ವಯಸ್ಸಿಗೆ ಬಂದ ಮಗನಿಗೆ 2 ಕೋಟಿ ಮೌಲ್ಯದ ಐಷಾರಾಮಿ ಕಾರ್ ಗಿಫ್ಟ್ ನೀಡಿದ ಅಪ್ಪ: ಏನಿದರ ವಿಶೇಷತೆ?

ಉಡುಗೊರೆಗಳು ಯಾವಾಗಲೂ ವಿಶೇಷವಾಗಿರುತ್ತವೆ, ಮತ್ತು ಉಡುಗೊರೆ ಪಡೆಯಲು ಎಲ್ಲರು ಇಷ್ಟಪಡುತ್ತಾರೆ. ಪೋಷಕರು ತಮ್ಮ ಮಕ್ಕಳಿಗೆ ದುಬಾರಿ ಕಾರು ಮತ್ತು ಬೈಕ್‌ಗಳನ್ನು ಉಡುಗೊರೆಯಾಗಿ ನೀಡುವ ಚಿತ್ರಗಳು ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇತ್ತೀಚೆಗೆ 19 ವರ್ಷದ ಯುವಕನ ತಂದೆ ಹೊಚ್ಚಹೊಸ ಆಡಿ (Audi) ಕಾರನ್ನು ಉಡುಗೊರೆ ನೀಡುವ ವೀಡಿಯೋ ವೈರಲ್ ಆಗಿದೆ. ತಂದೆ ಉಡುಗೊರೆ ನೀಡಿದ ಕಾರ್ 2 ಕೋಟಿ ಮೌಲ್ಯದ ಆಡಿ ಆರ್ಎಸ್ ಇ-ಟ್ರಾನ್ ಜಿಟಿ ಕಾರ್ ಆಗಿದೆ.

ತಂದೆ ಗಿಫ್ಟ್ ನಿಡಿದ ಐಷಾರಾಮಿ ಕಾರ್ ವಿತರಣೆ ಪಡೆದುಕೊಳ್ಳುವ ವೀಡಿಯೋವನ್ನು ಸ್ವರಂಜಿತ್ ಸಿಂಗ್ ಬಜಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ 19 ವರ್ಷದ ಯುವಕ ಮನೆಯಲ್ಲಿ ಕುಟುಂಬ ಸಮೇತ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಈ ಸುದೀರ್ಘ ವೀಡಿಯೊದಲ್ಲಿ, ಅವರು ಕೇಕ್ ಕತ್ತರಿಸಿ ಈ ಸಂದರ್ಭವನ್ನು ಆಚರಿಸಿದ್ದಾರೆ.

Audi

ಹುಟ್ಟುಹಬ್ಬದ ಸಂಭ್ರಮದ ಬಳಿಕ ತಮ್ಮ ಹೊಸ ಆಡಿ ಆರ್‌ಎಸ್ ಇ-ಟ್ರಾನ್ ಜಿಟಿ (Audi RS eTRON) ಕಾರಿನ ವಿತರಣೆ ಪಡೆದುಕೊಂಡಿದ್ದಾರೆ. ಈ ಕಾರಿನ ಬಗ್ಗೆ ಹೇಳುವುದಾದರೆ, ಇದು ಯೆಲ್ಲೋ ಬಣ್ಣವನ್ನು ಹೊಂದಿದೆ. ಈ ಆಡಿ ಆರ್ಎಸ್ ಇ-ಟ್ರಾನ್ ಜಿಟಿ ಕಾರ್ ಭಾರತೀಯ ಮಾರುಕಟ್ಟೆಯಲ್ಲಿ 2021 ರಲ್ಲಿ ಬಿಡುಗಡೆಗೊಂಡಿತು. ಈ ಆಡಿ ಆರ್‌ಎಸ್ ಇ-ಟ್ರಾನ್ ಜಿಟಿ ಮಾದರಿಯು ಬಾಹ್ಯ ವಿನ್ಯಾಸವು ದೊಡ್ಡ ಬ್ಲಾಕ್ ಫಾಕ್ಸ್ ಗ್ರಿಲ್ ವಿನ್ಯಾಸವನ್ನು ಹೊಂದಿದೆ.

