ಕುಟುಂಬಕ್ಕಾಗಿ ತನ್ನ ಆಸೆಗಳನ್ನು ತ್ಯಾಗ ಮಾಡಿದ ತಂದೆ.. ಮಗಳಿಂದ ಅಪ್ಪನಿಗೆ ಕನಸಿನ ಬೈಕ್ ಗಿಫ್ಟ್
ಅಮ್ಮನ ಮಡಿಲು.. ಅಪ್ಪನ ಹೆಗಲು..! ಸ್ವರ್ಗಕ್ಕೆ ಮಿಗಿಲು. ಅಮ್ಮನ ತುತ್ತು.. ಅಪ್ಪನ ಮುತ್ತು..! ಅಮೃತಕ್ಕಿಂತ ಮಿಗಿಲು. ತಂದೆ ಮಕ್ಕಳ ಜೀವನವನ್ನು ರೂಪಿಸಲು ತನ್ನ ಆಸೆಯನ್ನೆಲ್ಲ ಬದಿಗೊತ್ತಿ ಹಗಲು-ರಾತ್ರಿ ಕಷ್ಟಪಡುತ್ತಾರೆ. ಅಂತಹ ಅಪ್ಪನಿಗೆ ಮಗಳೊಬ್ಬಳು ಕನಸಿನ ಬೈಕ್‌ನ್ನು ಗಿಫ್ಟ್ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆರತಿ ಸಾವಂತ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, 'ನನ್ನ ಅಪ್ಪನಿಗೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಖರೀದಿಸುವ ದೊಡ್ಡ ಕನಸಿತ್ತು. ಆಗಾಗ್ಗೆ ಆ ಬೈಕ್ ಬಗ್ಗೆ ಅವರು ಮಾತನಾಡುತ್ತಿದ್ದರು. ನಾನು ಚಿಕ್ಕವಳಾದಾಗ ಬೆಳೆದು, ದೊಡ್ಡವಳಾಗಿ ದುಡಿಯುವುದನ್ನು ಆರಂಭಿಸಿದ ಮೇಲೆ ಮೋಟಾರ್‌ಸೈಕಲ್ ಕೊಡಿಸುವುದಾಗಿ ತಂದೆಗೆ ಮಾತು ನೀಡಿದ್ದೆ' ಎಂದು ಅವರು ಹೇಳಿದ್ದಾರೆ.

ಮುಂದುವರಿದು, 'ನಾನು ಬೆಳೆದ ಮೇಲೆ ತಂದೆಯ ಕನಸನ್ನು ನನಸು ಮಾಡುವುದು ನನಗೆ ಮುಖ್ಯವಾಯಿತು. ನಿರಂತರವಾಗಿ ನಮ್ಮ ಕುಟುಂಬದ ಅಗತ್ಯತೆಗಳಿಗೆ ತನ್ನ ಸ್ವಂತ ಆಸೆಗಳನ್ನು ಮುಂಚಿತವಾಗಿಯೇ ಅವರು ಪಕ್ಕಕ್ಕೆ ಇಡುತ್ತಿದ್ದರು. ನಾವು ಆರಾಮದಾಯಕವಾಗಿ ಜೀವನವನ್ನು ನಡೆಸಲು ತುಂಬಾ ತ್ಯಾಗವನ್ನು ಮಾಡಿದ್ದಾರೆ. ಇಂದು, ನೀವು ಯಾವಾಗಲೂ ಬಯಸುವ ರಾಯಲ್ ಎನ್‌ಫೀಲ್ಡ್ ಬೈಕ್‌ನ್ನು ಉಡುಗೊರೆಯಾಗಿ ನೀಡಲು ತುಂಬಾ ಸಂತೋಷವಾಗಿದೆ' ಎಂದು ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವಿಡಿಯೋದ ದೃಶ್ಯಗಳಲ್ಲಿ ಯುವತಿಯು ತಮ್ಮ ತಂದೆಗೆ ಉಡುಗೊರೆ ನೀಡಲು ಹೊಸ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಿದ್ದಾರೆ. ಆ ಬಳಿಕ ನೂತನ ಬೈಕ್ ಖರೀದಿ ಸಂಬಂಧ ವಿವಿಧ ಕಾಗದ ಪತ್ರಗಳಿಗೆ ಸಹಿ ಮಾಡಿದ್ದು, ಅಪ್ಪ-ಅಮ್ಮನ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಶೋರೂಂಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ನೂತನ ಬೈಕ್‌ನ್ನು ಸರ್ಪ್ರೈಸ್ ಗಿಫ್ಟ್ ನೀಡಿದ್ದು, ಇದನ್ನು ಕಂಡ ತಂದೆ-ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.

ನಂತರ, ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ದಂಪತಿಗಳಿಬ್ಬರು ಹೊಸ ಮೋಟಾರ್‌ಸೈಕಲ್ ನಲ್ಲಿ ಸವಾರಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಪ್ರೀತಿಯ ತಂದೆಗೆ ಪುತ್ರಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 (Royal Enfield Classic 350) ಬೈಕ್‌ನ ಯಾವ ಮಾದರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲ.
ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರ್‌ಸೈಕಲ್, ರೂಪಾಂತರಗಳಿಗೆ ಅನುಗುಣವಾಗಿ ರೂ.1.93 ಲಕ್ಷ 2.25 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇದು 349 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಜೆ-ಸಿರಿಯರ್ ಪೆಟ್ರೋಲ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 20.21 ಪಿಎಸ್ ಗರಿಷ್ಠ ಪವರ್ (ಶಕ್ತಿ), 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಿತ್ತದೆ. ಜೊತೆಗೆ 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್, 41.55 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದು, ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮುಂಭಾಗ 19 ಹಾಗೂ ಹಿಂಭಾಗ 18 ಇಂಚಿನ ಟೈಯರ್ಸ್ ಅನ್ನು ಪಡೆದಿದೆ. 195 ಕೆಜಿ ತೂಕವಿರುವ ಈ ಬೈಕ್ ಗೆ ಹೋಂಡಾ ಸಿಬಿ350, ಹೀರೋ ಮಾವ್ರಿಕ್ 440, ಜಾವಾ 350 ಪ್ರಬಲ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications