ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕೊಲೆ ಆರೋಪಿ ಸಂಬಂಧಿಕರು

ಪೊಲೀಸರ ಜೀವನವು ಅಪಾಯಗಳಿಂದ ಕೂಡಿರುತ್ತದೆ. ಕೆಲವೊಮ್ಮೆ ಪೊಲೀಸರು ಕರ್ತವ್ಯದ ವೇಳೆ ಅಪಾಯಕಾರಿ ಸಂದರ್ಭಗಳನ್ನು ಎದುರಿಸ ಬೇಕಾಗುತ್ತದೆ. ಈ ರೀತಿಯ ಸಂದರ್ಭಗಳನ್ನು ಎದುರಿಸಲು ಪೊಲೀಸರು ತರಬೇತಿ ಪಡೆದಿರುತ್ತಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಇತ್ತೀಚಿಗೆ ಪುಣೆ ಪೊಲೀಸ್ ಅಧಿಕಾರಿಗಳ ತಂಡವು ಸಂಕಷ್ಟಕ್ಕೆ ಸಿಲುಕಿತ್ತು. ಕೊಲೆ ಆರೋಪಿಯನ್ನು ಹುಡುಕಿಕೊಂಡು ಪುಣೆ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ಪುಣೆ ನಗರದ ಫರ್ಸಖಾನಾ ಪೊಲೀಸ್ ಠಾಣೆಯ ಐವರು ಪೊಲೀಸರು ಉತ್ತರ ಪ್ರದೇಶದ ಘಜಿಯಾಬಾದ್‌ಗೆ ತೆರಳಿದ್ದರು.

