ಪ್ರಪಂಚದ ಉತ್ತಮ, ಕೆಟ್ಟ ಚಾಲಕರನ್ನು ಹೊಂದಿರುವ ದೇಶಗಳ ಪಟ್ಟಿ ಬಹಿರಂಗ: ಭಾರತಕ್ಕೆ ಶುರುವಾಯ್ತು ಭಯ!

ಭಾರತದ ರಸ್ತೆಗಳು ಚಾಲಕರಿಗೆ ಸುರಕ್ಷಿತವಲ್ಲ ಎಂಬುದು ಗೊತ್ತೆಯಿದೆ. ಪ್ರತಿದಿನ ಒಂದಿಲೊಂದು ಅಪಘಾತದ ಸುದ್ದಿಯನ್ನು ಕೇಳುತ್ತಲೇ ಇರುತ್ತೇವೆ. ದೇಶದಲ್ಲಿ ಹೆಚ್ಚುತ್ತಿರುವ ವಾಹನಗಳಿಂದ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಅಧ್ಯಯನವೊಂದರ ವರದಿಯಲ್ಲಿ ಪ್ರಪಂಚದಲ್ಲಿಯೇ ಅತ್ಯಂತ ಕೆಟ್ಟ ಚಾಲಕರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ.

ಚಾಲನಾ ಜ್ಞಾನವನ್ನು (driving knowledge) ಕೆಲವೊಂದು ಮಾನದಂಡ ಇಟ್ಟುಕೊಂಡು ಅಳೆಯುವುದು ತುಂಬಾ ಕಷ್ಟ. ಸಂಚಾರ ದಟ್ಟಣೆಯ ಅಪಾಯ, ಮಧ್ಯಪಾನ ಸೇವನೆ, ರಸ್ತೆ ಗುಣಮಟ್ಟ, ಅಪಘಾತಗಳ ಸಾವಿನ ಸಂಖ್ಯೆ ಹಾಗೂ ಸಂಚಾರಿ ನಿಯಮಗಳ ಅರಿವು ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿ, ವಿಶ್ವಾದ್ಯಂತ ಒಟ್ಟು 50 ದೇಶಗಳ ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಕೆಲವೊಂದು ಮಹತ್ವದ ಮಾಹಿತಿಗಳು ಬಹಿರಂಗಗೊಂಡಿದ್ದು, ಕೆಲವು ದೇಶಗಳು ತೀರಾ ಕಳಪೆ ಮಟ್ಟದ ಸಾಧನೆ ಮಾಡಿವೆ.

ಪ್ರಪಂಚದಲ್ಲೇ ಉತ್ತಮ, ಕೆಟ್ಟ ಚಾಲಕರನ್ನು ಹೊಂದಿರುವ ದೇಶಗಳ ಪಟ್ಟಿ ಬಹಿರಂಗ: ಭಾರತಕ್ಕೆ 4ನೇ ಸ್ಥಾನ

ವರದಿ ಪ್ರಕಾರ, 'ಜಪಾನ್' ವಿಶ್ವದಲ್ಲೇ ಅತ್ಯಂತ ಉತ್ತಮ ಚಾಲಕರನ್ನು ಹೊಂದಿರುವ ದೇಶವಾಗಿದೆ. ಇಲ್ಲಿನ ಜನರು, ಸಂಚಾರಿ ನಿಯಮಗಳನ್ನು ಉತ್ತಮವಾಗಿ ಪಾಲಿಸುತ್ತಾರೆ. ರಸ್ತೆಗಳ ಗುಣಮಟ್ಟವು ಅತ್ಯುತ್ತಮವಾಗಿವೆ. ಅಲ್ಲದೆ, ಮಧ್ಯ ಸೇವನೆ ಮಾಡಿದ ವೇಳೆ ಚಾಲಕರು ವಾಹನಗಳನ್ನು ಓಡಿಸುವುದಿಲ್ಲ. ಜೊತೆಗೆ ಜಪಾನ್ ಪಾದಚಾರಿಗಳಿಗೂ ಅತ್ಯಂತ ಸುರಕ್ಷಿತ ದೇಶವಾಗಿದೆ. ಪ್ರಪಂಚದ 10 ರಸ್ತೆ ಸುರಕ್ಷತೆಯನ್ನು ಹೊಂದಿರುವ ರಾಷ್ಟ್ರಗಳು ಯುರೋಪ್‌ನಲ್ಲಿವೆ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ. ಜಪಾನ್ ಬಳಿಕ, ನೆದರ್ಲ್ಯಾಂಡ್ಸ್ ಹಾಗೂ ನಾರ್ವೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ಈ ಅಧ್ಯಯನದ ಪ್ರಕಾರ, ವಿಶ್ವದ ಅತ್ಯಂತ ಕೆಟ್ಟ ಚಾಲಕರು ಹಾಗೂ ರಸ್ತೆ ಸುರಕ್ಷತೆ ಹೊಂದಿರದ ದೇಶಗಳ ಪಟ್ಟಿಯಲ್ಲಿ ಥೈಲ್ಯಾಂಡ್ ಮೊದಲ ಸ್ಥಾನದಲ್ಲಿದಲ್ಲಿದೆ. ಪೆರು ಎರಡನೇ ಸ್ಥಾನದಲ್ಲಿದ್ದರೆ, ಲೆಬನಾನ್ ದೇಶವು ಮೂರನೇ ಸ್ಥಾನದಲ್ಲಿದೆ. ಇನ್ನು, ಭಾರತ ನಾಲ್ಕನೇ ಸ್ಥಾನದಲ್ಲಿದೆ. ಸಂಶೋಧನೆಯಲ್ಲಿ ಜಪಾನ್‌ ಪಡೆದ 4.57 ಅಂಕಗಳಿಗೆ ಹೋಲಿಸಿದರೆ, ಭಾರತವು ಕೇವಲ 2.34 ಅಂಕಗಳನ್ನು ಗಳಿಸಿದೆ. ದೇಶದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳು ಹಾಗೂ ಅವುಗಳಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆ ಗಣನೀಯವಾಗಿ ಏರುತ್ತಿದೆ.

