ಐರಾವತದಂತಿರುವ ಕಾರು ಖರೀದಿಸಿದ ಖ್ಯಾತ ಕ್ರಿಕೆಟಿಗ.. ಇಷ್ಟೊಂದು ದುಬಾರಿಯೇ?

ಇಶಾನ್ ಕಿಶನ್ (Ishan Kishan), ಜನಪ್ರಿಯ ಕ್ರಿಕೆಟರ್ ಆಗಿದ್ದು, ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಅವರು, 2021ರಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾರೆ. ಇಶಾನ್ ಕಿಶನ್ ಅವರಿಗೆ ಕ್ರಿಕೆಟ್‌ನಂತೆ ಕಾರುಗಳ ಮೇಲೂ ವಿಶೇಷವಾದ ಪ್ರೀತಿಯಿದ್ದು, ಹಲವು ದುಬಾರಿ ಬೆಲೆಯ ಐಷಾರಾಮಿ ಸೆಡಾನ್ & ಎಸ್‌ಯುವಿಗಳ ಮಾಲೀಕರು ಸಹ ಆಗಿದ್ದಾರೆ.

ಇತ್ತೀಚೆಗೆ ಕ್ರಿಕೆಟಿಗ ಇಶಾನ್ ಕಿಶನ್ ಅವರು ದುಬಾರಿ ಬೆಲೆಯ ಹೊಚ್ಚ ಹೊಸ ಐಷಾರಾಮಿ ಮರ್ಸಿಡಿಸ್-ಬೆಂಜ್ ಜಿಎಲ್ಎಸ್ (Mercedes-Benz GLS) ಕಾರನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿವೆ. ನೂತನ ಕಾರು ತೆಗೆದುಕೊಂಡಿರುವ ಇಶಾನ್ ಕಿಶನ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Cricketer Ishan Kishan Buys Mercedes-Benz GLS Car Details

ಮರ್ಸಿಡಿಸ್-ಬೆಂಜ್ ಜಿಎಲ್ಎಸ್ ವಿಶೇಷತೆಗಳೇನು: ಇದೊಂದು ಎಸ್‌ಯುವಿಯಾಗಿದ್ದು, ರೂ.1.34 ಕೋಟಿಯಿಂದ ರೂ.1.39 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ಜಿಎಲ್ಎಸ್ 450 ಹಾಗೂ ಜಿಎಲ್ಎಸ್ 450ಡಿ ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಪೋಲಾರ್ ವೈಟ್, ಅಬ್ಸಿಡಿಯನ್ ಬ್ಲಾಕ್, ಹೈ-ಟೆಕ್ ಸಿಲ್ವರ್, ಸೆಲೆಂಟೈನ್ ಗ್ರೇ ಹಾಗೂ ಸೋಡಾಲೈಟ್ ಬ್ಲೂ ಬಣ್ಣಗಳೊಂದಿಗೂ ಸಿಗುತ್ತದೆ.

ಈ ಕಾರು, 48ವಿ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಬೆಂಬಲಿಸಬಲ್ಲ ಎರಡು ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದೆ. ಇದರ 3-ಲೀಟರ್ 6-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್, 381 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 500 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 3-ಲೀಟರ್ 6-ಸಿಲಿಂಡರ್ ಡಿಸೇಲ್ ಎಂಜಿನ್, 367 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 750 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

Cricketer Ishan Kishan Buys Mercedes-Benz GLS Car Details

ನೂತನ ಎಸ್‌ಯುವಿ 9-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಹೊಂದಿದ್ದು, ಎಡಬ್ಲ್ಯೂಡಿ (ಆಲ್-ವೀಲ್ ಡ್ರೈವ್) ಟೆಕ್ನಾಲಜಿಯನ್ನು ಒಳಗೊಂಡಿದೆ. 12 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದು ವಿಶಾಲವಾದ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 355 ರಿಂದ 520 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿದೆ.

ಹೊಸ ಮರ್ಸಿಡಿಸ್-ಬೆಂಜ್ ಜಿಎಲ್ಎಸ್ ಕಾರು, ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಗಾಗಿ 12.3-ಇಂಚಿನ ಡುಯಲ್ ಸ್ಕ್ರೀನ್, 5-ಜೋನ್ ಕ್ಲೇಮೇಟ್ ಕಂಟ್ರೋಲ್, 13-ಸ್ಪೀಕರ್ ಬರ್ಮೆಸ್ಟರ್ 3ಡಿ ಸೌಂಡ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 9 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

ಇನ್ನು, ಇಶಾನ್ ಕಿಶನ್ ಅವರು ಮರ್ಸಿಡಿಸ್-ಬೆಂಜ್ ಜಿಎಲ್ಎಸ್ ಮಾತ್ರವಲ್ಲದೆ, ಹಲವು ದುಬಾರಿ ಕಾರುಗಳ ಒಡೆಯರು ಕೂಡ ಆಗಿದ್ದಾರೆ. ಅವರ ಬಳಿ ಬಿಎಂಡಬ್ಲ್ಯು 5 ಸೀರೀಸ್ (BMW 5 Series) ಕಾರಿದೆ. ಇದು ರೂ.72.90 ಲಕ್ಷ ದರವನ್ನು ಪಡೆದಿದೆ. ಜೊತೆಗೆ ಅವರು, ಮರ್ಸಿಡಿಸ್-ಬೆಂಜ್ ಸಿ-ಕ್ಲಾಸ್ (Mercedes-Benz C-Class) ಕಾರನ್ನು ಹೊಂದಿದ್ದಾರೆ. ಈ ಸೆಡಾನ್ ರೂ.59.40 ಲಕ್ಷದಿಂದ ರೂ.66.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, February 4, 2025, 15:40 [IST]
English summary
Cricketer ishan kishan buys mercedes benz gls car details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+