ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಭಾರತದ ರಸ್ತೆಗಳು ಸಂಚಾರ ದಟ್ಟಣೆಗೆ ಕುಖ್ಯಾತಿ ಪಡೆದಿವೆ. ವಿಶೇಷವಾಗಿ ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ಹಾಗೂ ಕೋಲ್ಕತ್ತಾದಂತಹ ದೊಡ್ಡ ನಗರಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ವಿಪರೀತವಾಗಿದೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಆದರೆ ಕರೋನಾ ವೈರಸ್ ನಿಂದ ಜಾರಿಗೊಳಿಸಲಾದ ಲಾಕ್‌ಡೌನ್ ಎಲ್ಲಾ ನಗರಗಳ ಸಂಚಾರ ದಟ್ಟಣೆಗೆ ಬ್ರೇಕ್ ಹಾಕಿತ್ತು. ಲಾಕ್‌ಡೌನ್ ಅವಧಿಯಲ್ಲಿ ಶಾಲೆ, ಕಾಲೇಜು, ಪಾರ್ಕ್ ಹಾಗೂ ಚಿತ್ರಮಂದಿರಗಳನ್ನು ಮುಚ್ಚಲಾಗಿತ್ತು. ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದವು.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಸಾರ್ವಜನಿಕ ಸಾರಿಗೆ ವಾಹನಗಳಾದ ಬಸ್ಸು, ಆಟೋ ಹಾಗೂ ಟ್ಯಾಕ್ಸಿಗಳ ಸಂಚಾರವನ್ನು ಸಹ ಸ್ಥಗಿತಗೊಳಿಸಲಾಗಿತ್ತು. ಸಾರ್ವಜನಿಕ ಸಾರಿಗೆಗಳು ಮಾತ್ರವಲ್ಲದೇ ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರದ ಮೇಲೂ ನಿರ್ಬಂಧ ವಿಧಿಸಲಾಗಿತ್ತು. ಇವುಗಳಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಲಾಕ್‌ಡೌನ್ ಅನ್ನು ಹಂತ ಹಂತವಾಗಿ ತೆಗೆದು ಹಾಕಿದ ನಂತರ ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ. ಭಾರತದ ರಸ್ತೆಗಳಲ್ಲಿ ಮತ್ತೆ ಸಂಚಾರ ದಟ್ಟಣೆ ಆರಂಭವಾಗಿದೆ. ಆದರೆ ಕೆಲವು ನಗರಗಳಲ್ಲಿ ಜನರು ಹೊರ ಬರಲು ಹೆದರುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಆದರೆ ಆಶ್ಚರ್ಯಕರ ಸಂಗತಿಯೆಂದರೆ ಕರೋನಾ ವೈರಸ್ ಹರಡುವುದಕ್ಕೂ ಮುನ್ನ ಇದ್ದ ವಾಹನ ದಟ್ಟಣೆಗಿಂತ ಹೆಚ್ಚಿನ ದಟ್ಟಣೆ ಈಗ ಹೈದರಾಬಾದ್‌ನ ರಸ್ತೆಗಳಲ್ಲಿ ಕಂಡು ಬರುತ್ತಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಹೈದರಾಬಾದ್‌ನಲ್ಲಿನ ವಾಹನ ದಟ್ಟಣೆಯ ಕುರಿತು ಬಿಡುಗಡೆಯಾದ ಅಂಕಿ ಅಂಶಗಳಿಂದ ಈ ವಿಷಯ ಬಹಿರಂಗವಾಗಿದೆ. ಹೈದರಾಬಾದ್‌ನ ಏಳು ಪ್ರದೇಶಗಳಲ್ಲಿ ನವೆಂಬರ್ 2ರಂದು 1,24,528 ವಾಹನಗಳು ಸಂಚರಿಸಿವೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಫೆಬ್ರವರಿ 3ರಂದು ಕರೋನಾ ವೈರಸ್ ಹರಡುವ ಮೊದಲು ಈ ಪ್ರದೇಶಗಳಲ್ಲಿಯೇ 1,10,478 ವಾಹನಗಳು ಸಂಚರಿಸಿದ್ದವು. ಇನ್ನು ಲಾಕ್‌ಡೌನ್ ಜಾರಿಗೂ ಮುನ್ನ ಮಾರ್ಚ್ 2ರಂದು 1,02,119 ವಾಹನಗಳು ಸಂಚರಿಸಿದ್ದವು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಇನ್ನು ಲಾಕ್‌ಡೌನ್ ಜಾರಿಯಲ್ಲಿದ್ದ ಏಪ್ರಿಲ್ 6ರಂದು ಇದೇ ಪ್ರದೇಶಗಳಲ್ಲಿ ಕೇವಲ 34,739 ವಾಹನಗಳು ಸಂಚರಿಸಿದ್ದವು. ಈ ಎಲ್ಲಾ ದಿನಗಳು ಸೋಮವಾರ ಎಂಬುದು ವಿಶೇಷ. ಅಂದರೆ ಕರೋನಾ ಸಮಸ್ಯೆ ಎದುರಾಗುವ ಮುನ್ನ, ಲಾಕ್‌ಡೌನ್ ಅವಧಿಯಲ್ಲಿ ಹಾಗೂ ಲಾಕ್‌ಡೌನ್ ನಂತರದ ಸೋಮವಾರಗಳಂದು ಸಂಚಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಈ ಅಂಕಿ ಅಂಶಗಳಿಂದ ಹೈದರಾಬಾದ್‌ನಲ್ಲಿ ಕರೋನಾ ವೈರಸ್ ಎದುರಾಗುವ ಮುನ್ನ ಇದ್ದ ದಟ್ಟಣೆಗಿಂತ ಹೆಚ್ಚಿನ ದಟ್ಟಣೆ ಉಂಟಾಗಿರುವುದು ಕಂಡು ಬಂದಿದೆ. ಶಾಲಾ ಕಾಲೇಜುಗಳು ಹಾಗೂ ಚಿತ್ರಮಂದಿರಗಳನ್ನು ಪುನಃ ತೆರೆಯುವ ಮುನ್ನವೇ ವಾಹನ ದಟ್ಟಣೆ ಹೆಚ್ಚಾಗಿದೆ ಎಂಬುದು ಗಮನಾರ್ಹ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಏರಿಕೆಯಾದ ವಾಹನ ದಟ್ಟಣೆ

ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕರೋನಾ ವೈರಸ್ ಮಹಾಮಾರಿ ತೊಲಗಿದ ನಂತರ ವಾಹನ ದಟ್ಟಣೆಯು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Corona Virus effect traffic jam increases more than pre covid days. Read in Kannada.
Story first published: Wednesday, November 11, 2020, 9:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X