ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಇತ್ತೀಚಿನ ದಿನಗಳಲ್ಲಿ ಕಾರುಗಳಲ್ಲಿ ಡ್ಯಾಶ್‌ಬೋರ್ಡ್ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಡ್ಯಾಶ್‌ಬೋರ್ಡ್ ಕ್ಯಾಮೆರಾ ಅಳವಡಿಸಿದ್ದರೆ ಯಾವ ರೀತಿ ಪ್ರಯೋಜನವಾಗಲಿದೆ ಎಂಬುದನ್ನು ತೋರಿಸುವ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಕಾರಿನಲ್ಲಿ ಅಳವಡಿಸಿದ್ದ ಡ್ಯಾಶ್‌ಬೋರ್ಡ್ ಕ್ಯಾಮೆರಾ ಕಾರಿನ ಮಾಲೀಕರೊಬ್ಬರಿಗೆ ರೂ.5,000 ದಂಡ ವಿಧಿಸುವುದನ್ನು ತಪ್ಪಿಸಿದೆ. ಕಾರು ಮಾಲೀಕರೊಬ್ಬರು ದೆಹಲಿಯ ಪ್ರಮುಖ ರಸ್ತೆಯೊಂದರಲ್ಲಿ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಸಿಗ್ನಲ್‌ನಲ್ಲಿ ಕಾಯುತ್ತಿದ್ದ ಕಾರು ಮಾಲೀಕ ಗ್ರೀನ್ ಲೈಟ್ ಕಾಣಿಸಿಕೊಂಡ ಕೂಡಲೇ ಮುಂದೆ ಚಲಿಸಿದ್ದಾನೆ. ಅಷ್ಟರಲ್ಲಿಯೇ ಬಲಕ್ಕೆ ಸಾಗಲು ಇನೋವಾ ಕಾರು ಎಡದಿಂದ ಬಂದಿದೆ. ಕಾರು ಚಾಲನೆ ಮಾಡುತ್ತಿದ್ದವನು ಆ ಕಾರು ಮುಂದೆ ಸಾಗಲು ದಾರಿ ಮಾಡಿಕೊಟ್ಟಿದ್ದಾನೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಆತ ಸ್ಟಾಪ್ ಲೈನ್ ದಾಟುವವರೆಗೂ ಗ್ರೀನ್ ಲೈಟ್ ಹಾಗೆಯೇ ಇತ್ತು. ಆದರೆ ಇನೋವಾ ಕಾರು ಮುಂದೆ ಹಾದು ಹೋಗುವ ಹೊತ್ತಿಗೆ ಗ್ರೀನ್ ಲೈಟ್ ಮುಗಿದು ರೆಡ್ ಲೈಟ್ ಬಂದಿದೆ. ನಂತರ ಎದುರುಗಡೆಯಿಂದ ವಾಹನಗಳು ಚಲಿಸಲು ಆರಂಭಿಸಿದವು.

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಇದರಿಂದಾಗಿ ಕಾರು ಮಾಲೀಕನು ರಸ್ತೆಯ ಮಧ್ಯದಲ್ಲಿ ನಿಲ್ಲುವಂತಾಯಿತು. ರಸ್ತೆಯ ಮಧ್ಯದಲ್ಲಿ ನಿಲ್ಲುವುದರಿಂದ ಇತರ ವಾಹನಗಳಿಗೆ ಅಡ್ಡಿಯಾಗುತ್ತದೆ ಎಂದು ಅರಿತ ಆತ ಕಾರ್ ಅನ್ನು ಹಿಂದಕ್ಕೆ ಸರಿಸಿ ಜೀಬ್ರಾ ಕ್ರಾಸಿಂಗ್‌ನಲ್ಲಿ ನಿಲ್ಲಿಸಿದ್ದಾನೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಇದನ್ನು ಗಮನಿಸಿದ ಸಂಚಾರಿ ಪೊಲೀಸರು ಕಾರು ಮಾಲೀಕನು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂದು ಪರಿಗಣಿಸಿ ಆತನಿಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ಯುವಕನು ಇದರಲ್ಲಿ ತನ್ನ ತಪ್ಪಿಲ್ಲವೆಂದು ತಿಳಿಸಿದ್ದಾನೆ.

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಆದರೆ ಪೊಲೀಸರು ಆತನ ಮಾತನ್ನು ಒಪ್ಪಿಲ್ಲ. ಈ ಕಾರಣಕ್ಕೆ ಆತ ತನ್ನ ಕಾರಿನಲ್ಲಿ ಅಳವಡಿಸಿದ್ದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿದ್ದ ದೃಶ್ಯಗಳನ್ನು ಪೊಲೀಸರಿಗೆ ತೋರಿಸಿದ್ದಾನೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ದೃಶ್ಯಗಳನ್ನು ಗಮನಿಸಿದ ಪೊಲೀಸರು ಆತನಿಗೆ ದಂಡ ವಿಧಿಸದೇ ಆತನನ್ನು ಅಲ್ಲಿಂದ ಕಳುಹಿಸಿದ್ದಾರೆ. ಈ ಎಲ್ಲಾ ಘಟನೆಗಳು ಕಾರು ಮಾಲೀಕ ತನ್ನ ಕಾರಿನಲ್ಲಿ ಅಳವಡಿಸಿದ್ದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಈ ಘಟನೆಯ ವೀಡಿಯೊವನ್ನು ರಿಡಿಕ್ಯುಲಸ್ಲಿ ಅಮೇಜಿಂಗ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ. ವೈರಲ್ ಆಗಿರುವ ಈ ವೀಡಿಯೊ ಡ್ಯಾಶ್‌ಬೋರ್ಡ್ ಕ್ಯಾಮೆರಾದ ಮಹತ್ವವನ್ನು ಸಾರುತ್ತಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದೆಹಲಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ರೂ.5 ಸಾವಿರ ಅಥವಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಕಾರಿನಲ್ಲಿ ಅಳವಡಿಸಿದ್ದಡ್ಯಾಶ್‌ಬೋರ್ಡ್ ಕ್ಯಾಮೆರಾ ಕಾರು ಮಾಲೀಕನನ್ನು ದಂಡ ತೆರುವುದರಿಂದ ಕಾಪಾಡಿದೆ.

ಭಾರೀ ಪ್ರಮಾಣದ ದಂಡ ಬೀಳುವುದನ್ನು ತಪ್ಪಿಸಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ

ಪೊಲೀಸರ ಕ್ರಮದಿಂದ ಮಾತ್ರವಲ್ಲದೆ ಅಪಘಾತ ಹಾಗೂ ಕಾರು ಕಳ್ಳತನದ ಪ್ರಕರಣಗಳಿಂದಲೂ ಸಹ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳು ರಕ್ಷಣೆ ನೀಡುತ್ತವೆ ಎಂಬುದು ಗಮನಾರ್ಹ. ಈ ಚಿತ್ರಗಳನ್ನು ರಿಡಿಕ್ಯುಲಸ್ಲಿ ಅಮೇಜಿಂಗ್'ರವರಿಂದ ಪಡೆಯಲಾಗಿದೆ.

Most Read Articles

Kannada
English summary
Dash camera saves car driver from paying Rs 5000 fine. Read in Kannada.
Story first published: Monday, March 1, 2021, 20:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X