ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ಚೀನಾದಿಂದ ಹರಡಲಾರಂಭಿಸಿದ ಕರೋನಾ ವೈರಸ್‌ ಇಂದು ಜಗತ್ತಿನಾದ್ಯಂತ ಆತಂಕವನ್ನು ಸೃಷ್ಟಿಸಿದೆ. ಭಾರತದಲ್ಲಿಯು ಕೂಡ ದಿನೇ ದಿನೇ ಕರೋನಾ ವೈರಸ್ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ.

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ಕರೋನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್​ಡೌನ್ ಜಾರಿಯಲ್ಲಿದೆ. ಮನೆಯಲ್ಲಿಯೇ ಇರಲು ಸರ್ಕಾರ, ಚಿತ್ರ ನಟ ನಟಿಯರು ಅಲ್ಲದೇ ಅನೇಕ ಕ್ರಿಕೆಟಗರು ಕೂಡ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಆಟಗಾರ ಲಾಕ್​ಡೌನ್ ಉಲ್ಲಂಘಿಸಿ ಸುದ್ದಿಯಾಗಿದ್ದಾರೆ. ಟೀಂ ಇಂಡಿಯಾ ಆಟಗಾರ ರಿಷಿ ಧವನ್ ಲಾಕ್​ಡೌನ್ ಉಲ್ಲಂಘಿಸಿ ದಂಡ ಕಟ್ಟಿದ್ದಾರೆ.

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ಕರೋನಾ ವೈರಸ್‌ ಮುಖ್ಯವಾಗಿ ಹರಡುವುದು ಸಾರ್ವಜನಿಕ ಸಂಪರ್ಕದಿಂದ. ಸೋಂಕಿತ ಸ್ಪರ್ಶಿಸಿದ ಜಾಗ, ವಸ್ತುವನ್ನು ಇನ್ನೊಬ್ಬ ವ್ಯಕ್ತಿ ಸ್ಪರ್ಶಿಸಿದಾಗ ಕೈಸೇರುವ ವೈರಸ್‌ ಮೂಗು, ಕಣ್ಣಿನ ಮೂಲಕ ದೇಹವನ್ನು ಸೇರುವುದರಿಂದ ಸೋಂಕು ಹರಡುತ್ತದೆ.

MOST READ: ಮಗನಿಗಾಗಿ 1400 ಕಿ.ಮೀ ಪ್ರಯಾಣಿಸಿದ ತಾಯಿ

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ಹೀಗಾಗಿ, ಲಾಕ್‌ಡೌನ್‌ನ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಿದರೆ ಮಾತ್ರ ಕರೋನಾ ವೈರಸ್ ನಿಂದ ತಪ್ಪಿಸಬಹುದು. ನಿಯಮಗಳನ್ನು ಉಲ್ಲಂಘಿಸಿ ಓಡಾಟ, ಜನ ಸಂಪರ್ಕ ನಡೆಸಿದರೆ ವೈರಾಣು ಪ್ರಸರಣದ ಚೈನ್‌ ಮುರಿಯುವುದಿಲ್ಲ.

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ಈ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತದಲ್ಲಿ ಏಪ್ರಿಲ್‌ 14ರವರೆಗೆ ಲಾಕ್​ಡೌನ್ ಮಾಡಿದರು. ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸುವ ಕುರಿತಾಗಿಯೂ ಚಿಂತನೆ ನಡೆದಿದೆ. ಆದರೆ ಟೀಂ ಇಂಡಿಯಾದ ಅವಕಾಶ ವಂಚಿತ ಆಟಗಾರ ಆಲ್‌ರೌಂಡರ್‌ ರಿಷಿ ಧವನ್‌ ಬೇಜವಾಬ್ದಾರಿತನ ಮೆರೆದು ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿದ್ದಾರೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ಹಿಮಾಚಲ ಪ್ರದೇಶದ ಆಲ್‌ರೌಂಡರ್ ರಿಷಿ ಧವನ್ ಅವರು ಬ್ಯಾಂಕ್‌ಗೆ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದು ವಿಚಾರಿಸಿದ್ದಾರೆ. ವಾಹನಕ್ಕೆ ಪಾಸ್ ಇಲ್ಲದ ಕಾರಣ ರಿಷ ಧವನ್ ಅವರಿಗೆ ರೂ.500 ದಂಡ ವಿಧಿಸಲಾಗಿದೆ.

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ರಿಷಿ ಧವನ್ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ನಡುವಿನ ವಿರಾಮದ ಅವಧಿಯಲ್ಲಿ ಮನೆಯಿಂದ ಹೊರಬಂದಿದ್ದರು. ರಿಷಿ ಧವನ್ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಸಂಚಿಅರಿಸುತ್ತಿದ್ದ ವೇಳೆ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕ್ರಿಕೆಟಿಗ ಸ್ಥಳದಲ್ಲೇ ದಂಡವನ್ನು ಪಾವತಿಸಿದ್ದಾರೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ರಿಷಿ ಧವನ್ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಟೀಂ ಇಂಡಿಯಾ ಪರ ರಿಷಿ ಧವನ್ 3 ಏಕದಿನ ಮತ್ತು ಒಂದು ಟಿ20 ಪಂದ್ಯಗಳನ್ನು ಆಡಿದ್ದಾರೆ.

ಲಾಕ್​ಡೌನ್ ಉಲ್ಲಂಘಿಸಿ ರಸ್ತೆಗೆ ಇಳಿದು ದಂಡ ಕಟ್ಟಿದ ಟೀಂ ಇಂಡಿಯಾ ಆಟಗಾರ

ಟೀಂ ಇಂಡಿಯಾದ ಅವಕಾಶ ವಂಚಿತ ಆಲ್‌ರೌಂಡರ್‌ ರಿಷಿ ಧವನ್‌ ಬೇಜವಾಬ್ದಾರಿತನ ಮೆರೆದಿರುವುದು ವಿಪರ್ಯಾಸ. ಪ್ರತಿಯೊಬ್ಬರು ಕೂಡ ಸರ್ಕಾರ ಜಾರಿಗೊಳಿಸಿದ ನಿಯಮ ಪಾಲಿಸಿದರೆ ಮಾತ್ರ ಕರೋನಾ ಎಂಬ ಮಹಾಮಾರಿಯಿಂದ ಮುಕ್ತಿ ಪಡೆಯಬಹುದು.

Most Read Articles

Kannada
English summary
Indian cricketer in Range Rover Evoque BUSTED for violating Corona Virus lockdown. Read in Kannada.
Story first published: Saturday, April 11, 2020, 15:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X