ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಕೋವಿಡ್ -19 ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕಾರಣಕ್ಕೆ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಕೋವಿಡ್ -19 ವೈರಸ್ ಹರಡದಂತೆ ತಡೆಯಲು ಇದು ಸೂಕ್ತವಾದ ಕ್ರಮವಾಗಿದ್ದರೂ, ಅನೇಕರ ಜೀವನ ಅತಂತ್ರಕ್ಕೆ ಸಿಲುಕಿದೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಎಲ್ಲಾ ರೀತಿಯ ಸಾರಿಗೆ ಸೌಲಭ್ಯಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಕ್ಯಾಬ್ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವರದಿಗಳ ಪ್ರಕಾರ ಆಂಧ್ರ ಪ್ರದೇಶವೊಂದರಲ್ಲೇ 3,500ಕ್ಕೂ ಹೆಚ್ಚು ಕ್ಯಾಬ್ ಚಾಲಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಸ್ವಯಂಸೇವಕರಿಂದ ಸ್ವಲ್ಪ ಮಟ್ಟಿನ ನೆರವು ದೊರೆಯುತ್ತಿರುವುದು ಕ್ಯಾಬ್ ಚಾಲಕರಿಗೆ ಅಲ್ಪ ಪ್ರಮಾಣದ ಸಮಾಧಾನ ತಂದಿದೆ. ಕ್ಯಾಬ್ ಚಾಲಕರೊಬ್ಬರು ಮಾತನಾಡಿ ಲಾಕ್ ಡೌನ್ ನಿಂದಾಗಿ ನಾನು ಉಳಿಸಿದ್ದ ಹಣವೆಲ್ಲಾ ಖಾಲಿಯಾಗಿದೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ವಿಶಾಖಪಟ್ಟಣದ ಕ್ಯಾಬ್ ಯೂನಿಯನ್ ಅಧ್ಯಕ್ಷ ಜಗನ್ ರವರು ಮಾತನಾಡಿ, ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಕೆಲವು ಎನ್‌ಜಿಒಗಳು ಕ್ಯಾಬ್ ಚಾಲಕರಿಗೆ ಅಗತ್ಯ ಸಾಮಗ್ರಿಗಳನ್ನು ನೀಡಲು ಮುಂದೆ ಬಂದಿವೆ. ಆದರೆ ಇನ್ನೂ ಹೆಚ್ಚಿನ ಸಹಾಯದ ಅಗತ್ಯವಿದೆ ಎಂದು ಹೇಳಿದ್ದಾರೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಅನೇಕ ಕ್ಯಾಬ್ ಚಾಲಕರು ತಮ್ಮ ದೈನಂದಿನ ವೆಚ್ಚವನ್ನು ನಿಭಾಯಿಸಲು ಹೆಣಗಾಡಲಾರಂಭಿಸಿದ್ದಾರೆ ಎಂಬ ವರದಿಗಳಾಗಿವೆ. ಇದರ ಜೊತೆಗೆ ತಮ್ಮ ಕಾರುಗಳನ್ನು ಚಾಲನೆ ಮಾಡದೇ ಒಂದೇ ಕಡೆ ನಿಲ್ಲಿಸಬೇಕಾಗಿದೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಕಾರುಗಳು ದೀರ್ಘಕಾಲದವರೆಗೆ ಕಾರ್ಯನಿರ್ವಹಿಸದಿದ್ದಾಗ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಇದಕ್ಕಾಗಿಯೇ ಆಟೋಮೊಬೈಲ್ ಕಂಪನಿಗಳು ಕ್ಯಾಬ್ ಚಾಲಕರು ಹಾಗೂ ಕಾರು ಮಾಲೀಕರಿಗೆ ಕೆಲವು ಸಲಹೆಗಳನ್ನು