Just In
- 8 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 10 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗುಜರಿ ವಸ್ತುಗಳಿಂದ ಜೀಪ್ ತಯಾರಿಸಿದ ವ್ಯಕ್ತಿಗೆ ಬೊಲೆರೊ ಉಡುಗೊರೆಯಾಗಿ ನೀಡಿದ ಆನಂದ್ ಮಹೀಂದ್ರಾ
ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಗುಜರಿ ವಸ್ತುಗಳನ್ನು ಬಳಿಸಿ ಸಣ್ಣ ಜೀಪ್ ಅನ್ನು ತಯಾರಿಸಿದ್ದರು. ಈ ಜೀಪ್ ವಿಡಿಯೋವನ್ನು ಕಂಡು ಆನಂದ್ ಮಹೀಂದ್ರಾ ಅವರು ಇಂಪ್ರೇಸ್ ಆಗಿ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಹಂಚಿಕೊಂಡಿದ್ದರು.

ದತ್ತಾತ್ರೆಯ ಲೊಹಾರ್ ಅವರು ಗುಜರಿ ವಸ್ತುಗಳನ್ನು ತಯಾರಿಸಿದ ಸಣ್ಣ ಜೀಪ್ ಬದಲಾಗಿ ಹೊಚ್ಚ ಹೊಸಕಾರನ್ನು ನೀಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ, ಸಣ್ಣ ಜೀಪ್ ತಯಾರಿಸಿದ ದತ್ತಾತ್ರೆಯ ಲೊಹಾರ್ ಕುಟುಂಬವನ್ನು ಭೇಟಿಯಾಗಿ, ಹೊಚ್ಚ ಹೊಸ ಬಿಳಿ-ಬಣ್ಣದ ಬೊಲೆರೊ ಎಸ್‍ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತು ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ಫೋಟೋಗಳನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ಮಹೀಂದ್ರಾ ಅಂಡ್ ಮಹೀಂದ್ರಾ (Mahindra and Mahindra) ಕಂಪನಿಯ ಸಿಇಒ ಆನಂದ್ ಮಹೀಂದ್ರಾ ರವರು ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಕೆಲವು ವೀಡಿಯೊ ಅಥವಾ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ. ಅವರು ಟ್ವಿಟರ್‌ನಲ್ಲಿ ಶೇರ್ ಮಾಡುವ ಪೋಸ್ಟ್‌ಗಳು ಪ್ರೇರಕವಾಗಿರುತ್ತವೆ, ಇಲ್ಲವೇ ತಮಾಷೆಯಿಂದ ಕೂಡಿರುತ್ತವೆ.

ಅವರು ತಮ್ಮ ಟ್ವೀಟ್‌ಗಳ ಮೂಲಕ ತಮ್ಮ ಫಾಲೋವರ್ ಗಳನ್ನು ರಂಜಿಸಲು ಮರೆಯುವುದಿಲ್ಲ. ಕಳೆದ ವರ್ಷ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕಿಕ್ ಸ್ಟಾರ್ಟ್ ಮಾಡಿದಾಗ ಆರಂಭವಾಗುವ ಸಣ್ಣ ಜೀಪ್ ವೀಡಿಯೊದಲ್ಲಿ ಹಂಚಿಕೊಂಡಿದ್ದರು. ಸಾಮಾನ್ಯವಾಗಿ ಸ್ಕೂಟರ್ ಅಥವಾ ಬೈಕ್ ಗಳನ್ನು ಕಿಕ್ ಮಾಡುವ ಮೂಲಕ ಸ್ಟಾರ್ಟ್ ಮಾಡಲಾಗುತ್ತದೆ.

ಆದರೆ ಜೀಪ್ ಅನ್ನು ಕಿಕ್ ಮೂಲಕ ಸ್ಟಾರ್ಟ್ ಮಾಡುವುದನ್ನು ಯಾರೂ ನೋಡಿರುವ ಸಾಧ್ಯತೆಗಳಿಲ್ಲ. ಈ ಕಾರಣಕ್ಕೆ ಆನಂದ್ ಮಹೀಂದ್ರಾ ರವರು ಶೇರ್ ಮಾಡಿದ್ದ ಈ ವೀಡಿಯೊ ಸಾಕಷ್ಟು ವೈರಲ್ ಆಗಿತ್ತು. ಈ ವೀಡಿಯೊ ಶೇರ್ ಮಾಡಿರುವ ಆನಂದ್ ಮಹೀಂದ್ರಾ, ಈ ವಾಹನವು ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲ.

