ಆತ್ಮೀಯ 'ಸೋನು ಸೂದ್' ನೀವು ಮಾಡಿದ್ದು ತಪ್ಪು: ಎಚ್ಚರಿಕೆ

ನಟ ಸೋನು ಸೂದ್ ಹೆಸರು ಭಾರತದ ಬಹುತೇಕ ಎಲ್ಲರಿಗೂ ಚಿರಪರಿಚಿತ. ಈ ಹೆಸರು ಕೊರೋನಾ ಸೋಂಕು ಹಬ್ಬುವ ಮೊದಲು ಕೆಲವರಿಗೆ ತಿಳಿದಿಲ್ಲವಾದರೂ, ಆ ಮೇಲೆ ಜನೋಪಕಾರಿ ಸೇವೆಯಿಂದಲೇ ಪ್ರತಿಯೊಬ್ಬರಿಗೂ ಗೊತ್ತಾಯಿತು. ಆದರೆ, ಇತ್ತೀಚೆಗೆ ಸೋನು ಸೂದ್‌ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ನಟ ಸೋನು ಸೂದ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಅವರು ರೈಲಿನ ಬೋಗಿಯ ಬಾಗಿಲಲ್ಲಿ ಕುಳಿತಿರುವುದು ಕಂಡುಬಂದಿದೆ. ಪೊಲೀಸರು ಮಾತ್ರವಲ್ಲದೆ, ಉತ್ತರ ರೈಲ್ವೆ ಅಧಿಕಾರಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಟಾರ್ ನಟ ಹೀಗೆ ಮಾಡಿದರೆ, ಅಭಿಮಾನಿಗಳು ಕೂಡ ಇದನ್ನು ಅನುಸರಿಸುವ ಸಾಧ್ಯತೆ ಇದೆ ಎಂದು ನಟ ಸೋನು ಸೂದ್ ತಿಳಿ ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿ ಆಗಿದ್ದೇನು ತಿಳಿಯೋಣ ಬನ್ನಿ.

ಆತ್ಮೀಯ ಸೋನು ಸೂದ್ ನೀವು ಮಾಡಿದ್ದು ತಪ್ಪು: ಎಚ್ಚರಿಕೆ

ಈ ವಿಡಿಯೋವನ್ನು ಡಿಸೆಂಬರ್ 13, 2022 ರಂದು ನಟ ಸೋನು ಸೂದ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. 22 ಸೆಕೆಂಡುಗಳ ಅವಧಿಯ ಈ ವಿಡಿಯೋದಲ್ಲಿ, ಸೋನು ಸೂದ್ ಚಲಿಸುತ್ತಿರುವ ರೈಲಿನ ಬಾಗಿಲನ್ನು ಹಿಡಿದುಕೊಂಡು ಕುಳಿತು ತಂಗಾಳಿಯನ್ನು ಆನಂದಿಸುತ್ತಿದ್ದಾರೆ. ಆ ವೇಳೆ ಇದು ಅವರಿಗೆ ಮೋಜಿನ ಸಂಗತಿಯಾಗಿದೆ. ಆದರೆ, ಕೊಂಚ ಹೆಚ್ಚು-ಕಡಿಮೆಯಾದರೆ ಅನಿರೀಕ್ಷಿತ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ, ಇತಂಹ ಕೆಲಸಗಳನ್ನು ಸಾಧ್ಯವಾದಷ್ಟು ಮಾಡಬಾರದು.

ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ಸೋನು ಸೂದ್ ಮಾಡಿದ್ದನ್ನು ತಪ್ಪು ಎಂದು ಹೇಳಿದ್ದಾರೆ. ಇಂತಹ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ಮೊದಲು ಖಂಡಿತವಾಗಿಯೂ ಎರಡು ಬಾರಿ ಯೋಚಿಸಬೇಕು ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೊರೋನಾ ಸಾಂಕ್ರಾಮಿಕದ ವೇಳೆ ದೇಶಾದ್ಯಂತ ಅನೇಕ ಜನರಿಗೆ ಮಾದರಿಯಾಗಿದ್ದ ನೀವು ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ನೆಟ್ಟಿಗರು ಮನವಿ ಮಾಡಿದ್ದಾರೆ. ಇನ್ನು, ಕೆಲವರು ಸೋನು ಸೂದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಈ ವಿಡಿಯೋಗೆ ಮುಂಬೈ ರೈಲ್ವೆ ಪೊಲೀಸ್ ಕಮಿಷನರೇಟ್‌ನ ಅಧಿಕೃತ ಹ್ಯಾಂಡಲ್ 'ಜಿಆರ್‌ಪಿ ಮುಂಬೈ' @ಸೋನುಸೂದ್ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಪ್ರಯಾಣಿಸುವುದು ಸಿನಿಮಾಗಳಲ್ಲಿ ಮನರಂಜನೆ ದೃಷ್ಟಿಯಿಂದ ಒಳ್ಳೆಯದು. ಆದರೆ, ನಿಜ ಜೀವನದಲ್ಲಿ ಈ ರೀತಿ ಮಾಡಬಾರದು. ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಮನವರಿಕೆ ಮಾಡಿಕೊಟ್ಟಿದೆ. ಸೋನು ಸೂದ್ ಶೇರ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉತ್ತರ ರೈಲ್ವೆ ಅಧಿಕಾರಿಗಳು.. 'ಆತ್ಮೀಯ ಸೋನು ಸೂದ್, ನೀವು ಜಗತ್ತಿನ ಅನೇಕ ಜನರಿಗೆ ಮಾದರಿಯಾಗಿದ್ದೀರಿ. ಆದರೆ, ರೈಲು ಪ್ರಯಾಣದ ಸಮಯದಲ್ಲಿ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುವುದು ತುಂಬಾ ಅಪಾಯಕಾರಿ ಎಂದು ಅರಿಯಿರಿ. ನಿಮ್ಮ ಅಭಿಮಾನಿಗಳು ಇಂತಹ ಅಪಾಯಕಾರಿ ವೀಡಿಯೊಗಳನ್ನು ಫಾಲೋ ಮಾಡಬಹುದು. ದಯವಿಟ್ಟು ಇದನ್ನು ಎಂದಿಗೂ ಮಾಡಬೇಡಿ. ಎಚ್ಚರಿಕೆಯಿಂದ ಪ್ರಯಾಣಿಸಿ' ಎಂದು ಟ್ವೀಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ.

ಕೊರೋನಾ ಅವಧಿಯಲ್ಲಿ ಅಗತ್ಯವಿರುವವರಿಗೆ ಎಲ್ಲ ವಿಧದ ಸಹಾಯ ಮಾಡಿದ ಸೋನು ಸೂದ್ ಅವರನ್ನು ಜಗತ್ತು ಹೊಗಳಿತು. ಜನರು ಮಾತ್ರವಲ್ಲದೆ ಸರ್ಕಾರಗಳು ಸೋನು ಸೂದ್ ಅವರನ್ನು ಮೆಚ್ಚಿದವು. ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದರೂ ನಿಜ ಜೀವನದಲ್ಲಿ ಹೀರೋ ಆಗಿ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಸಾರಿಗೆ ಸೌಲಭ್ಯ ಇಲ್ಲದಿದ್ದಾಗ ಅನೇಕ ಜನರನ್ನು ಅವರ ಸ್ವಂತ ಊರಿಗೆ ಹೋಗುವ ವ್ಯವಸ್ಥೆಯನ್ನು ಸೋನು ಸೂದ್ ಮಾಡಿದ್ದರು. ಆದರೆ, ವೈರಲ್ ಆಗಿರುವ ಈ ವಿಡಿಯೋಗೆ ಸದ್ಯ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Friday, January 6, 2023, 10:27 [IST]
English summary
Dear sonu sood what you have done is wrong be warned
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+