ನೀಡುತ್ತಿವೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಕಾರುಗಳು ಹೆಚ್ಚು ಕಾಲದವರೆಗೆ ನಿಂತಾಗ ಕಾರಿನ ಬ್ಯಾಟರಿ ಹಾಗೂ ಎಂಜಿನ್ ದುರ್ಬಲವಾಗುತ್ತವೆ. ಈ ಕಾರಣಕ್ಕೆ ಕಾರಿನ ಎಂಜಿನ್ ಅನ್ನು ಕನಿಷ್ಠ ಐದು ನಿಮಿಷಗಳ ಕಾಲ ಆನ್ ಮಾಡಬೇಕು ಎಂದು ಹೇಳಿವೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಲಾಕ್ ಡೌನ್ ಜಾರಿಗೆ ಬಂದ ನಂತರ ಪ್ರಮುಖ ಕಾರು ಕಂಪನಿಗಳು ಈ ಅವಧಿಯಲ್ಲಿ ವಾಹನಗಳನ್ನು ಹೇಗೆ ನಿರ್ವಹಿಸಬೇಕು ಎಂದು ತಮ್ಮ ಗ್ರಾಹಕರಿಗೆ ಸಲಹೆಗಳನ್ನು ನೀಡುತ್ತಿವೆ. ಭಾರತದ ನಂಬರ್ ಒನ್ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಕಾರು ನಿರ್ವಹಣೆ ಬಗ್ಗೆ ಸಲಹೆಗಳನ್ನು ಕಳುಹಿಸುತ್ತಿದೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ನಿಮ್ಮ ವಾಹನವನ್ನು ಆರಂಭಿಸಿ, ಎಂಜಿನ್ ಅನ್ನು 15 ನಿಮಿಷಗಳ ಕಾಲ ಚಾಲನೆಯಲ್ಲಿಡಿ. ಎಸ್‌ಎಚ್‌ವಿಎಸ್ ವಾಹನಗಳ ಎಂಜಿನ್ ಹಾಗೂ ಹೆಡ್‌ಲೈಟ್ ಅನ್ನು ಆನ್ ಮಾಡಿ, 30 ನಿಮಿಷಗಳ ಕಾಲ ಚಾಲನೆಯಲ್ಲಿಡಿ ಎಂದು ಮಾರುತಿ ಸುಜುಕಿ ಕಂಪನಿಯು ತನ್ನ ಸಂದೇಶದಲ್ಲಿ ಹೇಳಿದೆ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಮಾರುತಿ ಸುಜುಕಿಯಂತೆ ಇತರ ಕಾರು ಕಂಪನಿಗಳು ಸಹ ತಮ್ಮ ವೆಬ್‌ಸೈಟ್‌ ಹಾಗೂ ಅಪ್ಲಿಕೇಶನ್‌ ಮೂಲಕ ಗ್ರಾಹಕರಿಗೆ ಸಲಹೆ ನೀಡುತ್ತಿವೆ. ಇದರ ಬಗ್ಗೆ ಮಾತನಾಡಿರುವ ಕಾರು ಮಾಲಿಕರೊಬ್ಬರು ಹೆಚ್ಚು ಕಾಲ ಕಾರ್ ಅನ್ನು ಸ್ಟಾರ್ಟ್ ಮಾಡದೇ ಇದ್ದರೆ, ತುರ್ತು ಸಮಯದಲ್ಲಿ ಕಾರು ಸ್ಟಾರ್ಟ್ ಆಗುವುದಿಲ್ಲ.

ಲಾಕ್ ಡೌನ್ ಎಫೆಕ್ಟ್: ಸಂಕಷ್ಟಕ್ಕೆ ಸಿಲುಕಿದ ಕ್ಯಾಬ್ ಚಾಲಕರು

ಲಾಕ್ ಡೌನ್ ಇನ್ನೂ ಎಷ್ಟು ಕಾಲ ಇರಲಿದೆ ಎಂದು ತಿಳಿದಿಲ್ಲ. ದೀರ್ಘಕಾಲದವರೆಗೆ ಕಾರುಗಳನ್ನು ಸ್ಟಾರ್ಟ್ ಮಾಡದೇ ಇರುವುದರಿಂದ, ಲಾಕ್ ಡೌನ್ ನಂತರ ಕಾರು ಸಮಸ್ಯೆಗಳಿಗೆ ಗುರಿಯಾಗುತ್ತದೆ. ಕಾರು ಕಂಪನಿಗಳು ನೀಡುತ್ತಿರುವ ಸಲಹೆ ನಮಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Cab owners drivers life during lockdown. Read in Kannada.
Story first published: Wednesday, April 8, 2020, 11:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X