ರೋಚಕ ವೀಡಿಯೋ: ಚಲಿಸುವ ಕಾರಿನ ಮೇಲಿಂದ ಜಿಗಿತ
ಯಾವುದೇ ಕಾರಣಕ್ಕೂ ನೀವಿದನ್ನು ಟ್ರೈ ಮಾಡದಿರಿ ಎಂಬುದನ್ನು ನಾವು ಮೊದಲೇ ಹೇಳಿಬಿಡುತ್ತೇವೆ. ಯಾಕೆಂದರೆ ಇಲ್ಲೊಬ್ಬ ಪ್ರದರ್ಶಕ, ಚಲಿಸುವ ಕಾರಿನ ಮೇಲಿಂದಾಗಿ ಇನ್ನೊಂದು ಬದಿಗೆ ಹಾರುವ ಮೂಲಕ ತಮ್ಮ ಕೌಶಲ್ಯ ಮೆರೆದಿದ್ದಾರೆ.
ಸ್ವೀಡನ್ ಮೂಲದ ಕೋಬ್ ಬ್ರೈಂಟ್ ಎಂಬವರೇ ಈ ಅತಿ ಸಾಹಸ ಮಾಡಲು ಮುಂದಾಗಿದ್ದಾರೆ. ಗಂಟೆಗೆ 130 ಕೀ.ಮೀ.ಗಿಂತಲೂ ವೇಗದಲ್ಲಿ ಚಲಿಸುತ್ತಿದ್ದ ಲಂಬೋರ್ಗಿನಿ ಗಲರ್ಡೊ ಕಾರಿನ ಮೇಲಿಂದ ಜಿಗಿಯುವ ಮೂಲಕ ಕೋಬ್ ಹೆಸರು ಗಿಟ್ಟಿಸಿದ್ದಾರೆ.
ಜಿಮ್‌ನಲ್ಲಿ ನಿರತ ಅಭ್ಯಾಸದ ಬಳಿಕ ಕೋಬ್ ಅವರಿಗೆ ಇಂತಹದೊಂದು ಸಾಧನೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಟೈಮಿಂಗ್ ಅತಿ ಮುಖ್ಯವಾಗಿರುವುದರಿಂದ ಕೋಬ್ ನಿರಂತರ ಅಭ್ಯಾಸದಲ್ಲಿ ತೊಡಗಿದ್ದರು.
ರೋಚಕ ವೀಡಿಯೋ ವೀಕ್ಷಿಸಿ


Click it and Unblock the Notifications








