ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ವಶಕ್ಕೆ ಪಡೆದಿದ್ದ ಕಾರ್ ಅನ್ನು ಮಾರಾಟ ಮಾಡಿದ ಆರೋಪದ ಮೇಲೆ ಮಂಗಳೂರಿನಲ್ಲಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ವಂಚನೆ ಪ್ರಕರಣದ ತನಿಖೆ ವೇಳೆ ಇನ್ಸ್‌ಪೆಕ್ಟರ್ ರಾಮಕೃಷ್ಣ ಹಾಗೂ ಸಬ್ ಇನ್ಸ್‌ಪೆಕ್ಟರ್ ಕಪಾಲ್ ರಾಜ್ ಅವರು ದುಬಾರಿ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು.

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಅವರು ಒಟ್ಟು ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು ಎಂದು ವರದಿಯಾಗಿದೆ. ಈ ಪೈಕಿ ಒಂದು ಕಾರ್ ಅನ್ನು ಮಾರಾಟ ಮಾಡಿದ್ದಾರೆ. ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ಕೇರಳ ಮೂಲದ ಉದ್ಯಮಿಗಳಾದ ಟಾಮಿ ಮ್ಯಾಥ್ಯೂ ಹಾಗೂ ರಾಜನ್ ಅವರ ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ವಶಕ್ಕೆ ಪಡೆದ ಕಾರುಗಳಲ್ಲಿ ಬಿಎಂಡಬ್ಲ್ಯು, ಪೋರ್ಷೆ ಹಾಗೂ ಜಾಗ್ವಾರ್ ಕಾರುಗಳು ಸೇರಿದ್ದವು. ಪೊಲೀಸರು ಜಾಗ್ವಾರ್ ಕಾರನ್ನು ಮಾರಾಟ ಮಾಡಿದ್ದಾರೆ. ನಂತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ ವರದಿಯಲ್ಲಿ ಕೇವಲ 2 ಕಾರುಗಳನ್ನು ಮಾತ್ರ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಆದರೆ ಆರೋಪ ಎದುರಿಸುತ್ತಿರುವ ಪೊಲೀಸರು ವಶಕ್ಕೆ ಪಡೆದಿದ್ದ ಜಾಗ್ವಾರ್ ಎಕ್ಸ್‌ಎಫ್ ಕಾರಿನ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿರಲಿಲ್ಲ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.55 ಲಕ್ಷಗಳಾಗಿದೆ.

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಆದರೆ ಪೊಲೀಸರು ಈ ಕಾರ್ ಅನ್ನು ಕೇವಲ ರೂ.14 ಲಕ್ಷಗಳಿಗೆ ಮಾರಾಟ ಮಾಡಿದ್ದಾರೆ. ಈ ಕಾರನ್ನು ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಜಾಗ್ವಾರ್ ಕಾರ್ ಅನ್ನು ಮಾರಾಟ ಮಾಡಿದಂತೆ ಪೋರ್ಷೆ ಕಾರ್ ಅನ್ನು ಸಹ ಮಾರಾಟ ಮಾಡಲು ಪೊಲೀಸರು ಮುಂದಾಗಿದ್ದರು. ಆದರೆ ಆ ಕಾರ್ ಅನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ.

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ಇಬ್ಬರು ಉದ್ಯಮಿಗಳು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಪೊಲೀಸರ ವಶದಲ್ಲಿದ್ದ ತಮ್ಮ ಕಾರುಗಳನ್ನು ಪಡೆಯಲು ಪೊಲೀಸ್ ಠಾಣೆಗೆ ತೆರಳಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಆಗ ಪೊಲೀಸರು ಕಾರ್ ಅನ್ನು ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.ತನಿಖೆಯಲ್ಲಿ ಪೊಲೀಸರು ಕಾರ್ ಅನ್ನು ಮಾರಾಟ ಮಾಡಿರುವುದು ಕಂಡು ಬಂದಿದೆ.

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಮೊದಲು ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು. ಈಗ ಮತ್ತಿಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಕಾರು ಮಾರಾಟ ಪ್ರಕರಣದಲ್ಲಿ ಇದುವರೆಗೂ ಒಟ್ಟು ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಈ ಪ್ರಕರಣದ ಬಗ್ಗೆ ಟಿವಿ 9 ಕನ್ನಡ ವರದಿ ಮಾಡಿದೆ. ಈ ಪ್ರಕರಣವು ರಾಜ್ಯದಲ್ಲಿ ಭಾರಿ ಸಂಚಲನವನ್ನುಂಟು ಮಾಡಿದೆ. ಸಾಮಾನ್ಯವಾಗಿ ಪೊಲೀಸರು ವಶಕ್ಕೆ ಪಡೆಯುವ ವಾಹನಗಳು ಭಾರೀ ಬಿಸಿಲು ಹಾಗೂ ಮಳೆಯಲ್ಲಿ ಒಣಗಿ ಹಾಳಾಗುತ್ತವೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಬರುತ್ತಿವೆ.

ಆದರೆ ಈ ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ. ತಮ್ಮ ವಶದಲ್ಲಿದ್ದ ವಾಹನಗಳನ್ನು ಪೊಲೀಸರು ಮಾರಾಟ ಮಾಡಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಶಕ್ಕೆ ಪಡೆದಿದ್ದ ಕಾರುಗಳನ್ನು ಮಾರಾಟ ಮಾಡಿ ಅಮಾನತುಗೊಂಡ ಪೊಲೀಸ್ ಅಧಿಕಾರಿಗಳು

ಈ ಘಟನೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ವಿವಿಧ ಕೋನಗಳಿಂದ ತನಿಖೆ ಮುಂದುವರಿಸಿದ್ದಾರೆ.

ಚಿತ್ರ ಹಾಗೂ ವೀಡಿಯೊ ಕೃಪೆ: ಟಿವಿ 9 ಕನ್ನಡ

Most Read Articles

Kannada
English summary
Cops suspended for selling seized jaguar car. Read in Kannada.
Story first published: Wednesday, March 17, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X