ಕರೋನಾ ವೈರಸ್ ಎಫೆಕ್ಟ್: ತುರ್ತು ಕಾಲದಲ್ಲಿ ಆಪದ್ಬಾಂಧವನಾದ ವಾಯುಪಡೆ ವಿಮಾನಗಳು
ಕರೋನಾ ವೈರಸ್ ಪ್ರಪಂಚದ ಜನರ ಜೀವನವನ್ನು ಅತಂತ್ರಗೊಳಿಸಿದೆ. ಕೋವಿಡ್ -19 ವೈರಸ್‌ನ ತವರೂರು ಎಂದು ಕರೆಯಲಾಗುವ ಚೀನಾದಲ್ಲಿನ ಜನಜೀವನ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಪ್ರಪಂಚದ ಇತರ ಭಾಗಗಳಲ್ಲಿ ಜನ ಸಾಮಾನ್ಯರು ಕರೋನಾ ವೈರಸ್‌ನಿಂದ ನರಳುವಂತಾಗಿದೆ.

ಭಾರತವೂ ಇದರಿಂದ ಹೊರತಾಗಿಲ್ಲ. ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತದಲ್ಲಿ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಕರೋನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಾರದ ಕಾರಣ ಎರಡನೇ ಹಂತದ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಲಾಕ್‌ಡೌನ್ ಕಾರಣಕ್ಕೆ ಸಾರ್ವಜನಿಕ ಸಾರಿಗೆಗಳಾದ
ಬಸ್, ಆಟೋ ಹಾಗೂ ಟ್ಯಾಕ್ಸಿಗಳ ಸೇವೆಗಳನ್ನು ರದ್ದುಪಡಿಸಲಾಗಿದೆ. ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಹಲವಾರು ನಿರ್ಬಂಧಗಳಿವೆ.

ಅನಗತ್ಯವಾಗಿ ಹೊರಬರುವ ಖಾಸಗಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಇದುವರೆಗೂ ಲಕ್ಷಾಂತರ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸದ್ಯಕ್ಕೆ ಟ್ರಕ್ ಹಾಗೂ ಲಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬಸ್, ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ. ಎಲ್ಲಾ ರೀತಿಯ ಕಮರ್ಷಿಯಲ್ ವಾಣಿಜ್ಯ ವಿಮಾನಗಳನ್ನು ರದ್ದುಪಡಿಸಲಾಗಿದೆ. ಸರಕು ಸಾಗಣೆ ವಿಮಾನ, ಸ್ಥಳಾಂತರಿಸುವ ವಿಮಾನ ಹಾಗೂ ವಿಶೇಷ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಈ ವಿಮಾನಗಳ ಹಾರಾಟಕ್ಕೆ ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅನುಮತಿ ನೀಡಿದೆ. ಭಾರತೀಯ ವಾಯುಪಡೆಯು (ಐಎಎಫ್) ಅಗತ್ಯ ಸಾಮಗ್ರಿಗಳನ್ನು ಸಾಗಿಸುತ್ತಿದೆ. ಭಾರತೀಯ ವಾಯುಪಡೆಯು ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಸಾಗಿಸುತ್ತಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಭಾರತೀಯ ವಾಯುಪಡೆಯು ಇದುವರೆಗೂ ಸುಮಾರು 600 ಟನ್ ವೈದ್ಯಕೀಯ ಉಪಕರಣ ಹಾಗೂ ಇತರ ಅಗತ್ಯ ವಸ್ತುಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಿದೆ. ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಇಷ್ಟು ಪ್ರಮಾಣದ ಸರಕುಗಳನ್ನು ಸಾಗಿಸಲಾಗಿದೆಯೆಂದು ರಕ್ಷಣಾ ಇಲಾಖೆಯು ಬಿಡುಗಡೆಗೊಳಿಸಿರುವ ವರದಿಯಲ್ಲಿ ಹೇಳಲಾಗಿದೆ.

ಭಾರತೀಯ ವಾಯುಸೇನೆಯ ವಿಮಾನವು ಏಪ್ರಿಲ್ 25ರಂದು ಮಿಜೋರಾಂನ ಐಜಾಲ್‌ನಲ್ಲಿರುವ ಲೆನ್‌ಕುಪಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವಿಮಾನದಲ್ಲಿ 22 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕೋವಿಡ್ -19 ವೈರಸ್ ವಿರುದ್ಧ ಹೋರಾಡಲು ಸಾಗಿಸಲಾಯಿತು. ಈ ಸಾಮಗ್ರಿಗಳನ್ನು ಮಿಜೋರಾಂ ಹಾಗೂ ಮೇಘಾಲಯ ರಾಜ್ಯಗಳಿಗಾಗಿ ಸಾಗಿಸಲಾಯಿತು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕೇಂದ್ರ ಸರ್ಕಾರವು ಏಪ್ರಿಲ್ 11ರಂದು 15 ಸದಸ್ಯರ ರಾಪಿಡ್ ಆಕ್ಷನ್ ಟೀಂ ಅನ್ನು ಕುವೈತ್‌ಗೆ ಕಳುಹಿಸಿತ್ತು. ಅಲ್ಲಿ ನೆರವಿನ ನಿರೀಕ್ಷೆಯಲ್ಲಿದ್ದ ಭಾರತೀಯರನ್ನು ಏಪ್ರಿಲ್ 25ರಂದು ಭಾರತೀಯ ವಾಯುಪಡೆಯ ಸಿ -130 ವಿಮಾನದ ಮೂಲಕ ಭಾರತಕ್ಕೆ ಕರೆತರಲಾಯಿತು.

ಕುವೈತ್‌ನಲ್ಲಿದ್ದ ಆರು ವರ್ಷದ ಬಾಲಕಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಈ ಕಾರಣಕ್ಕೆ ಆ ಬಾಲಕಿ ಹಾಗೂ ಆಕೆಯ ತಂದೆಯನ್ನು ಭಾರತಕ್ಕೆ ಕರೆತರಲಾಯಿತು. ಬಾಲಕಿಯ ಕುಟುಂಬವು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಕರೆದೊಯ್ಯುವಂತೆ ಒತ್ತಾಯಿಸಿತ್ತು. ಕೇಂದ್ರ ಸರ್ಕಾರದ ನೆರವಿನಿಂದಾಗಿ 15 ಜನರ ವೈದ್ಯಕೀಯ ತಂಡದೊಂದಿಗೆ ಭಾರತಕ್ಕೆ ಕರೆತರಲಾಯಿತು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್‌ನಿಂದ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ವಾಯುಪಡೆಯಂತೆ, ಏರ್ ಇಂಡಿಯಾ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕರೋನಾ ವೈರಸ್ ಹರಡಬಹುದೆಂಬ ಭೀತಿಯಲ್ಲಿ ವಿಶ್ವದ ಅನೇಕ ದೇಶಗಳು ತಮ್ಮ ದೇಶದ ನಾಗರಿಕರನ್ನು ವಾಪಸ್ ಕರೆತರಲು ಹಿಂಜರಿದಿದ್ದವು.

ಆದರೆ ಬಹುತೇಕ ಜನರಿಂದ ಟೀಕೆಗೆ ಒಳಗಾಗಿರುವ ಏರ್ ಇಂಡಿಯಾದ ವಿಮಾನಗಳು, ವಿಶ್ವದ ವಿವಿಧ ದೇಶಗಳಿಗೆ ತೆರಳಿ ಅಲ್ಲಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದವು. ಜೊತೆಗೆ ಕೋವಿಡ್ -19 ವೈರಸ್‌ನ ತವರು ಚೀನಾದ ವುಹಾನ್‌ಗೆ ತೆರಳಿ ಅಲ್ಲಿದ್ದ ಭಾರತೀಯರನ್ನು ಕರೆತಂದವು.


Click it and Unblock the Notifications








