ಲಾಕ್‌ಡೌನ್ ವೇಳೆ ರೋಗಿಗಳಂತೆ ನಟಿಸಿ ಸಿಕ್ಕಿಬಿದ್ದ ನವ ದಂಪತಿ..!
ಅಮೆರಿಕಾ, ಇಟಲಿ, ಯುಕೆ, ಸ್ಪೇನ್, ಇರಾನ್, ಫ್ರಾನ್ಸ್ ಹಾಗು ಬ್ರೆಜಿಲ್ ದೇಶಗಳಲ್ಲಿ ಅಪಾರ ಪ್ರಮಾಣದ ಸಾವು ನೋವು ಉಂಟು ಮಾಡಿದ ಕೋವಿಡ್ -19 ವೈರಸ್ ಈಗ ಭಾರತದಲ್ಲಿಯೂ ವ್ಯಾಪಕವಾಗಿ ಹರಡುತ್ತಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಭಾರತದಲ್ಲಿ 2ನೇ ಹಂತದ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ಲಾಕ್‌ಡೌನ್ ಕಾರಣಕ್ಕೆ ಜನರನ್ನು ಮನೆಗಳಲ್ಲಿಯೇ ಇರುವಂತೆ ಸೂಚಿಸಲಾಗಿದೆ. ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಬಸ್, ರೈಲು, ವಾಯು, ಆಟೋ ಹಾಗೂ ಟ್ಯಾಕ್ಸಿಗಳ ಸೇವೆಗಳನ್ನು ರದ್ದುಪಡಿಸಲಾಗಿದೆ. ಸಾರ್ವಜನಿಕರು ಅಗತ್ಯವಿಲ್ಲದೆ ಹೊರ ಬರುವುದನ್ನು ನಿಷೇಧಿಸಲಾಗಿದೆ.

ವಿನಾಕಾರಣ ರಸ್ತೆಗಿಳಿಯುವ ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಎಚ್ಚರಿಕೆಯ ಹೊರತಾಗಿಯೂ ರಸ್ತೆಗಿಳಿಯುವ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿಧಿಸಲಾಗುತ್ತದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಇಷ್ಟೆಲ್ಲಾ ಪೊಲೀಸ್ ಕ್ರಮಗಳ ಮಧ್ಯೆಯೂ ಕೆಲವರು ಪ್ರಯಾಣ ಮುಂದುವರಿಸಿದ್ದಾರೆ. ಊಟ ಸಿಗದೇ ಪರದಾಡುತ್ತಿರುವವ ಕಾರ್ಮಿಕರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಸಾರ್ವಜನಿಕ ಸಾರಿಗೆಗಳು ಇಲ್ಲದಿರುವ ಕಾರಣಕ್ಕೆ ಸೈಕಲ್ ಹಾಗೂ ಇನ್ನಿತರ ದ್ವಿಚಕ್ರ ವಾಹನಗಳಲ್ಲಿಯೇ ತಮ್ಮ ಊರುಗಳಿಗೆ ಹಿಂದಿರುಗುತ್ತಿದ್ದಾರೆ.

ಕೆಲ ದಿನಗಳ ಹಿಂದೆ, ಮುಂಬೈ ವಿಮಾನ ನಿಲ್ದಾಣದ ಉದ್ಯೋಗಿಯೊಬ್ಬರು ಈರುಳ್ಳಿ ವ್ಯಾಪಾರಿ ವೇಷ ಧರಿಸಿ ತಮ್ಮ ಊರಾದ ಅಲಹಾಬಾದ್ ತಲುಪಿದ್ದರು. ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಯಾವುದೇ ನಿರ್ಬಂಧವಿಲ್ಲದ ಕಾರಣ, ಟ್ರಕ್‌ನಲ್ಲಿ ಈರುಳ್ಳಿ ಖರೀದಿಸಿ ಅಲಹಾಬಾದ್‌ಗೆ ಹೋದರು. ಇದಕ್ಕಾಗಿ ಅವರು ರೂ.3 ಲಕ್ಷ ಖರ್ಚು ಮಾಡಿದ್ದರು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮತ್ತೊಂದು ಘಟನೆಯಲ್ಲಿ ನವವಿವಾಹಿತರು ಹಾಗೂ ಅವರ ಕುಟುಂಬದವರು ಅನಾರೋಗ್ಯದಿಂದ ಬಳಲುತ್ತಿರುವಂತೆ ನಟಿಸಿ ಆಂಬುಲೆನ್ಸ್‌ನಲ್ಲಿ ಹೋಗಿದ್ದಾರೆ. ಈ ಘಟನೆ ಏಪ್ರಿಲ್ 29ರಂದು ಉತ್ತರಪ್ರದೇಶದಲ್ಲಿ ನಡೆದಿದೆ. ಅನುಮಾನ ಬಂದ ಕಾರಣಕ್ಕೆ ಉತ್ತರ ಪ್ರದೇಶದ ಪೊಲೀಸರು ಆಂಬ್ಯುಲೆನ್ಸ್ ನಿಲ್ಲಿಸಿದ್ದಾರೆ.

ಈ ಆಂಬ್ಯುಲೆನ್ಸ್ ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ಮುಜಾಫರ್‌ನಗರಕ್ಕೆ ಪ್ರಯಾಣಿಸುತ್ತಿದ್ದು, ಅದರಲ್ಲಿ ವಧು-ವರರು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರಿದ್ದರು. ಅನಾರೋಗ್ಯದಿಂದ ಬಳಲುತ್ತಿರುವುದಾಗಿ ತಿಳಿಸಿ ಆಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇದನ್ನು ಕಂಡ ಪೊಲೀಸರು ಅವಕ್ಕಾಗಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ನವವಿವಾಹಿತರನ್ನು ಹಾಗೂ ಅವರ ಕುಟುಂಬದವರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಧು, ವರ ಹಾಗೂ ಅವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಜನರ ಸಂಚಾರದ ಮೇಲೆ ನಿರ್ಬಂಧಗಳನ್ನು ವಿಧಿಸಿರುವ ಕಾರಣ ಆಂಬುಲೆನ್ಸ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಕೆಲವು ವಾರಗಳ ಹಿಂದೆ, ಕೇರಳದ ಕೆಲವರು ಇದೇ ರೀತಿಯಲ್ಲಿ ಕೊಯಮತ್ತೂರು ಬಳಿಯ ವಲಾಯರ್ ಚೆಕ್‌ಪಾಯಿಂಟ್ ಮೂಲಕ ತಮಿಳುನಾಡನ್ನು ಪ್ರವೇಶಿಸಿದ್ದರು.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ರಾಜ್ಯಗಳ ಗಡಿಗಳನ್ನು ಬಂದ್ ಮಾಡಿರುವುದರಿಂದ ಆಂಬುಲೆನ್ಸ್ ಮೂಲಕ ತಮಿಳುನಾಡು ತಲುಪಿದ್ದರು. ಇದೇ ರೀತಿ ಉತ್ತರ ಪ್ರದೇಶದ ನವ ದಂಪತಿ ಹಾಗೂ ಅವರ ಕುಟುಂಬವು ಅನುಸರಿಸಿ ಸಿಕ್ಕಿಬಿದ್ದಿದೆ. ಅಗತ್ಯ ಕಾರ್ಯಗಳಿದ್ದರೆ ವಿಶೇಷ ಅನುಮತಿಯೊಂದಿಗೆ ಪ್ರಯಾಣಿಸುವುದು ಒಳಿತು.
ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.


Click it and Unblock the Notifications








