ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಕರೋನಾ ವೈರಸ್ ಇಡೀ ಜಗತ್ತನ್ನು ಭಾಡಿಸುತ್ತಿದೆ. ವಿಶ್ವಾದ್ಯಂತ, ಕೋವಿಡ್ -19 ವೈರಸ್‌ನಿಂದಾಗಿ 15,000 ಕ್ಕೂ ಹೆಚ್ಚು ಸಾವನ್ನಪ್ಪಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಕರೋನಾ ವೈರಸ್ ಭಾರತದಲ್ಲಿಯೂ ವೇಗವಾಗಿ ಹರಡುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಮಾರ್ಚ್ 22ರಿಂದ ಒಂದು ವಾರದವರೆಗೆ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳನ್ನು ಭಾರತದಲ್ಲಿ ಇಳಿಯಲು ಅನುಮತಿ ನೀಡುವುದಿಲ್ಲವೆಂದು ಕೇಂದ್ರ ಸರ್ಕಾರವು ಘೋಷಿಸಿದೆ. ಏರ್ ಇಂಡಿಯಾ ವಿಶ್ವದ ವಿವಿಧ ದೇಶಗಳಿಗೆ ಹಾರಾಟ ನಡೆಸಿದೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಭಾರತಕ್ಕೆ ಕರೆತರಲು ಏರ್ ಇಂಡಿಯಾ ಈ ಕ್ರಮಕ್ಕೆ ಮುಂದಾಗಿದೆ. ಕಳೆದ ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಏರ್ ಇಂಡಿಯಾ ಬೋಯಿಂಗ್ 777 ಇಆರ್ ವಿಮಾನದಲ್ಲಿ 263 ವಿದ್ಯಾರ್ಥಿಗಳನ್ನು ಇಟಲಿಯ ರೋಮ್‌ನಿಂದ ರಕ್ಷಿಸಿ ಕರೆತರಲಾಯಿತು.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಕರೋನಾ ವೈರಸ್ ನಿಂದಾಗಿ, ವಿಶ್ವದ ವಿವಿಧ ದೇಶಗಳು ತಮ್ಮ ಗಡಿಗಳನ್ನು ಬಂದ್ ಮಾಡಿವೆ. ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಿರುವ ಕಾರಣಕ್ಕೆ, ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ ಕಾರ್ಯಕ್ಕೆ ಏರ್ ಇಂಡಿಯಾ ಮುಂದಾಗಿದೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಇದುವರೆಗೂ ಚೀನಾ, ಇಟಲಿ, ಇರಾನ್‌ ದೇಶಗಳಲ್ಲಿ ಸಿಕ್ಕಿಬಿದ್ದಿದ್ದ ಭಾರತೀಯರನ್ನು ರಕ್ಷಿಸಲಾಗಿದೆ. ಈ ಮೂರೂ ದೇಶಗಳು ಕರೋನಾ ವೈರಸ್‌ನಿಂದ ಹೆಚ್ಚು ತೊಂದರೆಗೆ ಒಳಗಾಗಿವೆ. ಕಳೆದ ವಾರ ಇಟಲಿಯ ಮಿಲನ್‌ಗೆ ಹೋಗಿದ್ದ ಏರ್ ಇಂಡಿಯಾದ ವಿಶೇಷ ವಿಮಾನವು ಅಲ್ಲಿದ್ದ 230 ಭಾರತೀಯರನ್ನು ರಕ್ಷಿಸಿತ್ತು.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಫೆಬ್ರವರಿ 1ರಂದು ಕರೋನಾ ವೈರಸ್‌ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್‌ಗೆ ತೆರಳಿದ್ದ ಏರ್ ಇಂಡಿಯಾ 747 ವಿಮಾನವು ಅಲ್ಲಿದ್ದ 324 ಭಾರತೀಯರನ್ನು ರಕ್ಷಿಸಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ದೇಶ ಕೈಗೊಂಡ ಅತ್ಯಾಧುನಿಕ ರಕ್ಷಣಾ ಕಾರ್ಯಾಚರಣೆಗಳಲ್ಲಿ ಇದು ಒಂದಾಗಿದೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಹಲವು ದೇಶಗಳು ಹಿಂಜರಿದಾಗ, ಭಾರತವು ತ್ವರಿತವಾಗಿ ಕಾರ್ಯನಿರ್ವಹಿಸಿದೆ. ಬಹಳಷ್ಟು ಜನರು ಏರ್ ಇಂಡಿಯಾದ ಸೇವೆಯನ್ನು ಇಷ್ಟಪಡುವುದಿಲ್ಲ. ಈ ಹಿಂದೆ ಏರ್ ಇಂಡಿಯಾದ ಆಹಾರದ ಬಗ್ಗೆ ಅನೇಕರು ಲೇವಡಿ ಮಾಡಿದ್ದರು.