ಸ್ಕೂಟರ್‌ನ ಬೆಡ್‌ರೂಂ ಮಾಡಿಕೊಂಡ ಪ್ರೇಮಿಗಳು... ಮಲ್ಲು ಸಿನಿಮಾಗಳನ್ನೇ ಸೆಡ್ಡುಹೊಡಿಯುತ್ತೆ ಇವರ ರೊಮ್ಯಾನ್ಸ್!
ಇತ್ತೀಚೆಗೆ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಪ್ರೇಮಿಗಳ ಹಾವಳಿ ಹೆಚ್ಚಾಗಿತ್ತು. ನಿಲ್ದಾಣದೊಳಗೆ ಎಲ್ಲಂದರಲ್ಲಿ ರೊಮಾನ್ಸ್ ಮಾಡುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದರು. ಜೊತೆಗೆ ಈ ಕುರಿತ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಹೆಚ್ಚಿನ ಪೊಲೀಸರನ್ನು ನೇಮಿಸಿತ್ತು.
ದೆಹಲಿ ಮೆಟ್ರೋ ರೈಲಿನೊಳಗೆ ಪೊಲೀಸರು ಗನ್ ಹಿಡಿದು ನಿಂತಿರುವ ಫೋಟೋಗಳು ಕೂಡ ಇತ್ತೀಚಗೆ ವೈರಲ್ ಆಗಿವೆ. ಇದಾದ ಬಳಿಕ ಇಂತಹ ಕೃತ್ಯಗಳು ಕಡಿಮೆಯಾಗಿವೆ ಎಂದುಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಇನ್ನೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಾರಿ ಯುವಕ ಹಾಗೂ ಯುವತಿಯು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಾ ವಿಚಿತ್ರ ಭಂಗಿಯಲ್ಲಿ ಕುಳಿತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಮೆಟ್ರೋ ಸ್ಟೇಷನ್ ಅಥವಾ ರೈಲಿನಲ್ಲಿ ಸಾರ್ವಜನಿಕರು ಕಡಿಮೆಯಿದ್ದಾಗ ಸರಸಸಲ್ಲಾಪ ಮಾಡಿರುವುದು ವೈರಲ್ ಆಗಿತ್ತು. ಆದ್ರೆ ಈಗ ಜನನಿಬಿಡ ರಸ್ತೆಯಲ್ಲಿ ಈ ರೀತಿ ಸವಾರಿ ಮಾಡಿರುವುದು ಹಿರಿಯ ನಾಗರಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ಮಾಡುವುದಕ್ಕೂ ಮುನ್ನ ಇನ್ನೂ ಕೆಟ್ಟದ್ದಾಗಿ ವರ್ತಿಸಿದ್ದರು ಎಂದು ಹೇಳಲಾಗುತ್ತಿದೆಯಾದ್ರೂ ಅದಕ್ಕೆ ಯಾವದೇ ಪುರಾವೆ ಇಲ್ಲ.
ಸದ್ಯ ಸಿಕ್ಕಿರುವ ವಿಡಿಯೋ ಪ್ರಕಾರ ಜನನಿಬಿಡ ದೆಹಲಿ ರಸ್ತೆಯೊಂದರಲ್ಲಿ ಯುವಕ ಡ್ರೈವಿಂಗ್ ಮಾಡುತ್ತಲೇ ಹಿಂಬದಿ ಕುಳಿತಿರುವ ತನ್ನ ಪ್ರೇಯಸಿಯನ್ನು ತಬ್ಬಿಕೊಳ್ಳುವ ರೀತಿ ಕುಳಿತಿದ್ದ. ಯುವತಿ ಕೂಡ ಆ ಯುವಕನನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಶಾಲು ಕಶ್ಯಪ್ ತನೇಜಾ ಎಂಬ ಬಳಕೆದಾರರು ಈ ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕ್ಲಿಪ್ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದು "ಹೊಸ ಪೀಳಿಗೆಯ ಹೊಸ ಸೃಷ್ಟಿ." 'ದೆಹಲಿ ಮೆಟ್ರೋದೊಳಗೆ ಸ್ಥಳಾವಕಾಶ ಸಿಗಲಿಲ್ಲವೇ' ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಅವರ ಕಾಮೆಂಟ್‌ಗಳನ್ನು ಪಕ್ಕಕ್ಕಿಟ್ಟರೆ ಇದು ತುಂಬಾ ಅಪಾಯಕಾರಿ, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಎದುರಿಗೆ ಇನ್ಯಾವುದೋ ವಾಹನ ಬಂದರೇ ಇಬ್ಬರ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ.
ಮಲ್ಲು ಸಿನಿಮಾಗಳನ್ನೇ ಸೆಡ್ಡುಹೊಡಿಯುತ್ತೆ ಇವರ ರೊಮ್ಯಾನ್ಸ್: ಇತ್ತೀಚೆಗೆ ಜಾರ್ಖಂಡ್ ಮೂಲದ ಇನ್‌ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಲಾಗಿದ್ದ ವಿಡಿಯೋದಲ್ಲಿ ಇಬ್ಬರು ಯುವತಿಯರು ಚಲಿಸುತ್ತಿರುವ ಬೈಕಿನಲ್ಲಿ ಪರಸ್ಪರ ಮುಖ ಮಾಡಿಕೊಂಡು ಚುಂಬಿಸುವ ವಿಡಿಯೋ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ನೆಟ್ಟಿಗರು ಫುಲ್ ಗರಂ ಆಗಿದ್ದರು. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಸರ್ಕಾರಗಳು ಎಷ್ಟೇ ಕ್ರಮ ಕೈಗೊಂಡರೂ ಇಂತಹ ಘಟನೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇವೆ. ಬೈಕ್ ಹಾಗೂ ಕಾರುಗಳಲ್ಲಿ ಹೀಗೆ ಸ್ಟಂಟ್ ಮಾಡಿಕೊಂಡು ತಾವು ಅಪಾಯಕ್ಕೆ ಸಿಲುಕುವುದಲ್ಲದೇ ಎದರುಗಡೆ ಬರುವ ಪ್ರಯಾಣಿಕರನ್ನೂ ಅಪಘಾತಗಳಿಗೆ ಸಿಲುಕಿಸುವುದು ಸರಿಯಲ್ಲ. ಯುವತಿ, ಯುವಕರು ಈ ಲೇಖನವನ್ನು ಓದುತ್ತಿದ್ದರೇ ದಯವಿಟ್ಟು ಇಂತಹ ಕೆಲಸಗಳನ್ನು ಮಾಡದಿರಿ ಎಂಬುದು ಡ್ರೈವ್‌ಸ್ಪಾರ್ಕ್ ವಿನಂತಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications