ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಐಷಾರಾಮಿ ಹಡಗುಗಳನ್ನು ಫೋಟೊಗಳಲ್ಲೋ, ಸಿನಿಮಾಗಳಲ್ಲೋ ನೋಡುವ ಜನರಿಗೆ ತಾವೂ ಸಹ ಅದರಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬ ಕನಸಿರುತ್ತದೆ. ಆದರೆ ಬಹುತೇಕ ಜನರ ಕನಸು ಎಂದಿಗೂ ನನಸಾಗುವುದೇ ಇಲ್ಲ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಈ ಐಷಾರಾಮಿ ಹಡಗುಗಳಲ್ಲಿ ಬಾರ್, ಸ್ಪಾ, ಸ್ವಿಮಿಂಗ್ ಪೂಲ್, ರೆಸ್ಟೋರೆಂಟ್ ಸೇರಿದಂತೆ ಹಲವಾರು ಸೌಕರ್ಯಗಳಿರುತ್ತವೆ. ನೀವೂ ಸಹ ಐಷಾರಾಮಿ ಹಡಗಿನಲ್ಲಿ ಪ್ರಯಾಣ ಬೆಳೆಸುವ ಕನಸು ಹೊಂದಿರುವವರಲ್ಲಿ ಒಬ್ಬರಾದರೆ ಈ ಸುದ್ದಿಯನ್ನೊಮ್ಮೆ ಓದಿ. ಐಷಾರಾಮಿ ಹಡಗುಗಳಲ್ಲಿರುವ ಐಷಾರಾಮಿ ಸೌಲಭ್ಯವನ್ನು ನೋಡಿರುವ ಜನರಿಗೆ ಅದರ ಕರಾಳ ಮುಖದ ಬಗ್ಗೆ ಅರಿವಿರುವುದಿಲ್ಲ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಯಾವುದೇ ಒಂದು ಕ್ರೂಸ್ ಹಡಗು ಪ್ರತಿ ವರ್ಷ 2 ಕೋಟಿಗೂ ಅಧಿಕ ಪ್ರಯಾಣಿಕರನ್ನು ಹೊತ್ತೊಯುತ್ತದೆ. ಇದು ಕೇವಲ ಸಂಖ್ಯೆಯಷ್ಟೇ. ಇದು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಹೀಗೆ ಸಾಗುವ ಪ್ರಯಾಣಿಕರಲ್ಲಿ ಕನಿಷ್ಟ 20 ಪ್ರಯಾಣಿಕರು ಕಣ್ಮರೆಯಾಗುತ್ತಿದ್ದಾರೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

2000ನೇ ಇಸವಿಯಿಂದೀಚಿಗೆ ಹಡಗುಗಳಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 350 ಜನರು ಕಣ್ಮರೆಯಾಗಿದ್ದಾರೆಂದು ವರದಿಗಳಾಗಿವೆ. ಇನ್ನು ಕೆಲವು ವರದಿಗಳ ಪ್ರಕಾರ 400ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಕ್ರೂಸ್ ಹಡಗಿನಲ್ಲಿ ಮಹಿಳೆಯೊಬ್ಬರು ತಮ್ಮ ಸಂಬಂಧಿಕರ ಜೊತೆಗೆ ಪ್ರಯಾಣಿಸುತ್ತಿದ್ದರು.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಆದರೆ ಮೊದಲೇ ಯೋಜಿಸಿದಂತೆ ಆಕೆ ಹಡಗಿಗೆ ವಾಪಸ್ ಆಗಬೇಕಿತ್ತು. ಆದರೆ ಆಕೆ ವಾಪಸಾಗಲಿಲ್ಲ. ಆಕೆಯ ಸಂಬಂಧಿಕರು ಆಕೆ ಈ ದೊಡ್ಡ ಹಡಗಿನ ಯಾವುದಾದರೂ ಮೂಲೆಯಲ್ಲಿ ಪ್ರಯಾಣಿಸುತ್ತಿರ ಬಹುದೆಂದು ತಿಳಿದಿದ್ದರು.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಪ್ರಯಾಣದ ಮುಗಿದ ನಂತರ ಆಕೆ ಆ ಹಡಗಿನಿಂದ ಕಣ್ಮರೆಯಾಗಿರುವುದು ಕಂಡು ಬಂತು. ಮತ್ತೊಂದು ಘಟನೆಯಲ್ಲಿ ಹನಿಮೂನ್‍‍ಗೆ ತೆರಳುತ್ತಿದ್ದ ಜೋಡಿಯೊಂದು ದುರಂತವನ್ನು ಎದುರಿಸಿತ್ತು. ಆಗ ಕಣ್ಮರೆಯಾಗಿದ್ದ ಗಂಡ ಇದುವರೆಗೂ ಪತ್ತೆಯಾಗಿಲ್ಲ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಹಡಗಿನ ಅಧಿಕಾರಿಗಳು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಆತ ಇದ್ದ ಕ್ಯಾಬಿನ್‍‍ನಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಇದರ ಜೊತೆಗೆ ಹಡಗಿನ ಮತ್ತೊಂದು ಮೂಲೆಯಲ್ಲಿಯೂ ಸಹ ರಕ್ತದ ಕಲೆಗಳು ಕಂಡು ಬಂದಿವೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಈ ಹಡಗಿನ ಮಹಿಳಾ ಉದ್ಯೋಗಿಯೊಬ್ಬರು ಮೊಬೈಲ್ ಫೋನ್‍‍‍ನಲ್ಲಿ ಮಾತನಾಡುತ್ತಿದ್ದರು. ಅದನ್ನು ಆಕೆಯ ಸಹೊದ್ಯೋಗಿಯೊಬ್ಬ ನೋಡಿದ್ದಾನೆ. ಇದಾದ ನಂತರ ಆಕೆ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಇವು ಕೆಲವು ಉದಾಹರಣೆಗಳು ಮಾತ್ರ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಈ ರೀತಿಯ ಅನೇಕ ಘಟನೆಗಳು ಕ್ರೂಸ್ ಹಡಗಿನಲ್ಲಿ ಜರುಗಿವೆ. ಈ ಜನರಿಗೆ ಏನಾಗಿದೆ? ಅವರು ಯಾವ ಕಾರಣಕ್ಕೆ ಕಾಣೆಯಾಗುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಪ್ರಯಾಣಿಕರು ಕಾಣೆಯಾಗುತ್ತಿರುವ ಕೆಲವು ಕಾರಣಗಳಿವೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಸಾಮಾನ್ಯವಾಗಿ ಕ್ರೂಸ್ ಹಡಗುಗಳಲ್ಲಿ ಎಣ್ಣೆ ಪಾರ್ಟಿಯನ್ನು ಏರ್ಪಡಿಸಲಾಗುತ್ತದೆ. ವಿಪರೀತವಾಗಿ ಕುಡಿಯುವ ಪ್ರಯಾಣಿಕರು ಸಮುದ್ರದೊಳಕ್ಕೆ ಬಿದ್ದು ಸಾವನ್ನಪ್ಪುವ ಸಾಧ್ಯತೆಗಳಿರುತ್ತವೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಇದರ ಜೊತೆಗೆ ಇನ್ನೂ ಕೆಲವು ಪ್ರಯಾಣಿಕರು ಮೊಬೈಲ್ ಫೋನ್‍‍ನಲ್ಲಿ ಮಾತನಾಡುವ ವೇಳೆಯಲ್ಲಿ ಮೈಮರೆತು ಹಡಗುಗಳಲ್ಲಿರುವ ಅಪಾಯಕಾರಿ ಜಾಗಗಳತ್ತ ತೆರಳುತ್ತಾರೆ. ಸಹ ಪ್ರಯಾಣಿಕರು ಅವರನ್ನು ಎಚ್ಚರಿಸದಿದ್ದರೆ ಸಮುದ್ರದೊಳಗೆ ಬಿದ್ದು ಸಾಯುತ್ತಾರೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಜೀವನದಲ್ಲಿ ಜಿಗುಪ್ಸೆ ಹೊಂದುವವರು ಕ್ರೂಸ್ ಹಡಗುಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವ ತಾಣಗಳನ್ನಾಗಿ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಹಡಗುಗಳಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಈ ರೀತಿಯಾಗಿ ಕಾಣೆಯಾಗುವವರ ಮೃತದೇಹಗಳು ಪತ್ತೆಯಾಗುವುದೇ ಇಲ್ಲ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಕ್ರೂಸ್ ಹಡಗುಗಳಲ್ಲಿ ಈ ರೀತಿಯಾಗಿ ಕಾಣೆಯಾಗುವುದನ್ನು ತಡೆಗಟ್ಟಲು ಹಡಗು ಅಧಿಕಾರಿಗಳು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಕೆಲವು ವೇಳೆ ಕಾಣೆಯಾಗುವವರಿಗಾಗಿ ಶೋಧ ಕಾರ್ಯ ಕೈಗೊಳ್ಳಲಾಗುತ್ತದೆಯಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಹೆಚ್ಚಿನ ವೇಳೆ ಕಾಣೆಯಾಗುವವರು ಪತ್ತೆಯಾಗುವ ಬದಲು ಅವರ ಬಳಿಯಿದ್ದ ವಸ್ತುಗಳು ಮಾತ್ರ ಪತ್ತೆಯಾಗುತ್ತಿವೆ. ಈ ರೀತಿ ಕಾಣೆಯಾಗುವ ಪ್ರಕರಣಗಳು ಪರಿಹಾರವನ್ನು ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಮುಖ್ಯ ಕಾರಣವೆಂದರೆ ಕ್ರೂಸ್ ಹಡಗಿನಲ್ಲಿ ಕಾಲಿಟ್ಟು ಪ್ರಯಾಣ ಬೆಳೆಸಿದ ನಂತರ ಪ್ರಯಾಣಿಕರು ಬೇರೆ ದೇಶಕ್ಕೆ ಸೇರಿರುತ್ತಾರೆ. ಬಹುತೇಕ ಕ್ರೂಸ್ ಹಡಗುಗಳ ಪ್ರಯಾಣಕ್ಕಾಗಿ ಪನಾಮ ಅಥವಾ ಬಹಮಾಸ್‍‍ನಲ್ಲಿ ಬುಕ್ಕಿಂಗ್ ಮಾಡಲಾಗಿರುತ್ತದೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಆ ದೇಶಗಳ ಕಾನೂನುಗಳು ವಿಭಿನ್ನವಾಗಿರುತ್ತವೆ. ಈ ಕಾರಣಕ್ಕೆ ಯಾರೇ ಕಾಣೆಯಾದರೂ ಅವರನ್ನು ಪತ್ತೆ ಮಾಡುವುದು ಕಷ್ಟವಾಗುತ್ತದೆ. ವಿವಿಧ ದೇಶಗಳ ಸರ್ಕಾರವು ಭಾಗಿಯಾದರೂ ಕಾಣೆಯಾದವರನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗುತ್ತಿದೆ.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಕ್ರೂಸ್ ಹಡಗಿನಲ್ಲಿ ಯಾರೇ ಕಾಣೆಯಾದರೂ ಅವರಿಗಾಗಿ ಬಂದರುಗಳಲ್ಲಿ ಹಾಗೂ ಸಮುದ್ರದಲ್ಲಿ ವ್ಯಾಪಕವಾದ ಶೋಧ ನಡೆಸಲಾಗುತ್ತದೆ. ಆದರೆ ಬಹುತೇಕ ಬಾರಿ ಯಾವುದೇ ಪ್ರಯೋಜನವಾಗುವುದಿಲ್ಲ. ಕ್ರೂಸ್ ಹಡಗುಗಳಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು.

ಐಷಾರಾಮಿ ಹಡಗುಗಳ ಹಿಂದಿನ ಕರಾಳ ಮುಖವಿದು..!

ಮಹಿಳಾ ಪ್ರಯಾಣಿಕರಿಗಿಂತ ಪುರುಷ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣೆಯಾಗುತ್ತಿದ್ದಾರೆ. ಅಂದ ಹಾಗೆ ಕ್ರೂಸ್ ಹಡಗುಗಳ ನೆಲ ಮಹಡಿಯಲ್ಲಿ ಜೈಲುಗಳಿರುತ್ತವೆ. ಕಾನೂನು ಬಾಹಿರ ಕೃತ್ಯಗಳನ್ನು ಮಾಡುವ ಪ್ರಯಾಣಿಕರನ್ನು ಬಂಧಿಸಿ ಈ ಜೈಲುಗಳಲ್ಲಿಡಲಾಗುತ್ತದೆ.

Most Read Articles

Kannada
English summary
Dark side of cruise ships. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X