ಡಕಾರ್ ರಾಲಿ ಭಯಾನಕತೆ; ನೈಜ ವೀಡಿಯೋ ದರ್ಶನ
ಡಕಾರ್ ರಾಲಿ ಬಗ್ಗೆ ಬರೆಯುವಾಗ ಪ್ರತಿ ಬಾರಿಯೂ ನಾವು ವಿಶ್ವದ ಅತ್ಯಂತ ಅಪಾಯಕಾರಿ ರಾಲಿ ಎಂದೆಲ್ಲ ಉಲ್ಲೇಖಿಸುತ್ತಲೇ ಬಂದಿದ್ದೇವೆ. ಹಾಗೊಂದು ವೇಳೆ ನೀವು ಇದುವರೆಗೆ ಡಕಾರ್ ರಾಲಿಯನ್ನು ಟಿ.ವಿಯಲ್ಲೂ ವೀಕ್ಷಿಸಿದಿದ್ದರೆ ನಿಮಗಿದರ ಭಯಾನಕತೆಯ ಬಗ್ಗೆ ತಿಳಿದಿರಲಾರದು.
ಇಂದಿನ ಈ ಲೇಖನದಲ್ಲಿ ಡಕಾರ್ ರಾಲಿ ಎಷ್ಟು ಅಪಾಯಕಾರಿ ಎಂಬುದಕ್ಕೆ ಸಂಬಂಧಪಟ್ಟಂತೆ ನೈಜ ವೀಡಿಯೋವನ್ನು ನಿಮ್ಮ ಮುಂದಿಡಲಿದ್ದೇವೆ. ಇದನ್ನು ನೋಡಿದ ಮೇಲೆ ಖಂಡಿತವಾಗಿಯೂ ಭಾರತದ ಮೊಟ್ಟ ಮೊದಲ ರೇಸರ್ ಸಿಎಸ್ ಸಂತೋಷ್ ಮೇಲಿನ ನಿಮ್ಮ ಅಭಿಮಾನ ಇಮ್ಮಡಿಯಾಗಲಿದೆ.

2015 ಡಕಾರ್ ರಾಲಿಯಲ್ಲಿ ಭಾಗವಹಿಸಿದ್ದ ಚೊಚ್ಚಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಂತೋಷ್ 36ನೇಯವರಾಗಿ ಗುರಿ ಮುಟ್ಟಿದ್ದರು. 13 ದಿನಗಳ ಪರ್ಯಂತ ಸಾಗಿದ ಈ ರೇಸ್‌ನಲ್ಲಿ ಸಂತೋಷ್ ನಿಜಕ್ಕೂ ಅದ್ಭುತ ನಿರ್ವಹಣೆ ಮೆರೆದಿದ್ದರು.
ಮೋಟಾರುಸೈಕಲ್ ಜೊತೆಗೆ ಕಾರು, ಟ್ರಕ್ ಹಾಗೂ ಕ್ವಾಡ್ ರೇಸ್ ಕೂಡಾ ಆಯೋಜನೆಯಾಗಿತ್ತು. ಇಲ್ಲಿ 2015 ಡಕಾರ್ ರಾಲಿಯಲ್ಲಿ ದಾಖಲಾಗಿರುವ ಭೀಕರ ಕ್ವಾಡ್ ಅಪಘಾತವನ್ನು ನಿಮ್ಮ ಮುಂದಿಡಲಿದ್ದೇವೆ.


Click it and Unblock the Notifications