ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಕರೋನಾ ವೈರಸ್ ನಿರ್ಮೂಲನೆಗಾಗಿ ಇಡೀ ಮನು ಕುಲವೇ ಹೋರಾಡುತ್ತಿದೆ. ವಿಶ್ವದ ಅನೇಕ ದೇಶಗಳು ಕೋವಿಡ್ -19 ವೈರಸ್‌ನಿಂದ ಬಾಧಿತವಾಗಿವೆ. ಭಾರತದಲ್ಲಿಯೂ ಕೋವಿಡ್ -19 ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತದ ಲಾಕ್‌ಡೌನ್ ಜಾರಿಗೊಳಿಸಿತ್ತು. ಕೋವಿಡ್ -19 ವೈರಸ್ ನಿಯಂತ್ರಣಕ್ಕೆ ಬರದ ಕಾರಣ ಎರಡನೇ ಹಂತದ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಕೋವಿಡ್ -19 ವೈರಸ್ ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಕೇಂದ್ರ ಸರ್ಕಾರವು ಆರ್ಥಿಕ ಕುಸಿತವನ್ನೂ ಲೆಕ್ಕಿಸದೇ ಲಾಕ್‌ಡೌನ್ ಮುಂದುವರೆಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ವಿನಾಕಾರಣ ಹೊರಬರುವುದನ್ನು ನಿಷೇಧಿಸಲಾಗಿದೆ. ಬಸ್ಸು ಹಾಗೂ ಟ್ಯಾಕ್ಸಿಗಳ ಸೇವೆಗಳನ್ನು ಸಹ ರದ್ದುಪಡಿಸಲಾಗಿದೆ. ಯಾವುದೇ ರೀತಿಯ ಸಂಚಾರವಿಲ್ಲದೇ ರಸ್ತೆಗಳು ನಿರ್ಜನವಾಗಿವೆ. ಬಹುತೇಕ ಎಲ್ಲ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿವೆ.

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಗಡಿ ಭಾಗಗಳಲ್ಲಿ ಕಟ್ಟುನಿಟ್ಟಾದ ನಿರ್ಬಂಧ ಹೇರಿರುವುದರಿಂದ ಬೇರೆ ರಾಜ್ಯಗಳ ವಾಹನಗಳಿಗೆ ಅನುಮತಿ ನೀಡಲಾಗುತ್ತಿಲ್ಲ. ಅಗತ್ಯ ಸೇವೆಯ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ತಮಿಳುನಾಡು ಸರ್ಕಾರವು ವಿಭಿನ್ನ ಕ್ರಮವನ್ನು ಕೈಗೊಂಡಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಭಾರತದಲ್ಲಿ ಕೋವಿಡ್ -19 ವೈರಸ್‌ನಿಂದ ಹೆಚ್ಚು ಬಾಧಿತವಾಗಿರುವ ರಾಜ್ಯಗಳಲ್ಲಿ ತಮಿಳುನಾಡು ಕೂಡ ಒಂದು. ಸದ್ಯಕ್ಕೆ 1,885 ಜನರಿಗೆ ಕರೋನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ತಮಿಳುನಾಡಿನಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅನಗತ್ಯವಾಗಿ ಹೊರ ಬರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಇಲ್ಲವೇ ದಂಡ ವಿಧಿಸಲಾಗುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಇದರ ಜೊತೆಗೆ ತಮಿಳುನಾಡು ಸರ್ಕಾರವು ಗಡಿ ಭಾಗಗಳ ಮೇಲೂ ನಿಗಾ ವಹಿಸಿದೆ. ಅಗತ್ಯವಿಲ್ಲದ ವಾಹನಗಳು ತಮಿಳುನಾಡಿನೊಳಗೆ ಪ್ರವೇಶಿಸದಂತೆ ನಿಷೇಧ ಹೇರಲಾಗಿದೆ. ಆದರೆ ಜನರು ಅಧಿಕಾರಿಗಳ ಕೈ ಬಿಸಿ ಮಾಡಿ ವಾಹನಗಳ ಮೂಲಕ ತಮಿಳುನಾಡಿನೊಳಗೆ ಕಾಲಿಡುತ್ತಿದ್ದಾರೆ.

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರವು ಆಂಧ್ರಪ್ರದೇಶದಿಂದ ಬರುವ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಆಂಧ್ರಪ್ರದೇಶದಲ್ಲಿಯೂ ಕೋವಿಡ್ -19 ವೈರಸ್ ಆರ್ಭಟ ಹೆಚ್ಚಾಗಿದೆ. ಆಂಧ್ರಪ್ರದೇಶದಲ್ಲಿ ಇದುವರೆಗೂ 1,097 ಜನರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಆಂಧ್ರಪ್ರದೇಶದಿಂದ ಬರುವ ವಾಹನಗಳನ್ನು ತಡೆಗಟ್ಟುವ ಸಲುವಾಗಿ, ತಮಿಳುನಾಡು ಸರ್ಕಾರವು ಆಂಧ್ರಪ್ರದೇಶದ ಗಡಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸಿದೆ. ಈ ಕ್ರಮವು ಎಲ್ಲರ ಗಮನ ಸೆಳೆಯುತ್ತಿದೆ. ಆಂಧ್ರಪ್ರದೇಶದ ಗಡಿಯಲ್ಲಿ 7 ಅಡಿ ಎತ್ತರದ ಗೋಡೆಗಳನ್ನು ನಿರ್ಮಿಸಲು ತಮಿಳುನಾಡು ಸರ್ಕಾರವು ಸೂಚನೆ ನೀಡಿದೆ.

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಚಿತ್ತೂರು-ಪೊನ್ನೈ-ಚೆನ್ನೈ ರಸ್ತೆ ಹಾಗೂ ಚಿತ್ತೂರು-ಗುಡಿಯಾಥಮ್ ರಸ್ತೆ, 2 ಮುಖ್ಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ, 7 ಅಡಿ ಎತ್ತರದ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಈ ತಡೆಗೋಡೆಗಳನ್ನು ನಿರ್ಮಿಸುವ ಉದ್ದೇಶ ಅನಗತ್ಯ ವಾಹನಗಳ ಸಂಚಾರವನ್ನು ತಡೆಗಟ್ಟುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್: ವಾಹನ ಸಂಚಾರ ತಡೆಗಟ್ಟಲು ವಿನೂತನ ಕ್ರಮಕ್ಕೆ ಮುಂದಾದ ತಮಿಳುನಾಡು ಸರ್ಕಾರ

ಕರೋನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ತಡೆಯಲು ಕಾನೂನಿನಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಸಹ, ಚೇತರಿಸಿಕೊಂಡಿರುವವರ ಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿದೆ. ಇದುವರೆಗೂ 1,020 ಜನರು ಚೇತರಿಸಿಕೊಂಡಿದ್ದಾರೆ.

Most Read Articles

Kannada
English summary
Tamilnadu builds walls at Andhra border to stop movement of vehicles. Read in Kannada.
Story first published: Tuesday, April 28, 2020, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X