ತಂಗಿಗಾಗಿ 85 ಕಿ.ಮೀ ದೂರ ಸೈಕಲ್ ತುಳಿದ ಅಣ್ಣ..!
ಕರೋನಾ ವೈರಸ್ ಹರಡದಂತೆ ತಡೆಯಲು ವಿಶ್ವದ ವಿವಿಧ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಭಾರತದಲ್ಲಿಯೂ ಸಹ ಮೇ3ರವರೆಗೆ ಎರಡನೇ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಿ, ಜನರು ವಿನಾಕಾರಣ ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ.

ಇದರಿಂದಾಗಿ ಸದಾ ಬಿಜಿಗುಡುತ್ತಿದ್ದ ರಸ್ತೆಗಳು ಜನರಿಲ್ಲದೇ ನಿರ್ಜನವಾಗಿವೆ. ಸಾರಿಗೆ ಸೇವೆಗಳನ್ನು ರದ್ದುಪಡಿಸಿರುವ ಕಾರಣಕ್ಕೆ ಹೊರ ಊರುಗಳಿಗೆ ಪ್ರಯಾಣಿಸ ಬೇಕಾಗಿರುವವರು ತೊಂದರೆಗೀಡಾಗಿದ್ದಾರೆ. ಇದೇ ರೀತಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

ಬಸ್‌ಗಳು ಇಲ್ಲದ ಕಾರಣಕ್ಕೆ ಯುವಕನೊಬ್ಬ ಮಧುರೈನಿಂದ ಥೇಣಿಗೆ ಸೈಕಲ್ ಮೂಲಕ ಪ್ರಯಾಣಿಸಿದ್ದಾನೆ. ವಿನಾಕಾರಣ ಕಾರು, ಬೈಕುಗಳಲ್ಲಿ ಹೊರಗೆ ಸುತ್ತಾಡುತ್ತಿರುವ ಯುವಕರ ಮಧ್ಯೆ ಸೈಕಲ್‌ನಲ್ಲಿ 85 ಕಿ.ಮೀ ಪ್ರಯಾಣ ಮಾಡಿದ ಈ ಯುವಕನ ಕಥೆ ಮನಕಲುಕುವಂತಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮಧುರೈನ ಕುಡಲ್‌ನಗರದ ಮುತ್ತು ಹಾಗೂ ತಮಿಳ್ ಎಂಬುವವರಿಗೆ ಜೀವರಾಜ್ ಎಂಬ ಮಗ ಹಾಗೂ ಪ್ರವೀಣಾ ಎಂಬ ಮಗಳಿದ್ದಾರೆ. ಜೀವರಾಜ್‌ಗೆ 22 ವರ್ಷ, ಪ್ರವೀಣಾಗೆ 20 ವರ್ಷ ವಯಸ್ಸು. ಮುತ್ತು ಕೆಲವು ವರ್ಷಗಳ ಹಿಂದೆ ನಿಧನರಾದರು. ಈಗ ತಮಿಳರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ಅವರು ಖಾಸಗಿ ಶಾಲೆಯೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರವೀಣಾ ಥೇಣಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳರು ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ತಮ್ಮ ಮಗಳು ಪ್ರವೀಣಾರನ್ನು ಕರೆತರುವಂತೆ ಮಗ ಜೀವರಾಜ್‌ಗೆ ಹೇಳಿದ್ದಾರೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬಸ್ ಸೇವೆಯನ್ನು ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ ಜೀವರಾಜ್ ಸೈಕಲ್‌ನಲ್ಲಿಯೇ ತನ್ನ ತಂಗಿಯನ್ನು ಕರೆತರಲು ಮುಂದಾಗಿದ್ದಾನೆ. ಏರ್‌ಪಂಪ್ ಅನ್ನು ಜೊತೆಯಲ್ಲಿ ತೆಗೆದುಕೊಂಡು ತೆರಳಿದ್ದಾನೆ.

ಮಧುರೈನಿಂದ ಬೈಸಿಕಲ್‌ನಲ್ಲಿಯೇ 85 ಕಿ.ಮೀ ದೂರದಲ್ಲಿದ್ದ ಥೇಣಿ ತಲುಪಿ ಪ್ರವೀಣಾ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆ ತಲುಪಿದ್ದಾನೆ. ಪ್ರವೀಣಾರನ್ನು ಕರೆದೊಯ್ಯಲು ಆಕೆಯ ಅಣ್ಣ ಸೈಕಲ್‌ನಲ್ಲಿ ಬಂದಿದ್ದಾನೆ ಎಂಬ ಸುದ್ದಿ ಕೇಳಿ ಆಸ್ಪತ್ರೆಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಆಸ್ಪತ್ರೆಯ ಆಡಳಿತ ಮಂಡಳಿಯು ಸೈಕಲ್‌ನಲ್ಲಿ ಮಧುರೈಗೆ ಹಿಂತಿರುಗಲು ಅನುಮತಿ ನೀಡಿಲ್ಲ. ಜಿಲ್ಲಾಡಳಿತದ ಅನುಮತಿ ಕೇಳಲು ಆಸ್ಪತ್ರೆಯ ಆಡಳಿತ ಮಂಡಳಿ ಮುಂದಾಗಿದೆ. ಇದರ ಮಧ್ಯೆ ಕೆಲವು ಸಾಮಾಜಿಕ ಕಾರ್ಯಕರ್ತರು ಅಣ್ಣ, ತಂಗಿಗಾಗಿ ಕಾರೊಂದನ್ನು ನೀಡಿದ್ದಾರೆ. ಈ ಕಾರಿನಲ್ಲಿಯೇ ಅಣ್ಣ ತಂಗಿ ಮಧುರೈ ತಲುಪಿದ್ದಾರೆ.

ಈ ಘಟನೆ ಎಲ್ಲರ ಗಮನ ಸೆಳೆದಿದೆ. ಈ ಬಗ್ಗೆ ಮಾತನಾಡಿರುವ ಜೀವರಾಜ್, ತಾನು ಪ್ರಯಾಣಿಸುತ್ತಿದ್ದ ಸೈಕಲ್‌ನ ಎರಡೂ ಟಯರ್‌ಗಳು ಹಾಳಾಗಿದ್ದವು. ಒಂದು ಕಿ.ಮೀ ಹೋದ ನಂತರ ಸೈಕಲ್ ಟಯರ್ ಏರ್ ತಕ್ಷಣವೇ ಇಳಿಯುತ್ತಿತ್ತು. ಏರ್ ಪದೇ ಪದೇ ಇಳಿಯುತ್ತಿದ್ದ ಕಾರಣಕ್ಕೆ ಬೆಳಿಗ್ಗೆ ಮಧುರೈನಿಂದ ಹೊರಟ ನಾನು ಥೇಣಿ ಸೇರುವ ವೇಳೆಗೆ ರಾತ್ರಿಯಾಗಿತ್ತು ಎಂದು ಹೇಳಿದ್ದಾನೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆಸ್ಪತ್ರೆ ತಲುಪಿದ ನಂತರ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ತನ್ನ ತಂಗಿಯನ್ನು ಭೇಟಿ ಮಾಡಲು ಬಂದಿರುವುದಾಗಿ ಹೇಳಿದೆ. ರಾತ್ರಿಯಾದ ಕಾರಣಕ್ಕೆ ಮರುದಿನ ಬೆಳಿಗ್ಗೆ ನೋಡಬಹುದೆಂದು ಭದ್ರತಾ ಸಿಬ್ಬಂದಿ ಹೇಳಿದ.ಈ ಕಾರಣಕ್ಕೆ ಆಸ್ಪತ್ರೆಯ ಆವರಣದಲ್ಲಿ ಮಲಗಿದ್ದಾಗಿ ಜೀವರಾಜ್ ಹೇಳಿದ್ದಾನೆ.

ಲಾಕ್‌ಡೌನ್ ನಡುವೆಯೂ ತನ್ನ ತಂಗಿಯನ್ನು ಕರೆತರಲು ಕೆಟ್ಟಿದ್ದ ಸೈಕಲ್‌ನಲ್ಲಿ 85 ಕಿ.ಮೀ ದೂರ ಸೈಕಲ್ ತುಳಿದ ಯುವಕನ ಕಥೆ ತಮಿಳುನಾಡಿನಾದ್ಯಂತ ಸುದ್ದಿಯಾಗಿದೆ.


Click it and Unblock the Notifications