ಕರೋನಾ ವೈರಸ್ ಎಫೆಕ್ಟ್: ಎಲ್ಎಲ್, ಡಿಎಲ್ ವಿತರಣೆಗೆ ಬಿತ್ತು ಬ್ರೇಕ್..!
ಈಗ ಪ್ರಪಂಚದೆಲ್ಲೆಡೆ ಒಂದೇ ಮಾತು. ಅದುವೇ ಕರೋನಾ ವೈರಸ್. ಈ ಮಹಾಮಾರಿ ಜನರ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ವಿಶ್ವಾದ್ಯಂತ, ಕರೋನಾದಿಂದ ಉಂಟಾದ ಸಾವಿನ ಸಂಖ್ಯೆ 8 ಸಾವಿರದ ಗಡಿ ದಾಟಿದೆ.

ಭಾರತದಲ್ಲಿ ಕರೋನಾದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಇಡೀ ದೇಶವೇ ಸ್ತಬ್ಧಗೊಂಡಿದೆ. ಈಗಾಗಲೇ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಗುಂಪುಗೂಡುವುದನ್ನು ತಪ್ಪಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶಾದ್ಯಂತ 168 ರೈಲುಗಳನ್ನು ರದ್ದುಪಡಿಸಲಾಗಿದೆ.

ಬುಕಿಂಗ್ ರದ್ದತಿ ಮತ್ತು ಸಾರ್ವಜನಿಕ ಪ್ರಯಾಣದ ಅಗತ್ಯದಿಂದಾಗಿ ಈ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ.

ಎಲೆಕ್ಟ್ರಿಕ್ ಗ್ರಾಹಕರಿಗೆ ಆನ್‌ಲೈನ್ ಅಥವಾ ಎಲೆಕ್ಟ್ರಿಕ್ ಬೋರ್ಡ್ ಆ್ಯಪ್ ಮೂಲಕ ಬಿಲ್ ಪಾವತಿಸಲು ಸೂಚಿಸಿದೆ. ಇ-ಕಾಮರ್ಸ್ ಬಳಕೆದಾರರು tangedco.gov.in ಅಥವಾ tneb ಅಪ್ಲಿಕೇಶನ್ಮೂಲಕ ಪಾವತಿಸಬಹುದು ಎಂದು ಹೇಳಿದೆ.

ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಎಲ್ಎಲ್ ಹಾಗೂ ಡಿಎಲ್ ವಿತರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ಈ ಬಗ್ಗೆ ಇಂದು ಅಧಿಕೃತ ಆದೇಶ ಹೊರಡಿಸಲಾಗಿದೆ.

ಹೊಸ ಎಲ್ಎಲ್ ಹಾಗೂ ಡಿಎಲ್ ಪಡೆಯಲು ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲು ಮಹಾರಾಷ್ಟ್ರ ಸರ್ಕಾರವೂ ಸಹ ನಿರ್ಧರಿಸಿದೆ. ಈ ಬಗ್ಗೆ ಅಲ್ಲಿನ ರಾಜ್ಯ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಜನದಟ್ಟಣೆಯನ್ನು ತಡೆಯಲು ಹೊಸ ಡಿಎಲ್ ಹಾಗೂ ಫಿಟ್‌ನೆಸ್ ಟೆಸ್ಟ್ ಗಳಿಗಾಗಿ ಮಾರ್ಚ್ 31ರವರೆಗೆ ಅರ್ಜಿ ಸಲ್ಲಿಸುವಂತಿಲ್ಲವೆಂದು ಹೇಳಲಾಗಿದೆ.

ಮಹಾರಾಷ್ಟ್ರದಲ್ಲಿ 50 ಆರ್‌ಟಿಒ ಹಾಗೂ ಉಪ-ಪ್ರಾದೇಶಿಕ ಆರ್‌ಟಿಒ ಕಚೇರಿಗಳಿವೆ. ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಈ ಜನದಟ್ಟಣೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.

ಕರೋನಾ ವೈರಸ್ ಹರಡುವುದನ್ನು ತಡೆಯಬಹುದು ಎಂಬ ಕಾರಣಕ್ಕೆ ಈ ನಿಷೇಧವನ್ನು ಹೆರಲಾಗಿದೆ. ಮುಂದಿನ ದಿನಗಳಲ್ಲಿ ಅರ್ಜಿದಾರರಿಗೆ ಕರೆ ಮಾಡಿ ನಿರ್ದಿಷ್ಟ ಸೇವೆಗಳನ್ನು ಪಡೆಯುವಂತೆ ಸೂಚಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರವು ಹೇಳಿದೆ.

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಈ ತಿಂಗಳ 31ರವರೆಗೆ ಕರ್ನಾಟಕ ಬಂದ್ ಆಗಲಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿಯೂ ಇದೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂದ ಹಾಗೆ ಮಹಾರಾಷ್ಟ್ರದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಕರೋನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications