ನಲ್ಲಿ ಕೂಡಿ ಹಾಕುವುದರಿಂದ ಜನರು ಅನಗತ್ಯವಾಗಿ ಮನೆಗಳಿಂದ ಹೊರ ಬರುವುದು ತಪ್ಪುತ್ತದೆ ಎಂಬುದು ಪೊಲೀಸರ ಅಭಿಪ್ರಾಯ. ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಪೊಲೀಸರಿಗೂ ಸೋಂಕು ತಗಲುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಕರ್ಪ್ಯೂ ವೇಳೆ ಹೊರ ಬಂದವರನ್ನು ಆಂಬ್ಯುಲೆನ್ಸ್'ನೊಳಕ್ಕೆ ತಳ್ಳಿದ ಪೊಲೀಸರು

ಜೋಧ್ಪುರದಲ್ಲಿ ಪೊಲೀಸರು ತೆಗೆದುಕೊಂಡ ವಿಶಿಷ್ಟ ಕ್ರಮದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನ್ಯೂಸ್ 18 ವೈರಲ್ಸ್ ಈ ವೀಡಿಯೊವನ್ನು ಅಪ್ ಲೋಡ್ ಮಾಡಿದೆ.

Most Read Articles

Kannada
English summary
Cops sends bike riders into Ambulance for violating lockdown rules in Jodhpur. Read in Kannada.
Story first published: Friday, May 7, 2021, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X