ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ದೇಶದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಕರೋನಾ ವೈರಸ್‌ನಿಂದ ಮಹಾರಾಷ್ಟ್ರ ರಾಜ್ಯವು ಹೆಚ್ಚು ತತ್ತರಿಸಿದೆ. ಕೋವಿಡ್ 19 ವೈರಸ್ ಪರೀಕ್ಷಿಸಲು ಮೊಬೈಲ್ ಟೆಸ್ಟಿಂಗ್ ಕೇಂದ್ರವನ್ನು ಮುಂಬೈನಲ್ಲಿ ಆರಂಭಿಸಲಾಗಿದೆ. ಈ ಟೆಸ್ಟಿಂಗ್ ಕೇಂದ್ರವನ್ನು ಬಸ್‌ನಲ್ಲಿ ಸ್ಥಾಪಿಸಲಾಗಿದೆ.

ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ಜಾವಾ ಮೋಟಾರ್‌ಸೈಕಲ್‌ನ ಅಂಗ ಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್‌ ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಈ ಟೆಸ್ಟಿಂಗ್ ಕೇಂದ್ರವನ್ನು ಹೊರತಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುವ ಉದ್ದೇಶದಿಂದ ಕೃಷ್ಣ ಡಯಾಗ್ನೋಸ್ಟಿಕ್ ಭಾರತದ ಮೊದಲ ಕೋವಿಡ್ 19 ಟೆಸ್ಟಿಂಗ್ ಬಸ್ ಅನ್ನು ಸಿದ್ಧಪಡಿಸಿದೆ.

ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ಈ ಬಸ್ ಟೆಸ್ಟಿಂಗ್ ಕೇಂದ್ರವನ್ನು ಐಐಟಿ ಅಲುಮ್ನಿ ಕೌನ್ಸಿಲ್, ಬಿಎಂಸಿ ಹಾಗೂ ಕೃಷ್ಣ ಡಯಾಗ್ನೋಸ್ಟಿಕ್ ಜಂಟಿಯಾಗಿ ತಯಾರಿಸಿವೆ. ಮುಂಬೈನಲ್ಲಿ ಆರಂಭಿಸಲಾಗಿರುವ ಈ ಬಸ್‌ನಲ್ಲಿ ನಗರದ ವಿವಿಧ ಭಾಗಗಳ ಕರೋನಾ ವೈರಸ್ ಶಂಕಿತ ಜನರನ್ನು ಪರೀಕ್ಷಿಸಲಾಗುವುದು ಎಂದು ಹೇಳಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ಈ ಟೆಸ್ಟಿಂಗ್ ಕೇಂದ್ರದಲ್ಲಿ ಎಐ ಆಧಾರಿತ ಟೆಲಿರಾಡಿಯಾಲಜಿ ಹಾಗೂ ಆರ್‌ಟಿ-ಪಿಸಿಆರ್‌ಗಳನ್ನು ಪರೀಕ್ಷಿಸಲಾಗುತ್ತದೆ. ಈ ಮೊಬೈಲ್ ಟೆಸ್ಟಿಂಗ್ ಬಸ್‌ನಿಂದಾಗಿ ಕರೋನಾ ವೈರಸ್ ಪರೀಕ್ಷೆಯ ವೆಚ್ಚವು 80%ನಷ್ಟು ಕಡಿಮೆಯಾಗುತ್ತದೆ ಎಂದು ಈ ಬಸ್ ಅನ್ನು ತಯಾರಿಸಿರುವವರು ಹೇಳಿದ್ದಾರೆ.

ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ಇದರಿಂದಾಗಿ ಪರೀಕ್ಷಾ ಸಾಮರ್ಥ್ಯವು ಮುಂದಿನ 100 ದಿನಗಳಲ್ಲಿ 100%ನಷ್ಟು ಹೆಚ್ಚಾಗಲಿದೆ. ಸದ್ಯಕ್ಕೆ ಈ ಬಸ್‌ನಲ್ಲಿ ಗಂಟೆಗೆ 10ರಿಂದ 15 ಪರೀಕ್ಷಾ ಮಾದರಿಗಳನ್ನು ಮಾತ್ರ ತೆಗೆದುಕೊಳ್ಳುಲಾಗುತ್ತಿದೆ. ಪ್ರತಿ ಮಾದರಿ ಸಂಗ್ರಹಣೆಯ ನಂತರ ಸೋಂಕುರಹಿತಗೊಳಿಸಲಾಗುತ್ತದೆ. ಇದರಿಂದ ಜನನಿಬಿಡ ಪ್ರದೇಶಗಳಲ್ಲಿ ಸುಲಭವಾಗಿ ಸ್ಕ್ರೀನ್ ಮಾಡಬಹುದಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ಈ ಬಸ್‌ನಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡಬಹುದು. ಭಾರತದಲ್ಲಿ ಶೀಘ್ರದಲ್ಲೇ ಮುಂಗಾರು ಆರಂಭವಾಗುವುದನ್ನು ಗಮನದಲ್ಲಿಟ್ಟುಕೊಂಡು ಈ ವಿಶಿಷ್ಟವಾದ ಕಲ್ಪನೆಯನ್ನು ಹೊರತರಲಾಗಿದೆ. ಈ ಬಸ್ ನಗರದ ವಿವಿಧ ಸ್ಥಳಗಳಿಗೆ ಹೋಗಿ ಸ್ಯಾಂಪಲ್‌ಗಳನ್ನು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿದೆ.

ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ಕರೋನಾ ವಾರಿಯರ್‌ಗಳಾದ ಪೊಲೀಸರು, ಆರೋಗ್ಯ ಕಾರ್ಯಕರ್ತರು ಹಾಗೂ ಅಗತ್ಯ ಸೇವೆಗಳನ್ನು ಪೂರೈಸುವವರ ಪರೀಕ್ಷೆಯನ್ನು ಈ ಬಸ್‌ನ ಸಹಾಯದಿಂದ ನಡೆಸಲಾಗುತ್ತಿದೆ. ಸಾಮರ್ಥ್ಯ ಹೆಚ್ಚಾದಂತೆ, ಇದನ್ನು ಸಾಮಾನ್ಯ ಜನರಿಗೆ ಸಹ ಬಳಸಲಾಗುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ಪರೀಕ್ಷಿಸಲು ಬಂತು ಮೊಬೈಲ್ ಟೆಸ್ಟಿಂಗ್ ಸೆಂಟರ್

ಟೆಸ್ಟಿಂಗ್ ಕೇಂದ್ರವು ಭಾರತದಲ್ಲಿರುವ ವಿಶಿಷ್ಟವಾದ ಪರೀಕ್ಷಾ ಲ್ಯಾಬ್ ಆಗಿದೆ. ಇದನ್ನು ಸುಲಭವಾಗಿ ಪ್ರವೇಶಿಸಬಹುದು. ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಕರೋನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟು ಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Most Read Articles

Kannada
English summary
Mobile testing facility introduced in Mumbai. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X