Just In
- 44 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- Movies
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
- News
BBC ಸಾಕ್ಷ್ಯಚಿತ್ರಕ್ಕೆ ನಿರ್ಬಂಧ: ಕೇಂದ್ರಕ್ಕೆ ಸುಪ್ರೀಂ ನೋಟೀಸ್
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಅರ್ಧಕೋಟಿಗೂ ಅಧಿಕ ಬೆಲೆಯಲ್ಲಿ ಈ ಹಳೇ ಐಫೋನ್ ಮಾರಾಟ!..ಅದ್ಹೇಗೆ ಸಾಧ್ಯ ಅಂತೀರಾ!?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ಕಾರು ಖರೀದಿಸಿ ಮಗಳ ಖುಷಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ತಂದೆ: ಆನಂದ್ ಮಹೀಂದ್ರಾ ಪ್ರತಿಕ್ರಿಯೆ
ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಕಂಪನಿಗೆ ಸಂಬಂದಿಸಿದ ವಿಚಾರಗಳು ಹಾಗೂ ವಿಶೇಷ ಪ್ರತಿಭೆಯುಳ್ಳವರ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರಶಂಸಿಸುತ್ತಾರೆ.

ಇತ್ತೀಚಿಗೆ ಟ್ವಿಟರ್‌ನಲ್ಲಿ ಅವರು ಮಾಡಿರುವ ಹೃದಯ ಸ್ಪರ್ಶಿ ಪೋಸ್ಟ್ ತುಂಬಾ ವೈರಲ್ ಆಗುತ್ತಿದೆ. ವಾಸ್ತವವಾಗಿ ಗ್ರಾಹಕರೊಬ್ಬರು ಮಹೀಂದ್ರಾ XUV700 ಅನ್ನು ಮನೆಗೆ ತಂದ ಸಂತೋಷವನ್ನು ಆನಂದ್ ಮಹೀಂದ್ರಾ ಅವರೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್ ಮಹೀಂದ್ರಾ ಅವರ ಟ್ವೀಟ್ ವೈರಲ್ ಆಗುತ್ತಿದೆ.

ಟ್ವಿಟರ್ ಬಳಕೆದಾರ ತೋಟ ಶ್ರೀಕಾಂತ್ ಇತ್ತೀಚೆಗೆ ಮಹೀಂದ್ರಾ XUV700 ಅನ್ನು ಖರೀದಿಸಿದರು, ಈ ಬಗ್ಗೆ ಕುಟುಂಬವು ತುಂಬಾ ಸಂತೋಷವಾಗಿದೆ. ಕುಟುಂಬ ಸದಸ್ಯರ ಸಂತಸವನ್ನು ವ್ಯಕ್ತಪಡಿಸಲು ಶ್ರೀಕಾಂತ್ ಕೆಲವು ಚಿತ್ರಗಳನ್ನು ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಆನಂದ್ ಮಹೀಂದ್ರಾ ಅವರನ್ನು ಕೂಡ ಟ್ಯಾಗ್ ಮಾಡಿದ್ದಾರೆ.

"ಇಂದು ಮಹೀಂದ್ರಾ XUV700 AX7L ಅನ್ನು ಮನೆಗೆ ತರಲಾಗಿದೆ, ನನ್ನ ಮಗಳ ಮುಖದಲ್ಲಿ ಸಂತೋಷವನ್ನು ನೋಡಬಹುದು" ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ. ಚಿತ್ರಗಳಲ್ಲಿ ಶ್ರೀಕಾಂತ್ ಕಾರಿನೊಂದಿಗೆ ನಿಂತಿದ್ದರೇ ಮತ್ತೊಂದೆಡೆ ಅವರ ಮಗಳು ಕಾರಿನ ಬಾಗಿಲು ತೆರೆಯುತ್ತಿರುವುದನ್ನು ಕಾಣಬಹುದು. ಹೊಸ ಮಹೀಂದ್ರಾ ಎಸ್‌ಯುವಿ ನೋಡಿ ಆ ಮುಗ್ಧ ಹುಡುಗಿಯ ಮುಖದಲ್ಲಿ ಸಂತೋಷಕ್ಕೆ ಮಿತಿಯೇ ಇರಲಿಲ್ಲ.

