ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ: ಐಪಿಎಲ್‌ಗೆ ಹಾಯ್... ದುಬಾರಿ ಕಾರುಗಳ ಒಡೆಯ ಅಶ್ವಿನ್!

ಭಾರತದ ಖ್ಯಾತ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ದ ನಡೆದ ಮೂರನೇ ಪಂದ್ಯದ ಬಳಿಕ ಸುದ್ದಿಗೋಷ್ಟಿಯಲ್ಲಿ ಕಾಣಿಸಿಕೊಂಡ ಅಶ್ವಿನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಮೂಲಕ ತಮ್ಮ 14 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಅನ್ನು ಅಂತ್ಯಗೊಳಿಸಿದ್ದಾರೆ. ನಿವೃತ್ತಿಯ ಹೊರತಾಗಿಯೂ, 2025 ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದನ್ನು ಮುಂದುವರಿಸಲಿದ್ದಾರೆ. ಒಟ್ಟಾರೆ ತಮ್ಮ ಕ್ರಿಟೆಕ್ ಜರ್ನಿಯಲ್ಲಿ ಈವರಗೆ 132 ಕೋಟಿ ರೂ. ಸಂಪಾದನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅವರ ಬಹುಪಾಲು ಸಂಪಾದನೆಯು ಕೇವಲ ಅಂತರರಾಷ್ಟ್ರೀಯ, ದೇಶೀಯ ಪಂದ್ಯಗಳು ಹಾಗೂ ಐಪಿಎಲ್ ಮಾತ್ರವಲ್ಲದೆ, ಅನೇಕ ಪ್ರಮುಖ ಬ್ರಾಂಡ್‌ಗಳೊಂದಿಗೆ ಒಪ್ಪಂದಗಳನ್ನು ಹೊಂದಿದ್ದು, ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್‌ನಿಂದಲು ಸಾಕಷ್ಟು ಹಣ ಗಳಿಸುತ್ತಾರೆ. ಇದು ಅವರ ಒಟ್ಟಾರೆ ಆದಾಯಕ್ಕೆ ಕೊಡುಗೆ ನೀಡುತ್ತದೆ.

cricketer-ashwin-car-collection-rolls-royce-and-audi-q7

ಸರಳವಾಗಿ ಹೇಳುವುದಾದರೆ, ಅಶ್ವಿನ್ ಅವರು ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ, ಜಾಹೀರಾತು ಜಗತ್ತಿನಲ್ಲಿಯೂ ಒಬ್ಬ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಸಂಪತ್ತಿನ ಹೊರತಾಗಿಯೂ, ಇತರ ಕ್ರಿಕೆಟ್ ಆಟಗಾರರಂತೆ ಅಶ್ವಿನ್ ಐಷಾರಾಮಿ ಕಾರುಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಕೇವಲ ಎರಡು ಹೈ ಎಂಡ್ ವಾಹನಗಳನ್ನು ಮಾತ್ರ ಹೊಂದಿದ್ದಾರೆ. ರೋಲ್ಸ್ ರಾಯ್ಸ್ ಹಾಗೂ ಆಡಿ ಬ್ರಾಂಡ್‌ನ ಕಾರುಗಳನ್ನು ಸದ್ಯ ಬಳಸುತ್ತಿದ್ದಾರೆ.

ಆಡಿ ಕ್ಯೂ7: ಅಶ್ವಿನ್ ಅವರ ಸಂಗ್ರಹದಲ್ಲಿರುವ ಪ್ರಮುಖ ಐಷಾರಾಮಿ ವಾಹನವೆಂದರೆ ಆಡಿ ಕ್ಯೂ 7 ಕಾರು. ಅಶ್ವಿನ್ ಅವರ ಆಡಿ ಕ್ಯೂ 7ನ ಯಾವುದೇ ಚಿತ್ರಗಳು ಈವರೆಗೆ ಬಹಿರಂಗವಾಗಿಲ್ಲ. ಭಾರತದಲ್ಲಿ ಆಡಿ ಕ್ಯೂ7 ಕಾರು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಇದರ ಬೆಲೆ ಕ್ರಮವಾಗಿ ರೂ.88.66 ಲಕ್ಷ ಮತ್ತು ರೂ.97.81 ಲಕ್ಷಗಳಾಗಿದೆ.

