Toyota ಕಾರಿನ ಮೇಲೆ ಡಿಫೆರೆಂಟ್ ಪೋಸ್ ನೀಡಲು ಹೋಗಿ, ಟೀಂ ಇಂಡಿಯಾದ ಖ್ಯಾತ ಆಟಗಾರ ಟ್ರೋಲ್: ಬೇಕಿತ್ತಾ ಇದೆಲ್ಲ..!

ಐಪಿಎಲ್‌ನಲ್ಲಿ ಬಹುತೇಕ ಯುವ ಆಟಗಾರರೇ ಮಿಂಚುತ್ತಿದ್ದು, ಗುಜರಾತ್ ಟೈಟಾನ್ಸ್ ಪರವಾಗಿ ಆಡುವ ಶುಭಮನ್ ಗಿಲ್ ಹೆಸರು ಯಾವಾಗಲು ಮುಂಚೂಣಿಯಲ್ಲಿರುತ್ತದೆ. ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದೀಗ, ಕಾರಿನ ಮೇಲೆ ನಿಂತು ವಿಭಿನ್ನವಾಗಿ ಪೋಸ್ ನೀಡಲು ಹೋಗಿ ಟ್ರೋಲ್ ಆಗಿದ್ದಾರೆ.

ಸದಾ ಯುವ ಕ್ರಿಕೆಟಿಗ ಶುಭಮನ್ ಗಿಲ್ ಕುರಿತ ಒಂದಿಲ್ಲೊಂದು ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅದರಲ್ಲೂ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ನಡೆದುತ್ತಿದ್ದಾರೆ ಎಂಬುದು ಕಳೆದ ಹಲವು ತಿಂಗಳಿನಿಂದ ಚರ್ಚೆಯಲ್ಲಿದೆ. ಅಲ್ಲದೇ, ಗಿಲ್ ಹಾಗೂ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಫೋಟೋಗಳು ಕೂಡ ಸಖತ್ ವೈರಲ್ ಆಗಿದ್ದವು. ಈಚೆಗೆ ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳಿ, ಅಲ್ಲಿಯು ಸುದ್ದಿಯಾಗಿದ್ದಾರೆ.

ಕಾರಿನ ಮೇಲೆ ವಿಭಿನ್ನ ಪೋಸ್ ನೀಡಲು ಹೋಗಿ ಟ್ರೋಲ್ ಆದ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ: ಗರ್ಲ್ ಫ್ರೆಂಡ್ ಬಗ್ಗೆ ಪ್ರಶ್ನೆ?

ಸುಮ್ಮನೆ ಆ ಸಮಾರಂಭಕ್ಕೆ ಹೋಗಿ ಬಂದಿದ್ರೆ ಈ ಮಟ್ಟದಲ್ಲಿ ಹಲ್ ಚಲ್ ಸೃಷ್ಟಿಸುತ್ತಿರಲಿಲ್ಲ. ಆದರೆ, ಡಿಫೆರೆಂಟ್ ಆಗಿ ಪೋಸ್ ನೀಡಲು ಹೋಗಿ, ಸಖತ್ ಟ್ರೋಲ್ ಆಗಿದ್ದಾರೆ. 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್ ವರ್ಸ್' ಚಿತ್ರದ ಹಿಂದಿ ಟ್ರೈಲರ್ ಕಾರ್ಯಕ್ರಮಕ್ಕೆ ಬಿಳಿ ಬಣ್ಣದ ಪ್ಯಾಂಟ್, ಹಸಿರು ಶರ್ಟ್ ಧರಿಸಿ, ನೆರೆದಿದ್ದವರ ಕಣ್ಣು ಕುಕ್ಕುವಂತೆ ರೆಡಿಯಾಗಿ ಬಿಎಂಡಬ್ಲ್ಯು 5 ಸಿರೀಸ್ ಸೆಡಾನ್‌ನಲ್ಲಿ ಆಗಮಿಸಿದ್ದರು.