ಆನಂದ್ ಮಹೀಂದ್ರ ಪ್ರತಿಕ್ರಿಯೆ
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ತೋಟ ಶ್ರೀಕಾಂತ್ ಮತ್ತು ಅವರ XUV700 ನ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹೃದಯವನ್ನು ಬೆಚ್ಚಗಾಗಿಸುವ ಪ್ರತಿಕ್ರಿಯೆಯನ್ನು ಸಹ ಮಾಡಿದ್ದಾರೆ. ಟ್ವೀಟ್ ಅನ್ನು ಹಂಚಿಕೊಂಡ ಆನಂದ್ ಮಹೀಂದ್ರಾ, ದಯವಿಟ್ಟು ನಿಮ್ಮ ಮಗಳಿಗೆ ಹೇಳಿ, ಅವಳು ಈ ನನ್ನ ದಿನವನ್ನು ನನ್ನದಾಗಿಸಿದ್ದಾಳೆ ಎಂದು ಬರೆದಿದ್ದಾರೆ. ಇದರೊಂದಿಗೆ ಆನಂದ್ ಮಹೀಂದ್ರಾ ಸ್ಮೈಲಿ ಇಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ.

ಇನ್ನು ಮಹೀಂದ್ರಾ XUV 700 ಕುರಿತು ಮಾತನಾಡುವುದಾದರೆ ಈ ಕಾರು ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಹೆಚ್ಚು ಜನಪ್ರಿಯವಾಗುತ್ತಿದೆ. ಈ 7 ಆಸನಗಳ ಎಸ್‌ಯುವಿಗಾಗಿ ಕಂಪನಿಯು ಭಾರಿ ಬುಕಿಂಗ್‌ಗಳನ್ನು ಪಡೆಯುತ್ತಿದೆ. XUV700 ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಹಲವಾರು ರೂಪಾಂತರಗಳು ಮತ್ತು ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ತರಲಾಗಿದೆ.

ಈ SUV ಅನ್ನು ಹಲವು ಹೊಸ ವಿಭಾಗದ ಮೊದಲ ವೈಶಿಷ್ಟ್ಯಗಳು ಮತ್ತು ಆಕರ್ಷಕ ಶೈಲಿಯೊಂದಿಗೆ ಪರಿಚಯಿಸಲಾಗಿದೆ. ಇದು ಭಾರತದಲ್ಲಿ 12.95 ಲಕ್ಷ ರೂಪಾಯಿಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಮಹೀಂದ್ರಾ XUV700 ಆಧುನಿಕ ವೈಶಿಷ್ಟ್ಯಗಳೊಂದಿಗೆ ಹೊಸ ವಿನ್ಯಾಸವನ್ನು ಹೊಂದಿದೆ.

XUV700 ತನ್ನ ವಿಭಾಗದಲ್ಲಿ ಮರ್ಸಿಡಿಸ್-ಬೆನ್ಜ್ ಪ್ರೇರಿತ ಡ್ಯುಯಲ್-ಡಿಸ್ಪ್ಲೇ ಸೆಟಪ್ ಅನ್ನು ಒಳಗೊಂಡಿರುವ ಮೊದಲ SUV ಆಗಿದೆ. ಈ ಡಿಸ್ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕೀಲೆಸ್ ಎಂಟ್ರಿ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಮುಂತಾದ ವೈಶಿಷ್ಟ್ಯಗಳನ್ನು ಈ ಎಸ್‌ಯುವಿಯಲ್ಲಿ ನೀಡಲಾಗಿದೆ.

ಎಂಜಿನ್ ಮತ್ತು ಪವರ್ ಬಗ್ಗೆ ಮಾತನಾಡುವುದಾದರೆ, XUV700 ಗೆ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ನೀಡಲಾಗಿದೆ. ಇದು 2.2-ಲೀಟರ್ ಡೀಸೆಲ್ ಘಟಕದಿಂದ ಚಾಲಿತವಾಗಿದ್ದು, ಇದು 153 bhp ಪವರ್ ಮತ್ತು 360 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮತ್ತೊಂದೆಡೆ 2.0-ಲೀಟರ್ M ಸ್ಟಾಲಿಯನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 188 bhp ಪವರ್ ಮತ್ತು 380 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರ್ ಅನ್ನು ಆಲ್ ವೀಲ್ ಡ್ರೈವ್ ಅಥವಾ 4-ವೀಲ್ ಡ್ರೈವ್ ಸಿಸ್ಟಮ್ ಅನ್ನು ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳಲ್ಲಿ ನೀಡಲಾಗುತ್ತದೆ.

ಮಹೀಂದ್ರಾ XUV700 ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ. ಈ ರೇಟಿಂಗ್‌ನೊಂದಿಗೆ, ಮಹೀಂದ್ರಾದ ಹೊಸ ಎಸ್‌ಯುವಿ ಈಗ ದೇಶದ ಕೆಲವು ಸುರಕ್ಷಿತ ಕಾರುಗಳ ಪಟ್ಟಿಗೆ ಸೇರಿಕೊಂಡಿದೆ.