ದೇಶದಲ್ಲಿ ಹೆಚ್ವು ಅಪಘಾತವಾಗುವ ದೊಡ್ಡ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಮೊದಲ ಸ್ಥಾನದಲ್ಲಿದ್ದು, ನಂತರ, ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನಗರಗಳಿವೆ. ಅಪಘಾತದ ಪ್ರಮಾಣ ಎಲ್ಲಿ ಎಷ್ಟಿದೆ ಎಂಬುವುದನ್ನು ನೋಡುವುದಾದರೆ, ದೆಹಲಿಯಲ್ಲಿ ಶೇಕಡ 20.3% ಹಾಗೂ ಮುಂಬೈನಲ್ಲಿ ಶೇಕಡ 18.8% ಇದೆ. ಆದರೆ, ವಾಣಿಜ್ಯ ನಗರಿ ಮುಂಬೈ ಅತಿಹೆಚ್ಚಿನ ವಾಹನ ಸಾಂದ್ರತೆ (vehicle density) ಹೊಂದಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ನೆಮ್ಮದಿ ವಿಚಾರವೆಂದರೆ, ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕಡಿಮೆ ಅಪಘಾತ ಪ್ರಕರಣಗಳು ದಾಖಲಾಗುತ್ತದೆ. ಆದರೆ, ಸಂಚಾರ ದಟ್ಟಣೆ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ, 2022ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಲಂಡನ್‌ ಮೊದಲ ಸ್ಥಾನದಲ್ಲಿದ್ದರೆ, ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ನಗರದ ಮಧ್ಯಭಾಗದಲ್ಲಿ ಪ್ರತಿ 10 ಕಿಲೋಮೀಟರ್‌ ಪ್ರಯಾಣಕ್ಕೆ ಬರೋಬ್ಬರಿ 29 ನಿಮಿಷ 10 ಸೆಕೆಂಡ್‌ಗಳು ಬೇಕಾಗುತ್ತದೆ.

ಒಟ್ಟಾರೆ, ಹಲವು ಕಾರಣಗಳಿಗೆ ನಮ್ಮ ಸುತ್ತಲು ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇರುತ್ತವೆ. ನೀವು ಎಚ್ಚರಿಕೆಯಿಂದ ಸಂಚಾರ ನಿಯಮಗಳನ್ನು ಪಾಲಿಸುಕೊಂಡು ವಾಹನ ಚಾಲನೆ ಮಾಡುವುದರಿಂದ ದೊಡ್ಡ ಮಟ್ಟದ ಅಪಾಯಗಳನ್ನು ತಪ್ಪಿಸಬಹುದು. ಜೊತೆಗೆ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೈಲ್ಮೆಟ್ ಧರಿಸಿ, ಕಾರುಗಳಲ್ಲಿ ಸೀಟ್ ಬೈಲ್ಟ್ ಹಾಕಿಕೊಳ್ಳಿರಿ. ಜೊತೆಗೆ ಮಧ್ಯಪಾನ ಮಾಡದಿರಿ. ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನಗಳನ್ನು ಓಡಿಸಬೇಡಿ. ಈ ಮೂಲಕ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, February 18, 2023, 10:27 [IST]
English summary
Countries with the world best and worst drivers revealed details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+