ರಸ್ತೆ ಮೇಲಿನ ಅರಮನೆಯಲ್ಲಿ ಬಂದಿಳಿದ ಹಾರ್ದಿಕ್ ಪಾಂಡ್ಯ: ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು ಒಂದಲ್ಲ ಒಂದು ವಿಷಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿರುತ್ತಾರೆ. ಇತ್ತೀಚೆಗೆ ನತಾಶಾ ಸ್ಟ್ಯಾನ್ಕೊವಿಚ್ ಅವರೊಂದಿಗೆ ಬೇರ್ಪಟ್ಟಿದ್ದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಗಾಯಕಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂದು ಸುದ್ದಿಯಾಗಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಐಷಾರಾಮಿ ಲೆಕ್ಸಸ್LM350h (Lexus LM350h) ಎಂಪಿವಿಯನ್ನು ಖರೀದಿಸಿದ್ದಾರೆ. ಹಾರ್ದಿಕ್ ಪ್ರತಿಭಾನ್ವಿತ ಆಲ್‌ರೌಂಡರ್ ಆಗಿದ್ದು, ಅವರು ದೀರ್ಘಕಾಲದವರೆಗೆ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್, ಭಾರತ ವಿಶ್ವ ಚಾಂಪಿಯನ್ ಆಗಿದ್ದಾಗ ಹಾರ್ದಿಕ್ ಅವರ ವೃತ್ತಿಜೀವನದ ಅತಿದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಹಾರ್ದಿಕ್ ಅವರು ಹೆಚ್ಚು ಕಾರು ಕ್ರೇಜ್ ಗಳನ್ನು ಹೊಂದಿದ್ದಾರೆ. ಈ ಹಿಂದೆ ಹಲವು ದುಬಾರಿ ವಾಹನಗಳಲ್ಲಿ ಅವರನ್ನು ನೋಡಿದ್ದೇವೆ. ಯುಟ್ಯೂಬ್ ನಲ್ಲಿ ಕಾರ್ಸ್ ಫಾರ್ ಯೂ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಐಷಾರಾಮಿ ಲೆಕ್ಸಸ್LM350h ಬಂದಿಳಿಯುವ ದೃಶ್ಯವನ್ನು ಹೊಂದಿದೆ.

ವೀಡಿಯೋದಲ್ಲಿ ಲೆಕ್ಸಸ್LM350h ಬಂದು ನಿಂತ ತಕ್ಷಣ ಡೋರ್ ತೆರೆದ ತಕ್ಷಣ, ಹಾರ್ದಿಕ್ ತನ್ನ ಕೈಯಲ್ಲಿ ಐಪ್ಯಾಡ್ ಇಡಿದುಕೊಂಡು ಇಳಿದು ಬರುವ ದೃಶ್ಯವನ್ನು ನೀವು ನೋಡಬಹುದು. ಲೆಕ್ಸಸ್ LM350h ಒಂದು ಮೆಗಾ-ಐಷಾರಾಮಿ ಎಂಪಿವಿಯಾಗಿದೆ. ಈ ದುಬಾರಿ ಎಂಪಿವಿಗೆ ಎಕ್ಸ್ ಶೋರೂಂ ಪ್ರಕಾರ ರೂ.2.50 ಕೋಟಿ ಬೆಲೆಯನ್ನು ಹೊಂದಿದೆ.
ಈ ಲೆಕ್ಸಸ್ LM350h ಎಂಪಿವಿಯ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 2.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಜೋಡಿಸಲಾಗಿದೆ. ಈ ಪವರ್‌ಟ್ರೇನ್ 190 bhp ಮತ್ತು 240 Nm ಟಾರ್ಕ್‌ನ ಸಂಯೋಜಿತ ಉತ್ಪಾದನೆಯನ್ನು ನೀಡುತ್ತದೆ, ಆದರೆ ಆಟೋಮ್ಯಾಟಿಕ್ ರಂತರ ವೇರಿಯಬಲ್ ಟ್ರಾನ್ಸ್‌ಮಿಷನ್ (CVT) ಗೆ ಜೋಡಿಸಲಾಗಿದೆ.

