ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಕರೋನಾ ವೈರಸ್‌ ಪ್ರಪಂಚದಾದ್ಯಂತ ಹರಡುತ್ತಿದ್ದು, ಇಡೀ ಮಾನವ ಜನಾಂಗದ ಮೇಲೆ ಪರಿಣಾಮ ಬೀರುತ್ತಿದೆ. ಈ ವೈರಸ್ ನಿಂದ ಹಲವಾರು ಸಮಸ್ಯೆಗಳು ತಲೆದೋರುತ್ತಿವೆ. ಮನುಷ್ಯರನ್ನು ಕೊಲ್ಲುವುದರ ಜೊತೆಗೆ ಹಲವು ಉದ್ಯಮಗಳನ್ನು ಸಂಕಷ್ಟಕ್ಕೆ ದೂಡಿದೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಕರೋನಾ ವೈರಸ್‌ ನಿಂದಾಗಿ ಆಟೋ ಮೊಬೈಲ್ ಉದ್ಯಮವು ಸಹ ಸಂಕಷ್ಟಕ್ಕೆ ಸಿಲುಕಿದೆ. ಕರೋನಾ ವೈರಸ್ ಹರಡದಿರಲಿ ಎಂಬ ಕಾರಣಕ್ಕೆ ಪ್ರಪಂಚದ ಬಹುತೇಕ ದೇಶಗಳು ಲಾಕ್ ಡೌನ್ ಘೋಷಿಸಿವೆ. ಭಾರತದಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಇದರಿಂದಾಗಿ ಆಟೋ ಮೊಬೈಲ್ ಕಂಪೆನಿಗಳು ಒಂದೇ ಒಂದು ಯೂನಿಟ್ ಉತ್ಪಾದಿಸಲು ಹಾಗೂ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಕಂಪನಿಗಳ ನಷ್ಟಕ್ಕೆ ಕಾರಣವಾಗಿದೆ. ಆಟೋಮೊಬೈಲ್ ಕಂಪನಿಗಳು ನಷ್ಟವನ್ನು ಸರಿದೂಗಿಸಲು ಹೆಣಗಾಡುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಈ ಸಂದರ್ಭದಲ್ಲಿ, ಅಮೆರಿಕಾ ಮೂಲದ ಆಟೋಮೋಟಿವ್ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ ತನ್ನ ಉದ್ಯೋಗಿಗಳಿಗೆ ಆಘಾತಕಾರಿಯಾದ ಇ-ಮೇಲ್ ಕಳುಹಿಸಿದೆ. ಕರೋನಾ ವೈರಸ್ ಕಾರಣಕ್ಕೆ ಟೆಸ್ಲಾ ಕಂಪನಿಯು ಒಂದೇ ಒಂದು ಯೂನಿಟ್ ಕಾರ್ ಅನ್ನು ಸಹ ಉತ್ಪಾದಿಸಿಲ್ಲ. ಇದರಿಂದ ಕಂಪನಿಗೆ ಭಾರಿ ನಷ್ಟವಾಗಿದೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಟೆಸ್ಲಾ ಕಂಪನಿಯು ತನ್ನ ಸಿಬ್ಬಂದಿಗೆ ಗಣನೀಯ ಪ್ರಮಾಣದ ವೇತನವನ್ನು ನೀಡುತ್ತಿದೆ. ಈ ವೇತನವನ್ನು ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ನಂತರ ಸ್ಥಗಿತಗೊಳಿಸಲಿದೆ. ಟೆಸ್ಲಾ ಕಂಪನಿಯ ಈ ನಿರ್ಧಾರದಿಂದ ಉದ್ಯೋಗಿಗಳು ಆತಂಕಗೊಂಡಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ತನ್ನ ಸಿಬ್ಬಂದಿಗೆ ಕಳುಹಿಸಿರುವ ಇ-ಮೇಲ್ ನಲ್ಲಿ ಈ ಹಿಂದೆ ಕೆಲಸವನ್ನು ಸರಿಯಾಗಿ ಮಾಡದೇ, ಬ್ಲಾಕ್ ಲಿಸ್ಟ್ ಗೆ ಒಳಗಾದವರನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಕರೋನಾ ವೈರಸ್ ಅಬ್ಬರದಿಂದ ಈಗಾಗಲೇ ಹೆಚ್ಚಿನ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಇಂತಹ ಸಂದರ್ಭದಲ್ಲಿ ಯಾವುದೇ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎದುರಾಗಿದೆ. ಟೆಸ್ಲಾ ಕಂಪನಿಯ ಈ ನಿರ್ಧಾರ ಸರಿಯಲ್ಲವೆಂದು ಅನೇಕರು ಹೇಳಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಕರೋನಾ ವೈರಸ್ ನಿಂದ ಟೆಸ್ಲಾ ಕಂಪನಿಯು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದ ಫ್ರೀಮಾಂಟ್ ಉತ್ಪಾದನಾ ಘಟಕದಲ್ಲಿ ಯಾವುದೇ ಉತ್ಪಾದನೆಯಿಲ್ಲದೇ ಹೆಚ್ಚಿನ ನಷ್ಟವಾಗಿದೆ. ಈ ಕಾರಣಕ್ಕೆ ಟೆಸ್ಲಾದ ಉತ್ತರ ಅಮೆರಿಕಾದ ಹೆಚ್‌ಆರ್ ವ್ಯಾಲೆರಿ ವರ್ಕ್‌ಮ್ಯಾನ್ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಕರೋನಾ ವೈರಸ್‌ನಿಂದ ಟೆಸ್ಲಾ ಕಂಪನಿ ಮಾತ್ರ ನಷ್ಟವನ್ನು ಅನುಭವಿಸಿಲ್ಲ. ಪ್ರಪಂಚದ ಬಹುತೇಕ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ. ಆದರೆ ಟೆಸ್ಲಾ ಕಂಪನಿ ಮಾತ್ರ ಸಂಬಳವನ್ನು ಕಡಿತಗೊಳಿಸುವ ಹಾಗೂ ಉದ್ಯೋಗಿಗಳನ್ನು ವಜಾ ಮಾಡುವ ಕೆಲಸಕ್ಕೆ ಚಾಲನೆ ನೀಡಿದೆ.