ಆದರೆ ನಾನು ಯಾವಾಗಲೂ ಕಡಿಮೆ ವಸ್ತುವಿನಿಂದ ಹೆಚ್ಚು ಮಾಡುವ ಜನರ ಈ ಪ್ರವೃತ್ತಿಯನ್ನು ಮೆಚ್ಚುತ್ತೇನೆ. ವಾಹನಗಳ ಬಗ್ಗೆ ಅವರಿಗಿರುವ ಉತ್ಸಾಹ ನಿಜಕ್ಕೂ ಅದ್ಭುತವೆಂದು ಹೇಳಿದ್ದರು. ಹಲವು ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಆನಂದ್ ಮಹೀಂದ್ರಾ ರವರು ಶೇರ್ ಮಾಡಿರುವ ಈ ವೀಡಿಯೊವನ್ನು ಇದುವರೆಗೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಅಂದ ಹಾಗೆ ಈ ವೀಡಿಯೊ ಮಹಾರಾಷ್ಟ್ರದ ಹಳ್ಳಿಯೊಂದಕ್ಕೆ ಸಂಬಂಧಿಸಿದೆ. ಈ ವೀಡಿಯೊದಲ್ಲಿ ಆ ಹಳ್ಳಿಯ ವ್ಯಕ್ತಿಯೊಬ್ಬರು ಮಾಡಿಫೈ ಮಾಡಿದ ಜೀಪ್ ಅನ್ನು ಚಾಲನೆ ಮಾಡುತ್ತಿರುವುದನ್ನು ತೋರಿಸಲಾಗಿದೆ. ಈ ಜೀಪ್ ಅನ್ನು ಹಳೆಯ ವಸ್ತುಗಳಿಂದ ತಯಾರಿಸಲಾಗಿದೆ. ಈ ಜೀಪ್'ಗೆ ಬೈಕಿನ ಎಂಜಿನ್ ಅಳವಡಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೊದಲ್ಲಿ, ಸಣ್ಣ ಜೀಪ್ ಅನ್ನು ಕಿಕ್ ಮಾಡಿ ಸ್ಟಾರ್ಟ್ ಮಾಡುವುದನ್ನು ಸಹ ತೋರಿಸಲಾಗಿದೆ.

ಇದು ಎಡಗೈ ಡ್ರೈವ್ ಕಾನ್ಫಿಗರೇಶನ್ ಅನ್ನು ಹೊಂದಿದೆ ಮತ್ತು ಕಿಕ್-ಸ್ಟಾರ್ಟರ್ ಅನ್ನು ಬಳಸಿಕೊಂಡು ದ್ವಿಚಕ್ರ ವಾಹನವನ್ನು ಹೋಲುತ್ತದೆ.ವಿವಿಧ ವಾಹನಗಳ ವಿವಿಧ ಸ್ಕ್ರ್ಯಾಪ್ಡ್ ಭಾಗಗಳನ್ನು ಬಳಸಿ 60,000 ರೂಪಾಯಿ ವೆಚ್ಚದಲ್ಲಿ ತಯಾರಿಸಲಾದ ಈ 'ಜುಗಾಡ್ ಜೀಪ್ ಮುಂಭಾಗವು ಹಿಂದಿನ ದಶಕಗಳಲ್ಲಿ ಭಾರತದಲ್ಲಿ ಮಹೀಂದ್ರಾ ತಯಾರಿಸುತ್ತಿದ್ದ ರೆಟ್ರೋ ಜೀಪ್‌ಗಳಂತೆಯೇ ಹೋಲುತ್ತದೆ.

ಈ ಜೀಪ್ ಒಂದೇ ಬಾರಿಗೆ ಐದು ಜನರನ್ನು ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ವಾಹನವು ಕಾನೂನು ಅಧಿಕಾರಿಗಳು ನಿಗದಿಪಡಿಸಿದ ಸುರಕ್ಷತೆ ಮತ್ತು ಹೊರಸೂಸುವಿಕೆಯ ಮಾನದಂಡಗಳನ್ನು ಅನುಸರಿಸುವುದಿಲ್ಲ, ಹೀಗಾಗಿ ಸಾರ್ವಜನಿಕ ರಸ್ತೆಗಳಲ್ಲಿ ಬಳಸಲು ಇದು ಅನರ್ಹವಾಗಿದೆ.

ಸಣ್ಣ ಜೀಪ್ ಬದಲಾಗಿ ಹೊಚ್ಚ ಹೊಸ ಕಾರನ್ನು ನೀಡುವುದಾಗಿ ಈ ಹಿಂದೆ ಹೇಳಿದ್ದರು. ಲೋಹರ್ ಕೂಡ ಆನಂದ್ ಮಹೀಂದ್ರಾ ಅವರ ಪ್ರಸ್ತಾಪವನ್ನು ಸಂತೋಷದಿಂದ ಒಪ್ಪಿಕೊಂಡಿದ್ದರು. ಅದರಂತೆ ಅವರಿಗೆ ಹೊಸ ಮಹೀಂದ್ರಾ ಬೊಲೆರೊ ಎಸ್‍ಯುವಿ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಹೊಸ ಬೊಲೆರೊಗೆ ಬದಲಾಗಿ 'ಜುಗಾಡ್' ಅಥವಾ ಸಣ್ಣ ಜೀಪ್ ಮಹೀಂದ್ರಾದ ರಿಸರ್ಚ್ ವ್ಯಾಲಿಯಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ಮಹೀಂದ್ರಾ ಘೋಷಿಸಿದೆ. ಕನಿಷ್ಠ ಸಂಪನ್ಮೂಲಗಳು ಮತ್ತು ವೆಚ್ಚಗಳನ್ನು ಬಳಸಿಕೊಂಡು ಚಿಂತನಶೀಲ ಆವಿಷ್ಕಾರಗಳೊಂದಿಗೆ ಬರಲು ಮಹೀಂದ್ರಾದಲ್ಲಿ ಕೆಲಸ ಮಾಡುವ ಮನಸ್ಸುಗಳನ್ನು ಪ್ರೇರೇಪಿಸುವ ಭರವಸೆಯಲ್ಲಿ ಈ ವಾಹನವನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.

ಇನ್ನು ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೋ ಬಿಡುಗಡೆಯ ನಂತರವಷ್ಟೇ ಬೊಲೆರೊ ಕಾರು ಮಾದರಿಯನ್ನು ಬಿಡುಗಡೆ ಮಾಡಲಿದೆ. ಹೊಸ ಕಾರುಗಳು ಸೇಫ್ಟಿ ಫೀಚರ್ಸ್ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳಿಂತಲೂ ಹೆಚ್ಚು ಇಂಧನ ದಕ್ಷತೆ ಮತ್ತು ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆ ಸೌಲಭ್ಯ ಹೊಂದಿರಲಿವೆ. ಇನ್ನು ಬೊಲೆರೊ ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿರುವ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಹೊಸ ಎಸ್‍ಯುವಿಯು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ಲ್ಯಾಡರ್-ಆನ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿ ನಿರ್ಮಾಣಗೊಳ್ಳಲಿದೆ. ನ್ಯೂ ಜನರೇಷನ್ ಬೊಲೆರೊದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರೇರ್ ಎಸಿ ವೆಂಟ್ ಗಳೊಂದಿಗೆ ಹೊಸ ಎಸಿ ಯುನಿಟ್, ಪವರ್ ವಿಂಡೋಸ್, ಮಲ್ಟಿ-ಫಂಕ್ಷನಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಇತರೆ ಆಧುನಿಕ ವೈಶಿಷ್ಟ್ಯಗಳನ್ನು ಪಡೆಯಬಹುದು ಎಂದು ನಿರೀಕ್ಷೆಯಿದೆ.