ಲಾಕ್‌ಡೌನ್ ಉಲ್ಲಂಘನೆ: ಸ್ಕೂಟರ್ ಸವಾರನ ಮೇಲೆ ದರ್ಪ ತೋರಿದ ಪೊಲೀಸಪ್ಪ
ಕರೋನಾ ವೈರಸ್‌ಗೆ ಯಾವುದೇ ಲಸಿಕೆ ಇಲ್ಲದಿರುವ ಕಾರಣ ಈ ಮಹಾಮಾರಿಯೊಂದಿಗೆ ನಾವು ಬದುಕುವುದನ್ನು ಕಲಿಯಬೇಕು ಎಂದು ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾರ್ಚ್ 24ರಂದು ಲಾಕ್‌ಡೌನ್ ಜಾರಿಗೆ ತರಲಾಯಿತು. ನಂತರ ಈ ಲಾಕ್‌ಡೌನ್ ಅನ್ನು ಮೇ 3 ಹಾಗೂ ಮೇ 17ರವರೆಗೆ ವಿಸ್ತರಿಸಲಾಯಿತು.

ಕೆಲವು ರಾಜ್ಯಗಳಲ್ಲಿ ಕರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣಕ್ಕೆ ಲಾಕ್‌ಡೌನ್ ಅನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ, ಬೇಕಾಬಿಟ್ಟಿ ಓಡಾಡುವ ವಾಹನಗಳ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಂಡು, ವಾಹನ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ಕೆಲವೆಡೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಭಾರತದಾದ್ಯಂತ ಲಾಕ್‌ಡೌನ್ ವೇಳೆಯಲ್ಲಿ ಲಕ್ಷಾಂತರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದರ ಜೊತೆಗೆ ಪೊಲೀಸರು ವಾಹನ ಸವಾರರಿಗೆ ಥಳಿಸಿರುವ ಘಟನೆಗಳು ಸಹ ನಡೆದಿವೆ. ಲಾಕ್‌ಡೌನ್ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಠಿಣ ಕ್ರಮಗಳು ಅಗತ್ಯವಾದರೂ, ಪೊಲೀಸರು ಮಿತಿ ಮೀರಿ ವರ್ತಿಸಿದ್ದಾರೆಯೇ ಎಂಬ ಅನುಮಾನ ಉದ್ಭವಿಸುತ್ತದೆ. ಪೊಲೀಸರು ವಾಹನ ಸವಾರರ ಮೇಲೆ ಹಲ್ಲೆ ನಡೆಸುತ್ತಿರುವ ಹಲವು ವೀಡಿಯೊಗಳು ವೈರಲ್ ಆಗಿವೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಈಗ ಬಿಡುಗಡೆಯಾಗಿರುವ ವೀಡಿಯೊದಲ್ಲಿ ಪೊಲೀಸರು ಲಾಕ್‌ಡೌನ್ ಉಲ್ಲಂಘಿಸಿದ ವಾಹನ ಸವಾರರನ್ನು ಥಳಿಸುತ್ತಿರುವುದರ ಜೊತೆಗೆ ಹೋಂಡಾ ಡಿಯೊ ಸ್ಕೂಟರ್ ಅನ್ನು ಲಾಠಿಯಿಂದ ಹೊಡೆದು ಹಾಕುತ್ತಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರೂ ಇದು ಕರ್ನಾಟಕದ ಯಾವುದೋ ಭಾಗದಲ್ಲಿ ನಡೆದಿರುವುದು ಸ್ಪಷ್ಟ.

ಈ ವೀಡಿಯೊದಲ್ಲಿರುವ ಪೊಲೀಸ್ ಅಧಿಕಾರಿ ಹೋಂಡಾ ಡಿಯೊ ಸ್ಕೂಟರ್ ಓಡಿಸುತ್ತಿದ್ದ ಯುವಕರನ್ನು ಲಾಠಿಯಿಂದ ಥಳಿಸುತ್ತಿರುವುದನ್ನು ಕಾಣಬಹುದು. ನಂತರ ಹೆಡ್‌ಲ್ಯಾಂಪ್, ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಹಾಗೂ ಸ್ಕೂಟರ್‌ನ ಇತರ ಭಾಗಗಳನ್ನು ಪೊಲೀಸ್ ಅಧಿಕಾರಿ ಲಾಠಿಯಿಂದ ಹೊಡೆದು ಹಾಕುವುದನ್ನು ಕಾಣಬಹುದು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಯುವಕರು ಬಿಟ್ಟು ಬಿಡುವಂತೆ ಮನವಿ ಮಾಡಿಕೊಂಡರೂ ಯಾವುದೇ ದಯೆಯನ್ನು ತೋರದೇ ಆ ಅಧಿಕಾರಿ ತಮ್ಮ ದರ್ಪವನ್ನು ಮುಂದುವರೆಸಿದ್ದಾರೆ. ಆ ಪೊಲೀಸ್ ಅಧಿಕಾರಿಯ ವಿರುದ್ಧ ಯಾವುದಾದರೂ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಲಾಕ್‌ಡೌನ್ ಉಲ್ಲಂಘಿಸುವವರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಹಲವಾರು ಘಟನೆಗಳು ನಡೆದು, ಆ ಪ್ರಕರಣದಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪೊಲೀಸರು ವಾಹನಗಳನ್ನು ಹಾಳು ಮಾಡುತ್ತಿರುವುದು ಇದೇ ಮೊದಲಲ್ಲ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್
ಲಾಕ್‌ಡೌನ್ ಜಾರಿಗೆ ಬರುವ ಮೊದಲು ಸಹ ಪೊಲೀಸರು ಹಲವಾರು ವಾಹನಗಳನ್ನು ಹಾಳು ಮಾಡಿದ ಘಟನೆಗಳು ನಡೆದಿದ್ದವು. ಸಾರ್ವಜನಿಕರು ಕಾನೂನು ಉಲ್ಲಂಘನೆ ಮಾಡಿದಾಗ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರವಿದೆ.

ಆದರೆ ವಾಹನ ಸೇರಿದಂತೆ ಮತ್ತೊಬ್ಬರ ವೈಯಕ್ತಿಕ ವಸ್ತುಗಳನ್ನು ಹಾಳು ಮಾಡುವುದು ಸರಿಯಲ್ಲ. ತೊಂದರೆಗೆ ಒಳಗಾದ ವ್ಯಕ್ತಿಯು ದೂರು ನೀಡಿದರೆ, ಸಂಬಂಧಪಟ್ಟ ಪೊಲೀಸರು ತೊಂದರೆಗೀಡಾಗುವುದು ಖಚಿತ.


Click it and Unblock the Notifications