ನೋಡ ನೋಡುತ್ತಿದ್ದಂತೆ ಅಲ್ಲೇ ನಿಂತಿದ್ದ ಟೊಯೊಟಾ ಕ್ಯಾಮ್ರಿ ಕಾರಿನ ಮೇಲೆ ಹತ್ತಿ, ರೂಫ್ ಮೇಲೆ ನಿಂತು ಸೂಪರ್‌ಹೀರೋ 'ಸ್ಪೈಡರ್ ಮ್ಯಾನ್‌' ನಂತೆ ಪೋಸ್ ನೀಡುವುದನ್ನು ಶುರು ಮಾಡಿದ್ದರು. ಸುತ್ತಲೂ ನೆರೆದಿದ್ದ ಪಾಪರಾಜಿಗಳು ಹಲವು ಫೋಟೋಗಳನ್ನು ಕ್ಲಿಕಿಸಿದರು. ಬಳಿಕ, ಕಾರಿನ ಮೇಲಿಂದ ಇಳಿದು ಸೀದಾ ಕಾರ್ಯಕ್ರಮ ನಡೆಯುವ ಹಾಲ್ ಗೆ ತೆರಳಿದ್ದರು.

ಟ್ರೋಲ್ ಆಗಿದ್ದ ಶುಭಮನ್ ಗಿಲ್ ಅವರ ಈ ಫೋಟೋಗಳಿಗೆ ನೆಟ್ಟಿಗರು ಕೂಡ ಭಿನ್ನವಾಗಿಯೇ ಕಾಮೆಂಟ್ ಮಾಡಿದ್ದಾರೆ. 'ಸಾರಾ ಕೆ ಘರ್ ಭೀ ಸೆ ಹೈ ಜಾತೆ ಹೋ' (ಸಾರಾ ಮನೆ ಇಲ್ಲೇ ಇದೆ ಹೋಗುತ್ತೀರಾ) ಎಂದು ಒಬ್ಬರು ಕೇಳಿದ್ದಾರೆ. ಮತ್ತೊಬ್ಬರು, 'ಸ್ಪೈಡರ್‌ಮ್ಯಾನ್ ಮತ್ತೆ ಮನೆಗೆ ಹಿಂತಿರುಗುವುದಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಸಾರಾ ಕೆ ಸಾರಾ ಸ್ಪೈಡರ್ ಮೇ ಲಗ್ ರಹೇ ಹೋ ಭಾಯ್' (ಸಾರಾ ಬಲೆಯಲ್ಲಿ ಸಿಲುಕಿದ್ದೀರಿ ಅಲ್ಲವೇ) ಎಂದು ಪ್ರಶ್ನೆ ಮಾಡಿದ್ದಾರೆ.

ಏಪ್ರಿಲ್ 2021ರಲ್ಲಿ, ಶುಭಮನ್ ಗಿಲ್ ಕುಟುಂಬ ಬಹುಬೇಡಿಕೆಯ ಮಹೀಂದ್ರಾ ಥಾರ್ ಕಾರನ್ನು ಗಿಫ್ಟ್ ಪಡೆದುಕೊಂಡಿತ್ತು. ಮಹೀಂದ್ರಾ ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ, ಗಿಲ್ ಅದ್ಬುತ ಆಟಕ್ಕೆ ಈ ಉಡುಗೊರೆ ನೀಡಿದ್ದರು. ಕಾರನ್ನು ವಿತರಣೆ ಪಡೆಯುತ್ತಿರುವ ಚಿತ್ರವನ್ನು ಅವರ ಸಹೋದರಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಐಪಿಎಲ್ ಆಡುತ್ತಿದ್ದರಿಂದ ಗಿಲ್ ಅವರಿಗೆ ಸ್ವತಃ ಥಾರ್ ಅನ್ನು ಗಿಫ್ಟ್ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

ಇನ್ನು, ಶುಭಮನ್ ಗಿಲ್ ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್ ಕಾರಿನ ಮಾಲೀಕರಾಗಿದ್ದು, ಇದು ಸರಿ ಸುಮಾರು ರೂ.89 ಲಕ್ಷ ಬೆಲೆ ಹೊಂದಿದ್ದು, ಪವರ್ ಫುಲ್ 2.0 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 204 PS ಗರಿಷ್ಠ ಪವರ್ ಹಾಗೂ 430 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 217 km/h ಟಾಪ್ ಸ್ವೀಡ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.

Article Published On: Saturday, May 20, 2023, 11:14 [IST]
English summary
Cricketer shubman gill poses like spiderman toyota car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+