ಶಕ್ತಿ ಯೋಜನೆಯಿಂದ ಆದಾಯ ಹೆಚ್ಚಳ: ಆದರೆ ವಿಮಾ ಪರಿಹಾರ ನೀಡಿಲ್ಲ: KSRTC ಬಸ್ ಜಪ್ತಿ
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆಯಲ್ಲಿ ಸರ್ಕಾರಿ ಬಸ್‌ಗಳ ಬಳಕೆಯು ಹೆಚ್ಚಾಗಿದ್ದು, ಮಹಿಳೆಯರಿಗೆ ಉಚಿತ ಸೇವೆಯನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಶೂನ್ಯ ದರದ ಟಿಕೆಟ್ ನೀಡಲಾಗುತ್ತದೆ. ಈ ಟಿಕೆಟ್ ಮೊತ್ತವನ್ನು ಸರ್ಕಾರ ಪಾವತಿಸುತ್ತಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರೋದರಿಂದ ಆದಾಯ ಸಹ ಏರಿಕೆಯಾಗಿದೆ.
ಆದರೆ ಅಪಘಾತ ವಿಮೆ ಪರಿಹಾರ ನೀಡುವಲ್ಲಿ ಕೆಎಸ್ಆರ್ಟಿಸಿ (KSRTC) ಸಂಸ್ಥೆ ವಿಫಲವಾಗಿದೆ. ವಿಮೆ ಪರಿಹಾರ ನೀಡಿದ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಅನ್ನು ನ್ಯಾಯಾಲಯ ಜಪ್ತಿ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಬಸ್ ಅನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

2010ರಲ್ಲಿ ವಿರಾಜಪೇಟೆಯ ಮೂಲದ ಮುನಾವರ್ ಎಂಬವರು ತಮ್ಮ ಕುಟುಂಬದವರೊಂದಿಗೆ ಹ್ಯುಂಡೈ ಸ್ಯಾಂಟ್ರೋ ಕಾರಿನಲ್ಲಿ ಮೈಸೂರಿಗೆ ತೆರಳುತ್ತಿದ್ದರು. ಮೈಸೂರಿಗೆ ಹೋಗುವ ಹುಣಸೂರು ತಾಲ್ಲೂಕಿನ ಕಲ್ಲಬೆಟ್ಟ ಮಾರ್ಗದಲ್ಲಿ ಬಂದ ಕೆಎಸ್ಆರ್ಟಿಸಿ ಬಸ್ ಇವರ ಸ್ಯಾಂಟ್ರೋ ಕಾರಿಗೆ ಡಿಕ್ಕಿ ಹೊಡಿದಿದೆ. ಈ ಅಪಘಾತದಲ್ಲಿ ಮುನಾವರ್ ಅವರು ಮೃತಪಟ್ಟಿದ್ದರು. ಅಪಘಾತದ ಬಳಿಕ ನ್ಯಾಯಾಲಯದಲ್ಲಿ ಕೇಸ್ ಆಗಿತ್ತು.
ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಮುನಾವರ್ ಕುಟುಂಬಕ್ಕೆ ಕೆಎಸ್ಆರ್ಟಿಸಿ ಪರಿಹಾರವನ್ನೂ ನೀಡಲು ಆದೇಶವನ್ನು ನೀಡಿದರು. ಆದೇಶದ ಬಳಿಕ ಮುನಾವರ್ ಕುಟುಂಬಕ್ಕೆ ಕೆಎಸ್ಆರ್ಟಿಸಿ ಪರಿಹಾರವನ್ನೂ ನೀಡಿತ್ತು. ಪೂರ್ಣ ಜಖಂಗೊಡಿದ್ದ ಕಾರಿಗೂ ವಿಮಾ ಪರಿಹಾರ ಹಣ ನೀಡುವಂತೆ ಮುನಾವರ್ ಪತ್ನಿ ಫಾತಿಮಾ ಅಫ್ಸರ್ ವಿರಾಜಪೇಟೆ ಹೆಚ್ಚುವರಿ ಸೆಷನ್ಸ್ ನ್ಯಾಲಾಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ವಿಮಾ ಪರಿಹಾರದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಿಗೆ ವಿಮಾ ಪರಿಹಾರ ಹಣ ರೂ.1,48,130 ಪಾವತಿಸುವಂತೆ ಆದೇಶ ಮಾಡಿತ್ತು. ಇದನ್ನು ಪ್ರಶ್ನಿಸಿ ಕೆಎಸ್ಆರ್ಟಿಸಿ ಸಂಸ್ಥೆಯು ಹೈಕೋರ್ಟ್ ಮೊರೆ ಹೋದರು. ಆದರೆ ಹೈಕೋರ್ಟ್ ಕೆಎಸ್ಆರ್ಟಿಸಿ ನೀಡಿದ ಅರ್ಜಿಯನ್ನು ತಳ್ಳಿಹಾಕಿ ನ್ಯಾಯಾಲಯದ ಆದೇಶ ಪಾಲಿಸುವಂತೆ ಸೂಚಿಸಿತು. ಆದರೆ ಕೆಎಸ್ಆರ್ಟಿಸಿ ವಿಮಾ ಪರಿಹಾರ ಹಣವನ್ನು ನೀಡಿರಲಿಲ್ಲ.