ಕರೋನಾ ವೈರಸ್ ಎಫೆಕ್ಟ್: ಉದ್ಯೋಗ ಕಡಿತಕ್ಕೆ ಮುಂದಾದ ಟೆಸ್ಲಾ

ಟೆಸ್ಲಾ ಕಂಪನಿಯ ಹಾದಿಯನ್ನೇ ಉಳಿದ ಕಂಪನಿಗಳು ಹಿಡಿಯಬಹುದೆಂಬ ಆತಂಕ ಅಲ್ಲಿನ ಇತರ ಕಂಪನಿಗಳ ಉದ್ಯೋಗಿಗಳಲ್ಲಿ ಮನೆಮಾಡಿದೆ. ಟೆಸ್ಲಾ ಕಂಪನಿಯು ಕರೋನಾ ವೈರಸ್ ವಿರುದ್ಧ ಹೋರಾಡಲು ಅಲ್ಲಿನ ಸರ್ಕಾರದ ಜೊತೆಗೆ ಕೈಜೋಡಿಸಿದೆ. ವೆಂಟಿಲೇಟರ್ ಗಳನ್ನು ಉತ್ಪಾದಿಸಿ ಪ್ರಪಂಚದ ಬೇರೆ ಬೇರೆ ದೇಶಗಳಿಗೆ ಸರಬರಾಜು ಮಾಡಿದೆ.

Most Read Articles

Kannada
English summary
Corona effect Tesla to cut salary and employment. Read in Kannada.
Story first published: Thursday, April 9, 2020, 16:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X