ಇದರೊಂದಿಗೆ ನಯವಾದ ಹೆಡ್‌ಲ್ಯಾಂಪ್‌ಗಳು, LED ಟೈಲ್ ಲ್ಯಾಂಪ್‌ಗಳು ಮತ್ತು ಸ್ಲೋಪಿಂಗ್ ರೂಫ್ ಡಿಸೈನ್ ಅನ್ನು ಹೊಂದಿದೆ. ಆಡಿ ಆರ್‌ಎಸ್ ಇ-ಟ್ರಾನ್ ಜಿಟಿ ನಾಲ್ಕು-ಡೋರಿನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕೂಪ್ ಆಗಿದೆ. ಈ ಎಲೆಕ್ಟ್ರಿಕ್ ಕಾರ್ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 12.3-ಇಂಚಿನ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Audi

ಸಂಪರ್ಕಿತ ಕಾರ್ ಟೆಕ್, ಶಿಫ್ಟ್-ಬೈ-ವೈರ್ ಗೇರ್ ಸೆಲೆಕ್ಟರ್, B&O ಪ್ರೀಮಿಯಂ ಸ್ಪೀಕರ್ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್, 3-ವಲಯ ಹವಾಮಾನದಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಇದರೊಂದಿಗೆ ಅಡಾಪ್ಟಿವ್ ಏರ್ ಸಸ್ಪೆಕ್ಷನ್, ಆಕ್ಟಿವ್ ರೇರ್ ಸ್ಪಾಯ್ಲರ್, ಕಾರ್ಬನ್-ಸೆರಾಮಿಕ್ ಬ್ರೇಕ್‌ಗಳು, ಮ್ಯಾಟ್ರಿಕ್ಸ್ LED ಹೆಡ್‌ಲೈಟ್‌ಗಳು, 20-ಇಂಚಿನ ಅಲಾಯ್ ವ್ಹೀಲ್ ಮತ್ತು ಹೆಚ್ಚಿನವುಗಳನ್ನು ಹೊಂದಿವೆ.

ಈ ಐಷಾರಾಮಿ ಆಡಿ ಆರ್‌ಎಸ್ ಇ-ಟ್ರಾನ್ ಜಿಟಿ ಕಾರಿನಲ್ಲಿ 93 kWh ಬ್ಯಾಟರಿ ಪ್ಯಾಕ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಬ್ಯಾಟರಿ ಪ್ಯಾಕ್ 636 Bhp ಮತ್ತು 830 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ಗೆ ಪವರ್ ಅನ್ನು ಕಳುಹಿಸುತ್ತದೆ. ಈ ಎಲೆಕ್ಟ್ರಿಕ್ ವಾಹನವು ಡ್ಯುಯಲ್-ಮೋಟಾರ್ ಸೆಟಪ್ ಅನ್ನು ಪಡೆಯುತ್ತದೆ, ಅಂದರೆ ಶಕ್ತಿಯನ್ನು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಕಳುಹಿಸಲಾಗುತ್ತದೆ.

ಇನ್ನು ಆಡಿ ಕಂಪನಿಯು ರನ್ನ ಕ್ಯೂ8 ಇ-ಟ್ರಾನ್ ಎಸ್‍ಯುವಿಯು 50 ಮತ್ತು 55 ಎಂಬ ಎರಡೂ ಟ್ರಿಮ್ ಹಂತಗಳಲ್ಲಿ ನೀಡಲಾಗುತ್ತದೆ. ಈ ಆಡಿ ಕ್ಯೂ8 ಇ-ಟ್ರಾನ್ ಕಾರಿನಲ್ಲಿ 95kWh ಅಥವಾ 114kWh ಬ್ಯಾಟರಿ ಪ್ಯಾಕ್‌ನೊಂದಿಗೆ ನೀಡಲಾಗುತ್ತದೆ ಮತ್ತು ಎರಡನೆಯದು WLTP ಸೈಕಲ್ ಪ್ರಕಾರ ಫುಲ್ ಚಾರ್ಜ್‌ ಮಾಡಿದರೆ ಬರೊಬ್ಬರಿ 600 ಕಿ.ಮೀ ರೇಂಜ್ ಅನ್ನು ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, January 17, 2025, 17:24 [IST]
English summary
Dad gifts his 19 year old son audi rs etron details
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+