cricketer-ashwin-car-collection-rolls-royce-and-audi-q7

ಅಶ್ವಿನ್ ಆಡಿ ಕ್ಯೂ 7 ಯಾವ ವೆರಿಯೆಂಟ್ ಅನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅವರು ಹೆಚ್ಚು ದುಬಾರಿ ಟೆಕ್ನಾಲಜಿ ವೇರಿಯೆಂಟ್ ಹೊಂದಿರುವ ಸಾಧ್ಯತೆಯಿದೆ. ಆಡಿ ಕಳೆದ ನವೆಂಬರ್ ನಲ್ಲಿ ಕ್ಯೂ 7 ಅನ್ನು 3.0-ಲೀಟರ್ ವಿ6 ಪೆಟ್ರೋಲ್ ಎಂಜಿನ್ ನೊಂದಿಗೆ ಅಪ್‌ಡೇಟ್ ಮಾಡಿದೆ. ಅಶ್ವಿನ್ ಇದನ್ನು ಮೊದಲೇ ಸ್ವಾಧೀನಪಡಿಸಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ರೋಲ್ಸ್ ರಾಯ್ಸ್: ಅಶ್ವಿನ್ ಅವರ ಐಷಾರಾಮಿ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕೂಡ ಒಂದು. ಭಾರತದಲ್ಲಿ ರೋಲ್ಸ್ ರಾಯ್ಸ್ ಸ್ಪೆಕ್ಟರ್ ಇವಿ, ಕಲ್ಲಿನನ್ ಮತ್ತು ಫ್ಯಾಂಟಮ್ ಎಂಬ ಮೂರು ಮಾದರಿಗಳು ಲಭ್ಯವಿವೆ. ಇವುಗಳಲ್ಲಿ ಅಶ್ವಿನ್ ಅವರ ನಿರ್ದಿಷ್ಟ ಮಾದರಿ ಯಾವುದು ಎಂಬುದು ತಿಳಿದುಬಂದಿಲ್ಲ. ವರದಿಗಳ ಪ್ರಕಾರ ಅಶ್ವಿನ್ ಅವರ ರೋಲ್ಸ್ ರಾಯ್ಸ್ ಕಾರಿನ ಬೆಲೆಯು ರೂ.6 ಕೋಟಿಗಳಿರಬಹುದು ಎನ್ನಲಾಗಿದೆ.

cricketer-ashwin-car-collection-rolls-royce-and-audi-q7

ರವಿಚಂದ್ರನ್ ಅಶ್ವಿನ್ ಅವರ ಐಪಿಎಲ್ ಪ್ರಯಾಣವು 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಆರಂಭಗೊಂಡಿತು. 2024ರಲ್ಲಿ ಅಶ್ವಿನ್ 5 ಕೋಟಿ ಸಂಭಾವನೆಯೊಂದಿಗೆ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಈ ಬಾರಿ ಅಶ್ವಿನ್ ಮತ್ತೊಮ್ಮೆ 2025 ರಲ್ಲಿ ನಡೆಯಲಿರುವ IPL ಪಂದ್ಯಾವಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮರಳಲಿದ್ದಾರೆ. ಮೆಗಾ ಹರಾಜಿನಲ್ಲಿ CSK 9.75 ಕೋಟಿ ರೂ.ಗೆ ಅಶ್ವಿನ್ ಅವರನ್ನು ಪಡೆದುಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, December 20, 2024, 12:01 [IST]
English summary
Cricketer ashwin car collection rolls royce and audi q7
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+