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಅದರಲ್ಲಿರುವ ವಯಸ್ಸಾದ ನೌಕರರ ಬಗ್ಗೆಯೂ ಲೇವಡಿ ಮಾಡಲಾಗಿದೆ. ತನ್ನ ಅಂತರರಾಷ್ಟ್ರೀಯ ಮಾರ್ಗಗಳ ಅನುಭವದಿಂದಾಗಿ ಏರ್ ಇಂಡಿಯಾ ಬೇರೆ ದೇಶಗಳಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿದೆ. ಇನ್ನು ಮುಂದೆ ಏರ್ ಇಂಡಿಯಾವನ್ನು ಲೇವಡಿ ಮಾಡುವುದು ಕಡಿಮೆಯಾಗುವ ಸಾಧ್ಯತೆಗಳಿವೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತೀಯರನ್ನು ರಕ್ಷಿಸಲು ಏರ್ ಇಂಡಿಯಾ ಬೋಯಿಂಗ್ 777 ಇಆರ್ ವಿಮಾನವನ್ನು ರೋಮ್‌ಗೆ ಏಕೆ ಕಳುಹಿಸಲಾಯಿತು ಎಂದು ನಿಮಗೆ ತಿಳಿದಿದೆಯೇ? ಬೋಯಿಂಗ್ 777 ಇಆರ್ ವಿಮಾನಗಳು ದೀರ್ಘ-ಪ್ರಯಾಣಕ್ಕೆ ಹಾಗೂ ಹೆಚ್ಚು ಜನರನ್ನು ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿವೆ. ಈ ಕಾರಣಕ್ಕೆ ಏರ್ ಇಂಡಿಯಾ ಬೋಯಿಂಗ್ 777 ಇಆರ್ ವಿಮಾನವನ್ನು ಆಯ್ಕೆ ಮಾಡಲಾಗಿದೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ರೋಮ್ ದೆಹಲಿಯಿಂದ 5,898 ಕಿ.ಮೀ. ದೂರದಲ್ಲಿದೆ. ದೆಹಲಿಯಿಂದ ರೋಮ್‌ಗೆ ಹೋಗಲು ಹೆಚ್ಚು ಸಮಯ ಬೇಕಾಗುತ್ತದೆ. ಏರ್ ಇಂಡಿಯಾದ ಬೋಯಿಂಗ್ 777 ಇಆರ್ ವಿಮಾನವು ಇದಕ್ಕೆ ಹೇಳಿ ಮಾಡಿಸಿದಂತಿದೆ. ಇದರ ಗರಿಷ್ಠ ಟ್ಯಾಗ್-ಆಫ್ ತೂಕ 351.5 ಟನ್ ಗಲಾಗಿದೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಬೋಯಿಂಗ್ 777 ಇಆರ್ ವಿಮಾನದಲ್ಲಿ 4 ಫಸ್ಟ್ ಕ್ಲಾಸ್ ಸೀಟುಗಳು, 35 ಬಿಸಿನೆಸ್ ಕ್ಲಾಸ್ ಸೀಟುಗಳು ಹಾಗೂ 303 ಎಕಾನಮಿ ಕ್ಲಾಸ್ ಸೀಟುಗಳಿವೆ. ಈ ವಿಮಾನದ ಒಟ್ಟು ಉದ್ದ 242.3 ಅಡಿಗಳಾಗಿದ್ದು, 61.5 ಅಡಿ ಎತ್ತರವನ್ನು ಹೊಂದಿದೆ. ಇದರ ಕ್ಯಾಬಿನ್ ಅಗಲ 19.1 ಅಡಿಗಳಾಗಿದೆ. ಬೋಯಿಂಗ್ 777 ಇಆರ್ ವಿಮಾನವು ಸರಾಸರಿ 0.84 ಮ್ಯಾಕ್ ವೇಗದಲ್ಲಿ ಹಾರಾಟ ನಡೆಸುತ್ತಿದೆ.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಬೋಯಿಂಗ್ 777 ಇಆರ್ ವಿಮಾನವು 43,100 ಅಡಿ ಎತ್ತರಗಳವರೆಗೆ ಹಾರಾಡುತ್ತದೆ. ಇದರ ಇಂಧನ ದಕ್ಷತೆ 143.2 ಟನ್ ಗಲಾಗಿದೆ. ಈ ವಿಮಾನದಲ್ಲಿ 2 ಎಂಜಿನ್ ಗಳನ್ನು ಅಳವಡಿಸಲಾಗಿದೆ. ಈ ವಿಮಾನವನ್ನು ವಾಯುಯಾನ ಎಂಜಿನಿಯರಿಂಗ್‌ನ ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ವಿಮಾನದಲ್ಲಿ ಒಂದು ಬಾರಿಗೆ ಇಂಧನವನ್ನು ತುಂಬಿಸಿದರೆ 14,492 ಕಿ.ಮೀಗಳವರೆಗೆ ಹಾರಾಟವನ್ನು ನಡೆಸಬಲ್ಲದು.

ವಿದೇಶಗಳಲ್ಲಿದ್ದ ಭಾರತೀಯರನ್ನು ಪಾರುಮಾಡಿದ ಏರ್ ಇಂಡಿಯಾ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು?

ಬೋಯಿಂಗ್ 777 ಇಆರ್ ವಿಮಾನವು ಏರ್ ಇಂಡಿಯಾದಲ್ಲಿ ಮಾತ್ರವಲ್ಲದೆ ವಿಶ್ವದ ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿಯೂ ಲಭ್ಯವಿದೆ. ಬೋಯಿಂಗ್ 777 ಇಆರ್ ವಿಮಾನವು ವಿಶ್ವದ ಅತ್ಯುತ್ತಮ ವಿಮಾನಗಳಲ್ಲಿ ಒಂದಾಗಿದೆ.

More from DriveSpark

Article Published On: Tuesday, March 24, 2020, 13:32 [IST]
English summary
Interesting facts about Air India Boeing 777 ER. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+