ಕಾರಿನ ಮರ್ಯಾದೆ ತೆಗೆದ ಮಾಲೀಕ... Kia Carens ಗೆ ಸ್ಕೂಟರ್‌ನಂತೆ ಕ್ರಾಷ್ ಗಾರ್ಡ್!

ಭಾರತದಲ್ಲಿ ಮಾಡಿಫೈ ಕಾರುಗಳಿಗೇನು ಕಮ್ಮಿ ಇಲ್ಲ ಬಿಡಿ. ಆದ್ರೆ ಮಾಡಿಫೈ ಮಾಡಿದ ಬಳಿಕ ಹಳೆಯ ಲುಕ್‌ಗಿಂತ ಹೊಸ ಲುಕ್ ನೋಡಲು ಆಕರ್ಷಕವಾಗಿರಬೇಕು, ಆದ್ರೆ ಇಲ್ಲೊಬ್ಬ ಮಾಲೀಕ ಸುರಕ್ಷತೆಗಾಗಿ ತನ್ನ ಕಿಯಾ ಕಾರೆನ್ಸ್ ಕಾರಿಗೆ ಸ್ಕೂಟರ್‌ಗಳಲ್ಲಿ ಕಾಣುವ ಕ್ರಾಷ್ ಗಾರ್ಡ್ ಅನ್ನು ಕಾರಿನ ಸುತ್ತಾ ಹಾಕಿದ್ದಾನೆ.

ತುಂಬಾ ಜನ ಹೇಳಬಹುದು, ತಮ್ಮ ಕಾರು ತಮ್ಮಿಷ್ಟ ಸುರಕ್ಷತೆಗಾಗಿ ಅವರಿಗೆ ಇಷ್ಟವಾದಂತೆ ಇಟ್ಟುಕೊಳ್ಳುತ್ತಾರೆ. ಆದ್ರೆ ನಮಗೆ ತಿಳಿದಿರುವಂತೆ ಅದು ಸುರಕ್ಷತೆ ನೀಡುವಷ್ಟು ಗಟ್ಟಿಮುಟ್ಟಿಯಾಗಿಲ್ಲ ಎಂದೆನಿಸುತ್ತದೆ. ಇವು ಬೀಳುವ ಸಂದರ್ಭದಲ್ಲಿ ಹೆಚ್ಚಿನ ಹಾನಿಯನ್ನು ತಪ್ಪಿಸಲು ಬಾಡಿ ಗಾರ್ಡ್ ಆಗಿ ಸ್ಕೂಟರ್‌ಗಳಲ್ಲಿ ಬಳಸಲಾಗುತ್ತದೆ. ಆದ್ರೆ ಸ್ಕೂಟರ್ ಹಾಗೂ ಕಾರಿಗೆ ವ್ಯತ್ಯಾಸವಿಲ್ಲವೇ ಎಂಬುದು ಇಲ್ಲಿನ ಪ್ರಶ್ನೆ?

Kia Carens

ಈ ಕಾರಿಗೆ ಸಂಬಂಧಿಸಿದ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕಿಯಾ ಕ್ಯಾರೆನ್ಸ್ ಹೆಚ್ಚಿನ ಐಷಾರಾಮಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾದ ಕಾರು. ಅಂತಹ ಕಾರಿಗೆ ದೃಷ್ಟಿ ಗೊಂಬೆ ಎಂಬಂತೆ ಮಾಲೀಕರು ಬಾಡಿ ಗಾರ್ಡ್‌ಗಳನ್ನು ಅಳವಡಿಸಿದ್ದಾರೆ. ಕೆಲವು ರೇಸರ್‌ಗಳು ತಮ್ಮ ಕಾರುಗಳಲ್ಲಿ ಅಂತಹ ಗಾರ್ಡ್‌ಗಳನ್ನು ಬಳಸುತ್ತಾರೆ. ಕಾರು ಉರುಳಿದಾಗ ಈ ಗಾರ್ಡ್‌ಗಳು ಪ್ರಮುಖ ಸುರಕ್ಷತಾ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ.

