ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು ರಾಜ್ಯಗಳಲ್ಲಿ ಕರೋನಾ ವೈರಸ್‌ ಹಾವಳಿ ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದೆ. ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದರೂ, ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲಾಗಿಲ್ಲ.

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಭಾರತದಲ್ಲಿ ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ಡೌನ್ ಅನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಅಗತ್ಯ ಕೆಲಸ ಇರುವವರು ಮಾತ್ರ ಮನೆಗಳಿಂದ ಹೊರಬರಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೆ ಜನರು ಅನಗತ್ಯವಾಗಿ ಸಂಚರಿಸುವುದನ್ನು ಕಾಣಬಹುದು. ಇಂತಹ ವಾಹನ ಚಾಲಕರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಲಾಕ್‌ಡೌನ್ ಜಾರಿಗೆ ತಂದಾಗ, ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ಪೊಲೀಸರು ಥಳಿಸುತ್ತಿದ್ದರು. ಪೊಲೀಸರ ಈ ಕ್ರಮದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಆ ನಂತರ ಪೊಲೀಸರು ಮೇಲೆ ಥಳಿಸುವುದನ್ನು ನಿಲ್ಲಿಸಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಇದರ ಬದಲಿಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ದಂಡ ವಿಧಿಸಲು ಮುಂದಾದರು. ಲಾಕ್‌ಡೌನ್ ಅವಧಿಯಲ್ಲಿ ದೇಶಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಇಷ್ಟೆಲ್ಲಾ ಕ್ರಮಗಳನ್ನು ಕೈಗೊಂಡರೂ ಪೊಲೀಸರಿಗೆ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪೊಲೀಸರು ವಿಭಿನ್ನ ಕ್ರಮಗಳಿಗೆ ಮುಂದಾದರು. ಕರೋನಾ ವೈರಸ್‌ನ ಗಂಭೀರತೆಯನ್ನು ವಾಹನ ಚಾಲಕರಿಗೆ ಅರ್ಥವಾಗುವಂತೆ ಮಾಡುವುದು ಇದರ ಹಿಂದಿರುವ ಉದ್ದೇಶ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ತಿರುಪುರ ಪೊಲೀಸರು ಇತ್ತೀಚೆಗೆ ಕೈಗೊಂಡ ಕ್ರಮ ಎಲ್ಲರ ಗಮನ ಸೆಳೆದಿತ್ತು. ಲಾಕ್‌ಡೌನ್ ಉಲ್ಲಂಘಿಸಿ ಹೊರಬಂದ ಯುವಕರನ್ನು ಆಂಬುಲೆನ್ಸ್‌ಗೆ ಹತ್ತಿಸಿ ಕರೋನಾ ವೈರಸ್ ಸೋಂಕಿತರ ಜೊತೆ ಕಾಲಕಳೆಯುವಂತೆ ಮಾಡಿದ್ದರು.

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಯುವಕರು ಆಂಬುಲೆನ್ಸ್‌ ಹತ್ತಲು ಹಿಂದೇಟು ಹಾಕುತ್ತಾ ಕಿರುಚಾಡುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೆಹಲಿ ಪೊಲೀಸರು ಈಗ ಸಹ ಇದೇ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಭಾರತದಲ್ಲಿ ಕರೋನಾ ವೈರಸ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರಗಳಲ್ಲಿ ದೆಹಲಿಯು ಸಹ ಒಂದು. ದೆಹಲಿಯಲ್ಲಿ ವಿನಾಕಾರಣ ಹೊರಬರುವವರ ಮೇಲೆ ಪೊಲೀಸರು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಕೆಲ ದಿನಗಳ ಹಿಂದೆ ಪೊಲೀಸರು ಲಾಕ್‌ಡೌನ್ ಅವಧಿಯಲ್ಲಿ ಎರಡು ಬೈಕ್‌ಗಳಲ್ಲಿ ಹೊರಬಂದಿದ್ದ ಐವರು ಯುವಕರನ್ನು ತಡೆದು ನಿಲ್ಲಿಸಿದರು. ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ನಂತರ ಪೊಲೀಸರು ಯುವಕರಿಗೆ ರಸ್ತೆಬದಿಯಲ್ಲಿದ್ದ ಶವವನ್ನು ಹೊತ್ತೊಯ್ಯುವಂತೆ ಹೇಳಿದ್ದಾರೆ. ಆ ಶವವು ಕರೋನಾ ವೈರಸ್‌ನಿಂದ ವ್ಯಕ್ತಿಯದಾಗಿರಬಹುದು ಎಂದು ಯುವಕರು ಭಯಪಟ್ಟರು. ಆದರೆ ಅದು ಡಮ್ಮಿ ಮೃತ ದೇಹವಾಗಿತ್ತು.

ಲಾಕ್‌ಡೌನ್ ಉಲ್ಲಂಘಿಸುವವರೇ ಎಚ್ಚರ, ಹೆಣ ಹೊರಬೇಕಾದೀತು ಜೋಕೆ

ಯುವಕರು ಮೃತದೇಹವನ್ನು ಹೊತ್ತೊಯ್ಯುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಪೂರ್ವ ದೆಹಲಿಯ ಮಧು ವಿಹಾರದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

Most Read Articles

Kannada
English summary
Cops teach lockdown violators a lesson ask them to pick dummy dead body of a corona patient. Read in Kannada.
Story first published: Friday, May 22, 2020, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X