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಹೆಡ್ ಕಾನ್‌ಸ್ಟೆಬಲ್ ಕೊಲೆಗೆ ಸಂಬಂಧಿಸಿದಂತೆ ಅವರು ಮಹಿಳೆಯೊಬ್ಬಳನ್ನು ಹುಡುಕುತ್ತಿದ್ದರು. ಮಹಿಳೆಯನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಆರೋಪಿಯ ಕಡೆಯವರು ಹಲ್ಲೆ ನಡೆಸಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಇದರ ಜೊತೆಗೆ ಪುಣೆ ಪೊಲೀಸರ ಟೊಯೊಟಾ ಇನೋವಾ ಕ್ರಿಸ್ಟಾ ಕಾರ್ ಅನ್ನು ಜಖಂಗೊಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪುಣೆಯ ವಲಯ 1ರ ಡಿಸಿಪಿ ಪ್ರಿಯಾಂಕಾ ನಾರ್ನಾವರೆ, ನಮ್ಮ ಪೊಲೀಸರು ಗಾಜಿಯಾಬಾದ್ ಪೊಲೀಸರ ಜೊತೆ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಆರೋಪಿಗಳನ್ನು ಬಂಧಿಸಿರುವ ನಮ್ಮ ತಂಡವು ಪುಣೆಗೆ ವಾಪಸಾಗಿದೆ ಎಂದು ಹೇಳಿದರು. ಹೆಡ್ ಕಾನ್‌ಸ್ಟೆಬಲ್ ಕೊಲೆಯಲ್ಲಿ ಆರೋಪಿಯಾಗಿರುವ ಮಹಿಳೆ ಘಟನೆಯ ಬಳಿಕ ಗಾಜಿಯಾಬಾದ್‌ಗೆ ಪರಾರಿಯಾಗಿದ್ದಳು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಮೇ 5ರ ಮಧ್ಯರಾತ್ರಿ ಫರ್ಖಾನಾ ಪೊಲೀಸ್ ಠಾಣೆಯ ಮುಖ್ಯ ಪೇದೆ 48 ವರ್ಷದ ಸಮೀರ್ ಸೈಯದ್ ಎಂಬುವವರನ್ನು ಬುಧ್ವಾರ್ ಪೆತ್‌ನಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಯನ್ನು ಕಾಸಿನ್ ಪೆತ್‌ನ ಪ್ರವೀಣ್ ಮಹಾಜನ್ ಎಂದು ಗುರುತಿಸಲಾಗಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಘಟನೆಯ ಬಳಿಕ ಪ್ರವೀಣ್ ಮಹಾಜನ್'ನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಈ ಪ್ರಕರಣದಲ್ಲಿ ಮಹಿಳೆಯೊಬ್ಬಳು ಭಾಗಿಯಾಗಿರುವುದು ತಿಳಿದು ಬಂದಿದೆ. ಆಕೆಯನ್ನು ಕಲ್ಪನಾ ಪ್ರವೀಣ್ ಮಹಾಜನ್ ಎಂದು ಗುರುತಿಸಲಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಈ ಘಟನೆಯ ಬಳಿಕ ಕಲ್ಪನಾ ಗಾಜಿಯಾಬಾದ್‌ಗೆ ಪರಾರಿಯಾಗಿದ್ದ ಕಾರಣ ಪುಣೆ ಪೊಲೀಸರ ತಂಡವೊಂದನ್ನು ಗಾಜಿಯಾಬಾದ್‌ಗೆ ಕಳುಹಿಸಲಾಯಿತು. ಹೀಗೆಗಾಜಿಯಾಬಾದ್‌ಗೆ ತೆರಳಿದ್ದ ತಂಡದ ಮೇಲೆ ದಾಳಿ ನಡೆಸಲಾಗಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ವರದಿಗಳ ಪ್ರಕಾರ ನಂದಾಗ್ರಾಮ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ದೀನ್ ದಯಾಳ್ ಪುರಿ ಎಂಬ ಸ್ಥಳದಲ್ಲಿ ಪೊಲೀಸರಿದ್ದ ತಂಡದ ಮೇಲೆ ಹಲ್ಲೆ ಮಾಡಲಾಗಿದೆ. ಕಲ್ಪನಾಳನ್ನು ಬಂಧಿಸಲು ಪೊಲೀಸರು ಸ್ಥಳಕ್ಕೆ ತಲುಪಿದರೂ ಯಾವುದೇ ಪ್ರಯೋಜನವಾಗಲಿಲ್ಲ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಕಲ್ಪನಾಳೊಂದಿಗೆ ಸಂಪರ್ಕದಲ್ಲಿದ್ದ ಅಂಕಿತ್ ಎಂಬ ವ್ಯಕ್ತಿಯನ್ನು ಪೊಲೀಸರ ತಂಡವು ಪತ್ತೆ ಹಚ್ಚಿ ಆತನ ವಿಚಾರಣೆ ಆರಂಭಿಸಿದೆ. ಈ ವೇಳೆ ಅಂಕಿತ್‌ನ ಸಂಬಂಧಿಕರು ಹಾಗೂ ನೆರೆಹೊರೆಯವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.

ಪುಣೆ ಪೊಲೀಸರ ತಂಡದ ನೇತೃತ್ವ ವಹಿಸಿದ್ದ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಪಾಟೀಲ್ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಆದರೆ ಜನರು ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಪೊಲೀಸರ ಮೇಲೆ ಹಲ್ಲೆ ನಡೆಸಿ ವಾಹನ ಜಖಂಗೊಳಿಸಿದ ಕ್ರಿಮಿನಲ್'ಗಳು

ಪೊಲೀಸರ ಮೇಲೆ ದಾಳಿ ನಡೆಸಿದವರು ಪೊಲೀಸರ ಬಳಿಯಿದ್ದ ಮೊಬೈಲ್ ಫೋನ್, ಐಡೆಂಟಿಟಿ ಕಾರ್ಡ್'ಗಳನ್ನು ಕಸಿದು ಕೊಂಡಿದ್ದಾರೆ. ಜೊತೆಗೆ ಪೊಲೀಸರ ಬಳಿಯಿದ್ದ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ.

Most Read Articles

Kannada
English summary
Criminals assaults and broke Pune police Toyota Innova car. Read in Kannada.
Story first published: Friday, May 14, 2021, 18:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X