ರೇಸರ್‌ಗಳು ಬಳುಸುವ ಗಾರ್ಡ್‌ಗಳು ತುಂಬಾ ಗಟ್ಟಿಮುಟ್ಟಿಯಾಗಿ ಹಾಗೂ ಗುಣಮಟ್ಟದ್ದಾಗಿರುತ್ತವೆ. ಕಿಯಾ ಕಾರೆನ್ಸ್ ಮಾಲೀಕ ಸಾಮಾನ್ಯ ಕಾರಿಗೆ ಈ ರೀತಿಯ ಗಾರ್ಡ್‌ ಬಳಸಿರುವುದನ್ನು ಜನ ಅಚ್ಚರಿಯಾಗಿ ನೋಡುತ್ತಿದ್ದಾರೆ. ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಈ ಕಿಯಾ ಕಾರೆನ್ಸ್ ಕಾರು ಹೊಚ್ಚ ಹೊಸ ಕಾರಾಗಿದ್ದು, ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ಹೊಂದಿರುವುದನ್ನು ನೋಡಬಹುದು.

ವಾಹನವನ್ನು ನೋಂದಾಯಿಸುವ ಮೊದಲು ಯಾವುದೇ ಹಾನಿಯಾಗದಂತೆ ಮಾಲೀಕ ಈ ಗಾರ್ಡ್ ಅನ್ನು ಬಳಸಿರಬಹುದು. ಇಲ್ಲದಿದ್ದರೇ ಸಿನಿಮಾ ಶೂಟಿಂಗ್‌ಗೆ ಬಳಸುವ ವಾಹನಗಳಲ್ಲಿಯೂ ಇದೇ ರೀತಿಯ ಗಾರ್ಡ್‌ಗಳನ್ನು ಬಳಸಲಾಗುತ್ತದೆ. ಕೆಲವು ಸಾಹಸ ದೃಶ್ಯಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾಗಳನ್ನು ಸಾಗಿಸಲು ಇಂತಹ ಗಾರ್ಡ್‌ಗಳನ್ನು ಬಳಸಲಾಗುತ್ತದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಐಷಾರಾಮಿ ಕಿಯಾ ಕಾರೆನ್ಸ್: ಭಾರತದಲ್ಲಿ ಕಿಯಾ ಕಾರೆನ್ಸ್ ಎರ್ಟಿಗಾ ಮತ್ತು XL6 ಗಿಂತ ಹೆಚ್ಚು ಸ್ಥಳಾವಕಾಶ ಮತ್ತು ಪ್ರೀಮಿಯಂ-ನೆಸ್ ಅನ್ನು ನೀಡುವ ಉತ್ತಮ MPV ಆಗಿದೆ. ಭಾರತದಲ್ಲಿ SUV ಮತ್ತು MPV ಕಾರು ಪ್ರಿಯರನ್ನು ಸೆಳೆಯಲು ಕಿಯಾ ಕಂಪನಿಯು ಈ ಮಾದರಿಗೆ ಅಂತಹ ನೋಟವನ್ನು ನೀಡಿದೆ. ಭಾರತದ ದೊಡ್ಡ ಕುಟುಂಬಗಳಿಗೆ ಸೂಕ್ತವಾದ ವಾಹನವಾಗಿಯೂ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಕಾರೆನ್ಸ್ ಆರು ಮತ್ತು ಏಳು ಆಸನಗಳ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಹೆಚ್ಚು ಐಷಾರಾಮಿ ಜಾಗವನ್ನು ಹುಡುಕುತ್ತಿರುವವರಿಗೆ ಆರು ಆಸನಗಳ ಆಯ್ಕೆಯು ಇದರಲ್ಲಿ ಪರಿಪೂರ್ಣ ಆಯ್ಕೆಯಾಗಿದೆ. ಕಿಯಾ ಕ್ಯಾರೆನ್ಸ್ ಭಾರತದಲ್ಲಿ ಮಾರುತಿ ಸುಜುಕಿ XL6 ಮತ್ತು ಎರ್ಟಿಗಾದೊಂದಿಗೆ ಸ್ಪರ್ಧಿಸುತ್ತದೆ. ಇದರ ಆರಂಭಿಕ ಬೆಲೆ ರೂ. 10.45 ಲಕ್ಷ (ಎಕ್ಸ್ ಶೋರೂಂ) ಇದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Wednesday, May 31, 2023, 10:04 [IST]
English summary
Crash guard like activa for kia carens
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+