ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಕರೋನಾ ವೈರಸ್ ಇಡೀ ಜಗತ್ತನ್ನು ತತ್ತರಿಸುವಂತೆ ಮಾಡಿದೆ. ಕೋವಿಡ್ -19 ವೈರಸ್ ಹರಡುವುದನ್ನು ತಡೆಗಟ್ಟಲು ವಿಶ್ವದ ಹಲವು ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ.

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಭಾರತವೂ ಸಹ ಇದರಿಂದ ಹೊರತಾಗಿಲ್ಲ. ಭಾರತದಲ್ಲಿ ಮೊದಲು ಏಪ್ರಿಲ್ 14ರವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಮಾರ್ಚ್ 23ರ ರಾತ್ರಿ ಲಾಕ್‌ಡೌನ್ ಜಾರಿಗೊಳಿಸುವ ಬಗ್ಗೆ ಘೋಷಣೆ ಮಾಡಲಾಯಿತು. ಈ ಲಾಕ್‌ಡೌನ್ ಮಾರ್ಚ್ 24ರಿಂದ ಜಾರಿಗೆ ಬಂದ ಕಾರಣ ಬೇರೆ ಊರುಗಳಲ್ಲಿದ್ದ ಜನರು ತಮ್ಮ ಊರಿಗೆ ಮರಳಲು ಆರಂಭಿಸಿದರು.

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಇನ್ನೂ ಕೆಲ ಜನರಿಗೆ ತಮ್ಮ ಊರುಗಳಿಗೆ ಮರಳಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್ ಕಾರಣಕ್ಕೆ ಕೆಲವರು ತಮ್ಮ ಕೆಲಸಗಳನ್ನು ಕಳೆದುಕೊಂಡರು. ಯಾವುದೇ ಆಹಾರ ಸಿಗದ ಕಾರಣಕ್ಕೆ ತಮ್ಮ ಊರುಗಳಿಗೆ ಮರಳಲು ಆರಂಭಿಸಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಲಾಕ್‌ಡೌನ್ ಕಾರಣಕ್ಕೆ ಬಸ್ ಹಾಗೂ ರೈಲು ಸೇವೆಗಳನ್ನು ರದ್ದುಪಡಿಸಲಾಯಿತು. ಇದರಿಂದ ಕೆಲವರು ನಡೆದುಕೊಂಡೇ ಮನೆ ತಲುಪಿದರು. ನೂರಾರು ಕಿ.ಮೀ ದೂರ ನಡೆದು ಊರು ಸೇರಿದ ಘಟನೆಗಳು ವರದಿಯಾಗಿವೆ. ಕೆಲವರು ಸೈಕಲ್‌ ಮೂಲಕ ಸಾವಿರಾರು ಕಿ.ಮೀ ದೂರದಲ್ಲಿರುವ ಊರು ತಲುಪಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಒಡಿಶಾದ ಯುವಕನೊಬ್ಬ ಮುಂಬೈನಿಂದ 1,800 ಕಿ.ಮೀ ದೂರದಲ್ಲಿದ್ದ ತನ್ನ ಊರನ್ನು ಸೈಕಲ್‌ನಲ್ಲಿಯೇ ತಲುಪಿದ್ದ. ಸಾರಿಗೆ ಸೌಲಭ್ಯಗಳಲ್ಲಿದ ಕಾರಣಕ್ಕೆ ಕಾರ್ಮಿಕರು ಕಷ್ಟದಿಂದ ತಮ್ಮ ಊರು ತಲುಪುತ್ತಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಏಪ್ರಿಲ್ 14ರವರೆಗೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾಗುತ್ತಿದ್ದಾರೆ. ಬಸ್ ಹಾಗೂ ರೈಲುಗಳಿಲ್ಲದ ಕಾರಣಕ್ಕೆ ಸೈಕಲ್ ಮೂಲಕವೇ ಊರುಗಳಿಗೆ ತೆರಳುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಮಹಾರಾಷ್ಟ್ರದಲ್ಲಿ ನೆಲೆಸಿರುವ ಮಧ್ಯಪ್ರದೇಶ ಮೂಲದ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ಸೈಕಲ್ ಮೂಲಕವೇ ಮರಳುತ್ತಿದ್ದಾರೆ. ಮಹಾರಾಷ್ಟ್ರದ ನಾಸಿಕ್‌ನಿಂದ ತಮ್ಮ ಪ್ರಯಾಣವನ್ನು ಆರಂಭಿಸಿರುವ ಕಾರ್ಮಿಕರು ಈ ಬಗ್ಗೆ ಮಾತನಾಡಿ, ಈ ಪ್ರಯಾಣ ಆರಂಭವಾಗಿ 5 ದಿನಗಳಾಗಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ನಮ್ಮ ಊರನ್ನು ತಲುಪಲು ಸುಮಾರು 6 ದಿನಗಳು ಬೇಕಾಗುತ್ತವೆ. ಏಪ್ರಿಲ್ 14ರಂದು ಲಾಕ್‌ಡೌನ್ ಅಂತ್ಯವಾಗುತ್ತದೆ ಎಂದು ಭಾವಿಸಿದ್ದೇವು. ಮತ್ತೆ ವಿಸ್ತರಿಸಿರುವ ಕಾರಣಕ್ಕೆ ನಮ್ಮ ಊರಿಗೆ ವಾಪಸಾಗಲು ಯೋಜಿಸಿದೆವು. ಯಾವುದೇ ಸಾರಿಗೆ ಸೌಲಭ್ಯಗಳು ಲಭ್ಯವಿಲ್ಲದ ಕಾರಣಕ್ಕೆ ಸೈಕಲ್‌ನಲ್ಲಿಯೇ ಊರಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು.

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಮಹಾರಾಷ್ಟ್ರದ ನಾಗ್ಪುರದಿಂದಲೂ ಕೆಲ ಕಾರ್ಮಿಕರು ಮಧ್ಯಪ್ರದೇಶಕ್ಕೆ ತೆರಳುತ್ತಿರುವ ಬಗ್ಗೆ ವರದಿಗಳಾಗಿವೆ. ಈ ಬಗ್ಗೆ ಮಾತನಾಡಿದ ಮಹಿಳೆಯೊಬ್ಬರು, ನಾನು, ನನ್ನ ಪತಿ ಹಾಗೂ ನಮ್ಮ ಒಂದು ವರ್ಷದ ಮಗು ಸೈಕಲ್‌ನಲ್ಲಿ ಊರಿಗೆ ವಾಪಸಾಗುತ್ತಿದ್ದೇವೆ. ಮಧ್ಯಪ್ರದೇಶದ ಸಿಯೋನಿ ನಮ್ಮ ಸ್ವಂತ ಊರು ಬಸ್‌ಗಳಿಲ್ಲದ ಕಾರಣಕ್ಕೆ ಸೈಕಲ್‌ನಲ್ಲಿ ವಾಪಸ್ ಆಗುತ್ತಿದ್ದೇವೆ ಎಂದು ಹೇಳಿದರು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಸೈಕಲ್‌ನಲ್ಲೇ ಊರು ಸೇರುತ್ತಿರುವ ಕಾರ್ಮಿಕರು

ಕೋವಿಡ್ -19 ವೈರಸ್‌ನಿಂದಾಗಿ ಬಹುತೇಕ ಕಾರ್ಮಿಕರ ಬದುಕು ಅತಂತ್ರಕ್ಕೆ ಸಿಲುಕಿದೆ. ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸಿ ಸಮಸ್ಯೆಯನ್ನು ಬಗೆಹರಿಸುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ.

Most Read Articles

Kannada
English summary
Covid 19 Lockdown Maharashtra migrant workers riding cycle to reach home in Madhya Pradesh. Read in Kannada.
Story first published: Monday, April 20, 2020, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X