ಕಂಪನಿಯು 19.28 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ ಮತ್ತು ಫುಲ್ ಟ್ಯಾಂಕ್‌ನಲ್ಲಿ ಈ ಕಾರು 1200 km ಗಿಂತಲೂ ಹೆಚ್ಚು ಚಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಹೊಸ ಲೆಕ್ಸಸ್ ಎಂಪಿವಿಯನ್ನು ಉತ್ತಮ ಏರೋಡೈನಾಮಿಕ್ಸ್‌ಗಾಗಿ ವಿನ್ಯಾಸದಲ್ಲಿ ಹೊಸ ನವೀಕರಣಗಳನ್ನು ಮಾಡಲಾಗಿದೆ. ಹೊಸ ವಿನ್ಯಾಸದಲ್ಲಿರುವ ಹೊರಭಾಗಗಳು ಹೊಸ ಸ್ಪಿಂಡಲ್ ಬಾಡಿ ಫ್ರಂಟ್ ಗ್ರಿಲ್ ವಿನ್ಯಾಸ ಮತ್ತು ಕ್ರೋಮ್ ಅಸ್ಸೆಂಟ್ ಗಳನ್ನು ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ.
ಇನ್ನು ಈ ಮಿನಿವ್ಯಾನ್ ಒಳಭಾಗವು ಐಷಾರಾಮಿಯಾಗಿದೆ. ಇದು ಒಂದು ವಿಭಾಗ ಮತ್ತು ಅಗಲದ ಡಿಸ್ ಪ್ಲೇ ಯುನಿಟ್ ನೊಂದಿಗೆ ಕಂಡುಬರುತ್ತದೆ. ಇದು ಹಿಂತೆಗೆದುಕೊಳ್ಳುವ ಗ್ಲಾಸ್ ವಿಭಾಗವನ್ನು ಸಹ ಹೊಂದಿದೆ, ಅದು ಮುಂಭಾಗವನ್ನು ಹಿಂದಿನ ವಿಭಾಗಗಳಿಂದ ಪ್ರತ್ಯೇಕಿಸುತ್ತದೆ ಆದರೆ ಅದೇ ಸಮಯದಲ್ಲಿ ಮುಂದೆ ರಸ್ತೆಯ ಸ್ಪಷ್ಟ ನೋಟ ನೀಡುತ್ತದೆ. ಈ ಐಷಾರಾಮಿ ಮಿನಿವ್ಯಾನ್ ಮಾದರಿಯ ಫೀಚರ್ಸ್ ಬಗ್ಗೆ ಹೇಳುವುದಾದರೆ, ಟೇಬಲ್ ಮತ್ತು ಲೆದರ್ ಸುತ್ತುವ ಮೇಲ್ಮೈಗಳಿಂದ ಕೂಡಿದೆ.

ಈ ಅತ್ಯುತ್ತಮವಾದ ಸೌಕರ್ಯವನ್ನು ನೀಡುವ ದೊಡ್ಡ ಸೀಟುಗಳನ್ನು ಸಹ ಒಳಗೊಂಡಿದೆ. ಇನ್ನು ಈ ಕಾರಿನಲ್ಲಿ ರೆಫ್ರಿಜರೇಟರ್, ಸ್ಟೋರೇಜ್ ವಿಭಾಗಗಳು, ಹಿಟೆಡ್ ಆರ್ಮ್ ರೆಸ್ಟ್‌ಗಳು ಮತ್ತು ಬಾಡಿಯ ಉಷ್ಣತೆಯನ್ನು ಪತ್ತೆಹಚ್ಚುವ ಮತ್ತು HVAC ಅನ್ನು ನಿಯಂತ್ರಿಸುವ ಸುಧಾರಿತ ತಾಪಮಾನ ಮತ್ತು ಕೂಲಿಂಗ್ ಸಿಸ್ಟಂ ಸಹ ಅದರ ಒಳಾಂಗಣದ ಒಂದು ಭಾಗವಾಗಿದೆ. ಈ ಮಿನಿವ್ಯಾನ್ ಆರಾಮದಾಯಕ ಪ್ರಯಾಣಕ್ಕೆ ಸೂಕ್ತವಾಗಿದೆ.
ಈ ಲೆಕ್ಸಸ್ ಮಾದರಿಯು 5,125 mm ಉದ್ದ, 1,890 mm ಅಗಲ ಮತ್ತು 1,945 mm ಎತ್ತರವನ್ನು ಹೊಂದಿದೆ. ಇನ್ನು 3,000 mm ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ. ಹಿಂದಿನ Lexus LM ಮಿನಿವ್ಯಾನ್ ಮಾದರಿಗೆ ಹೋಲಿಸಿದರೆ, 85 mm ಉದ್ದ, 40 mm ಅಗಲ ಮತ್ತು 10 mm ಎತ್ತರವನ್ನು ಹೊಂದಿದೆ. ಇದರಲ್ಲಿ 17 ಇಂಚಿನ ಅಥವಾ 19 ಇಂಚಿನ ಅಲಾಯ್ ವ್ಹೀಲ್ ಗಳಿವೆ.


Click it and Unblock the Notifications








