ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಲಾಕ್‌ಡೌನ್ ಮೇ 17ರವರೆಗೆ ಜಾರಿಯಲ್ಲಿರಲಿದೆ. ಈ ಲಾಕ್‌ಡೌನ್ ಅವಧಿಯಲ್ಲಿ ಜನರು ಅಗತ್ಯವಿಲ್ಲದೆ ಹೊರಗೆ ಬರದಂತೆ ಸೂಚನೆ ನೀಡಲಾಗಿತ್ತು.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ಆದರೆ ಅಗತ್ಯ ಕಾರ್ಯಗಳಲ್ಲಿ ತೊಡಗಿರುವವರ ವಾಹನಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು. ಇನ್ನೂ ಕೆಲವರು ಅಗತ್ಯವಿಲ್ಲದೆ ವಾಹನಗಳಲ್ಲಿ ಸುತ್ತಾಡಿದರು. ಇಂತಹವರ ವಿರುದ್ಧ ದೇಶಾದ್ಯಂತ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡರು. ಕೆಲವು ಕಡೆ ದಂಡ ವಿಧಿಸಿದರೆ, ಇನ್ನೂ ಕೆಲವು ಕಡೆ ವಾಹನಗಳನ್ನು ವಶಕ್ಕೆ ಪಡೆಯಲಾಯಿತು.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ತಮಿಳುನಾಡಿನಲ್ಲಿ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ 3.50 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈನಲ್ಲಿಯೂ ಪೊಲೀಸರು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಂಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ಮುಂಬೈನಲ್ಲಿ ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ಇದುವರೆಗೂ ಸುಮಾರು ರೂ.9 ಕೋಟಿ ದಂಡ ವಿಧಿಸಲಾಗಿದೆ. ಈ ದಂಡವನ್ನು ಮಾರ್ಚ್ 20ರಿಂದ ಮೇ 13ರವರೆಗಿನ ಅವಧಿಯಲ್ಲಿ ವಿಧಿಸಲಾಗಿದೆ.ಹೆಲ್ಮೆಟ್ ಧರಿಸದ ಕಾರಣಕ್ಕೆ 73,735 ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸಲಾಗಿದೆ.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ 36,248 ಜನರಿಗೆ ದಂಡ ವಿಧಿಸಲಾಗಿದೆ. ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ 11,611 ಜನರಿಗೆ ಹಾಗೂ ಇನ್ನಿತರ ದಾಖಲೆಗಳಿಲ್ಲದೇ ವಾಹನ ಚಲಾಯಿಸಿದ 6,354 ಜನರಿಗೆ ದಂಡ ವಿಧಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ಒಟ್ಟಾರೆಯಾಗಿ 2,09,188 ಜನರಿಗೆ ದಂಡ ವಿಧಿಸಲಾಗಿದೆ. ಮುಂಬೈ ನಗರವು ಕರೋನಾ ವೈರಸ್‌ನಿಂದ ಹೆಚ್ಚು ತೊಂದರೆಗೀಡಾಗಿದೆ. ಮುಂಬೈ ಭಾರತದ ಕರೋನಾ ವೈರಸ್ ಹರಡುವ ಹಾಟ್ ಸ್ಪಾಟ್ ಆಗಿ ಮಾರ್ಪಟ್ಟಿದೆ.

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ಆದರೂ ಸಹ ಜನ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೊರ ಬರುತ್ತಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿಯೂ ಮುಂಬೈ ಮಹಾನಗರದಲ್ಲಿ ರಸ್ತೆ ಅಪಘಾತಗಳು ಸಂಭವಿಸಿವೆ. ಮಾರ್ಚ್ 23ರಿಂದ ಮೇ 12ರವರೆಗೆ ಮುಂಬೈನಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 18 ಜನರು ಸಾವನ್ನಪ್ಪಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ನಡುವೆಯೂ ಭಾರೀ ಪ್ರಮಾಣದ ದಂಡ ತೆತ್ತ ವಾಹನ ಸವಾರರು

ಲಾಕ್‌ಡೌನ್ ಅನ್ನು ವಿಸ್ತರಿಸಿದ್ದರೂ ಸಹ ಕೋವಿಡ್ -19 ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಲಾಕ್‌ಡೌನ್‌ನಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಅಗತ್ಯವಿದ್ದರೆ ಮಾತ್ರ ವಾಹನಗಳಿಂದ ಹೊರಬರುವುದು ಸೂಕ್ತ. ವಿನಾಕಾರಣ ತಿರುಗಾಡಿದರೆ ಪೊಲೀಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಖಚಿತ.

Most Read Articles

Kannada
English summary
Mumbai traffic police collect Rs.9 crore fine from violators during lockdown. Read in Kannada.
Story first published: Friday, May 15, 2020, 12:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X