ಇದರಿಂದ ವಿರಾಜಪೇಟೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಸಾರಿಗೆ ಬಸ್ ಅನ್ನೇ ಜಪ್ತಿ ಮಾಡುವಂತೆ ಆದೇಶ ಮಾಡಿತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ವಿರಾಜಪೇಟೆ ಬಸ್ ನಿಲ್ದಾಣಕ್ಕೆ ತೆರಳಿ ಪ್ರಕರಣಕ್ಕೆ ಸಂಬಂಧಪಟ್ಟ ಕೊಳ್ಳೇಗಾಲ ಡಿಪೋಕ್ಕೆ ಸೇರಿದ ಬಸ್ ಅನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಅರ್ಜಿದಾರರ ಪರವಾಗಿ ವಿರಾಜಪೇಟೆಯ ವಕೀಲ ಟಿ.ಪಿ.ಕೃಷ್ಣ ವಾದ ಮಂಡಿಸಿದ್ದರು.
ಇನ್ನು ಕೆಎಸ್ಆರ್ಟಿಸಿ ಸಂಬಧಿಸಿದ ಸುದ್ದಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲ ವಿಭಾಗೀಯ ಡಿಪೋ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳ ನವೀಕರಣ ಪ್ರಾರಂಭವಾಗಿದೆ. ವರದಿಗಳ ಪ್ರಕಾರ, ಹೊಸ ಬಸ್ ಖರೀದಿಸಬೇಕಾದರೆ ಕೆಎಸ್‌ಆರ್‌ಟಿಸಿಗೆ ಕನಿಷ್ಠ 18 ರಿಂದ 20 ಲಕ್ಷ ಬೇಕಾಗುತ್ತದೆ. ಆದರೆ 12-15 ವರ್ಷಗಳ ಹಳೆಯ ಬಸ್‌ಗಳನ್ನು ಮತ್ತೆ ಉತ್ತಮ ಸ್ಥತಿಗೆ ತರಲು 4 ಲಕ್ಷ ರೂ. ವೆಚ್ಚ ತಗಲುತ್ತಿದೆ.
ತಾಂತ್ರಿಕವಾಗಿ ಗುಣಮಟ್ಟದಿಂದ ಬಸ್‌ಗಳನ್ನು ಸಿದ್ಧಪಡಿಸುವ ಕೆಲಸ ಮಾಡಲಾಗುತ್ತಿದೆ. ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಭಾಗಗಳನ್ನು ಹೊರ ತೆಗೆದು ಹೊಸ ಉಪಕರಣ ಜೋಡಿಸಲಾಗುವುದು. ಬಸ್‌ನ ಬಾಡಿಯನ್ನು ಹೊಸದಾಗಿ ತಯಾರಿಸಿ ಅಳವಡಿಸಲಾಗುವುದು. ಹೊಸ ಸೀಟ್ ಕುಶನ್‌ಗಳು ಮತ್ತು ಕವರ್, ಹೊಸ ಕಿಟಕಿಗಳನ್ನು ಅಳವಡಿಸಲಾಗುತ್ತದೆ. ಎಂಜಿನ್ ಹದಗೆಟ್ಟಿದ್ದರೇ ಕಾರ್ಯಾಗಾರದಲ್ಲೇ ಎಂಜಿನಿಯರ್‌ಗಳೇ ರಿಪೇರಿ ಮಾಡಿ ಹೊಸ ಬಸ್ ರೀತಿಯಲ್ಲೇ ಸಜ್ಜುಗೊಳಿಸುತ್ತಿದೆ. ಮೈಸೂರು ದಸರಾ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಪೂರೈಸಲು ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications