ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಪ್ರಮುಖ ಕಮರ್ಷಿಯಲ್ ವಾಹನ ತಯಾರಕ ಕಂಪನಿಯಾದ ಡೈಮ್ಲರ್ ಇಂಡಿಯಾ ತನ್ನ ಟ್ರಕ್ ಚಾಲಕರನ್ನು ಕರೋನಾ ವೈರಸ್'ನಿಂದ ರಕ್ಷಿಸಲು ಕೋವಿಡ್ 19 ಲಸಿಕೆಗಳನ್ನು ನೀಡುತ್ತಿದೆ.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಚೆನ್ನೈ ಬಳಿಯ ಒರಗಡಂ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಕಂಪನಿಯ ಟ್ರಕ್ ಚಾಲಕರಿಗೆ ಲಸಿಕೆ ನೀಡಲಾಗಿದೆ. ನಿನ್ನೆ ಮೊದಲ ದಿನ 60 ಕ್ಕೂ ಹೆಚ್ಚು ಟ್ರಕ್ ಚಾಲಕರಿಗೆ ಉಚಿತ ಲಸಿಕೆ ನೀಡಲಾಯಿತು. ಡೈಮ್ಲರ್ ಕಂಪನಿಯು ಈ ಹಿಂದೆಯೇ ತನ್ನ ಉತ್ಪಾದನಾ ಘಟಕದಲ್ಲಿರುವ ನೌಕರರಿಗೆ ಲಸಿಕೆ ಹಾಕುವ ಕಾರ್ಯವನ್ನು ಆರಂಭಿಸಿತ್ತು.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಈ ಅಭಿಯಾನದ ಅಡಿಯಲ್ಲಿ ಕಂಪನಿಯ 3,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಲಸಿಕೆ ನೀಡಲಾಗಿದೆ. ಈಗ ಡೈಮ್ಲರ್ ಕಂಪನಿಯು ಇನ್ನೂ 3,000 ಉದ್ಯೋಗಿಗಳಿಗೆ ಲಸಿಕೆ ನೀಡಲು ಮುಂದಾಗಿದೆ.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಗುತ್ತಿಗೆ ನೌಕರರು ಹಾಗೂ ಇನ್ನಿತರ ನೌಕರರು ಈ ಲಸಿಕೆ ಅಭಿಯಾನದಿಂದ ಪ್ರಯೋಜನ ಪಡೆಯಲಿದ್ದಾರೆ. ಇದರ ನಡುವೆಯೇ ಕಂಪನಿಯು ನಿನ್ನೆ ತನ್ನ ಟ್ರಕ್ ಚಾಲಕರಿಗೆ ಲಸಿಕೆ ಶಿಬಿರವನ್ನು ಆರಂಭಿಸಿದೆ.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಈ ವರ್ಷದ ಮೇ ತಿಂಗಳಿನಲ್ಲಿ ಡೈಮ್ಲರ್ ಇಂಡಿಯಾ ತನ್ನ ಉತ್ಪಾದನಾ ಘಟಕದಲ್ಲಿ ಲಸಿಕೆ ಕೇಂದ್ರವನ್ನು ಆರಂಭಿಸಿತ್ತು. ಅಂದಿನಿಂದ ಐದು ವ್ಯಾಕ್ಸಿನೇಷನ್ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಂಪನಿ ಹೇಳಿದೆ.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ದಿನಕ್ಕೆ 250 ಉದ್ಯೋಗಿಗಳಿಗೆ ಲಸಿಕೆ ನೀಡುವುದಾಗಿ ಕಂಪನಿ ತಿಳಿಸಿದೆ. ಡೈಮ್ಲರ್ ಕಂಪನಿಯು ತನ್ನ ಎಲ್ಲಾ ಉದ್ಯೋಗಿಗಳು ಮೊದಲ ಹಂತದ ಲಸಿಕೆ ಪಡೆದಿರುವುದನ್ನು ಖಚಿತ ಪಡಿಸುವ ಸಲುವಾಗಿ ಈ ಕಾರ್ಯವನ್ನು ಆರಂಭಿಸಿದೆ.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಮೊದಲ ಲಸಿಕೆ ಪಡೆದ ಪ್ರತಿಯೊಬ್ಬರಿಗೂ ಎರಡನೇ ಹಂತದ ಲಸಿಕೆ ನೀಡುವ ಕಾರ್ಯವನ್ನು ಈಗ ಆರಂಭಿಸಲಾಗಿದೆ. ಡೈಮ್ಲರ್ ಕಂಪನಿಯ ಪ್ರಕಾರ ಈ ಕಾರ್ಯವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಕರೋನಾ ವೈರಸ್ ಎರಡನೇ ಅಲೆಯಿಂದಾಗಿ ಭಾರತದಲ್ಲಿ ಹಲವಾರು ಜನರು ಪ್ರಾಣ ಕಳೆದು ಕೊಂಡರು. ಶೀಘ್ರದಲ್ಲೇ ಕರೋನಾ ವೈರಸ್ ಮೂರನೇ ಅಲೆ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಸಿಕೆಗಳು ಮಾತ್ರ ಮೂರನೇ ಅಲೆಯಿಂದ ಜನರನ್ನು ರಕ್ಷಿಸುತ್ತವೆ ಎಂಬ ಭರವಸೆಯಿದೆ.

ಟ್ರಕ್ ಚಾಲಕರಿಗಾಗಿ ಲಸಿಕಾ ಅಭಿಯಾನ ಆರಂಭಿಸಿದ ಡೈಮ್ಲರ್

ಕರೋನಾ ಸಂಕಷ್ಟದ ಸಮಯದಲ್ಲಿ ಡೈಮ್ಲರ್ ಕಂಪನಿಯು ಸರ್ಕಾರಕ್ಕೆ ವಿವಿಧ ರೀತಿಯಲ್ಲಿ ನೆರವಾಗುತ್ತಿದೆ. ಕಂಪನಿಯು ವೈದ್ಯಕೀಯ ವಿಮೆ, ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ಮಕ್ಕಳ ಬೋಧನಾ ವೆಚ್ಚ ಭರಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತಿದೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Daimler India starts vaccination drive for truck drivers at its production plant. Read in Kannada.
Story first published: Wednesday, July 28, 2021, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X