ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಭಾರತದಲ್ಲಿ ಹೈ ಎಂಡ್ ಬಸ್ಸುಗಳನ್ನು ತಯಾರಿಸುವ ಹಲವಾರು ಬಸ್ ತಯಾರಕ ಕಂಪನಿಗಳಿವೆ. ಅದರಲ್ಲಿ ಡೆಕ್ಕನ್ ಆಟೋ ಕಂಪನಿಯು ಸಹ ಸೇರಿದೆ. ಈ ಕಂಪನಿಯು ಭಾರತೀಯ ಮೂಲದ ಕಂಪನಿಯಾಗಿದೆ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಭಾರತೀಯ ಮೂಲದ ಕಂಪನಿ ಮಾತ್ರವಲ್ಲದೆ ಡೆಕ್ಕನ್ ಆಟೋ ಟಾಟಾ, ಅಶೋಕ್ ಲೇಲ್ಯಾಂಡ್ ಹಾಗೂ ಐಷರ್‌ ಕಂಪನಿಯ ಬಸ್‌ಗಳ ರೀತಿಯಲ್ಲಿ ತಾನು ಉತ್ಪಾದಿಸುವ ಬಸ್‌ಗಳಲ್ಲಿ ಸ್ಥಳೀಯತೆಗೆ ಹೆಚ್ಚು ಆದ್ಯತೆ ನೀಡುತ್ತದೆ. ಡೆಕ್ಕನ್ ಆಟೋ ಭಾರತದಲ್ಲಿ ಬಸ್ಸುಗಳನ್ನು ತಯಾರಿಸುತ್ತದೆ ಎಂಬ ಬಗ್ಗೆ ಕೆಲವೇ ಕೆಲವು ಜನರಿಗೆ ಮಾತ್ರ ತಿಳಿದಿದೆ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಡೆಕ್ಕನ್ ಆಟೋ ಬಸ್‌ಗಳಲ್ಲಿ ಉಳಿದ ಭಾರತೀಯ ಕಂಪನಿಗಳ ಬಸ್‌ಗಳಿಗಿಂತ ವಿಭಿನ್ನವಾಗಿ ರೇರ್ ಎಂಜಿನ್ ಕಾನ್ಫಿಗರೇಷನ್ ಬಳಸಲಾಗುತ್ತದೆ. ಡೆಕ್ಕನ್ ಆಟೋ ತೆಲಂಗಾಣದಲ್ಲಿ ಬಸ್ ಉತ್ಪಾದನಾ ಘಟಕವನ್ನು ಹೊಂದಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಡೆಕ್ಕನ್ ಆಟೋ ಕಂಪನಿಯು ಈಗ ವಿಶ್ವವನ್ನೇ ತತ್ತರಿಸುವಂತೆ ಮಾಡಿರುವ ಮಹಾಮಾರಿ ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತದೆ ಎಂಬುದು ವಿಶೇಷ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಈ ಬಸ್ಸುಗಳನ್ನು ಹೈದರಾಬಾದ್‌ನಲ್ಲಿ ಉತ್ಪಾದಿಸಲಾಗುತ್ತದೆ. ಈ ಬಸ್ಸಿನ ಎಂಜಿನ್ ಫಿಟ್ಟಿಂಗ್'ನಿಂದ ಹಿಡಿದು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ'ವರೆಗೆ ಈ ಬಸ್ಸಿನ ಬಹುತೇಕ ಭಾಗಗಳನ್ನು ಭಾರತದಲ್ಲಿಯೇ ತಯಾರಿಸಲಾಗುತ್ತದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

2004ರಲ್ಲಿ ಆರಂಭವಾದ ಈ ಬಸ್ ಕಂಪನಿಯು ತಾಂತ್ರಿಕ ಸಹಕಾರಕ್ಕಾಗಿ ಚೀನಾದ ಜೊಂಗ್ಟಾಂಗ್ ಬಸ್ ಕಂಪನಿ ಜೊತೆ ಪಾಲುದಾರಿಕೆ ಮಾಡಿ ಕೊಂಡಿದೆ. ಈ ಸಹಭಾಗಿತ್ವದಲ್ಲಿ ಜೊಂಗ್ಟಾಂಗ್ ಕಂಪನಿಯ ಕೆಲವು ಬಸ್ಸುಗಳನ್ನು ಭಾರತದಲ್ಲಿ ಅಸೆಂಬಲ್ ಮಾಡಲಾಗಿದೆ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಆದರೆ ಈಗ ಕರೋನಾ ಹೆಸರಿನಲ್ಲಿ ತಯಾರಾದ ಎಲ್ಲಾ ಬಸ್ಸುಗಳು ಭಾರತದಲ್ಲಿ ತಯಾರಿಸಿದ ಬಿಡಿ ಭಾಗ ಹಾಗೂ ಉಪಕರಣಗಳನ್ನು ಬಳಸುತ್ತವೆ. ಕರೋನಾ ಬಸ್‌ಗಳಲ್ಲಿ ಅಳವಡಿಸಲಾಗಿರುವ ಎಂಜಿನ್‌ಗಳನ್ನು ಜನಪ್ರಿಯ ವಾಹನ ತಯಾರಕ ಕಂಪನಿಯಾದ ಕಮ್ಮಿನ್ಸ್‌ನಿಂದ ಪಡೆಯಲಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಈ ಬಸ್‌ಗಳಲ್ಲಿ ಚಾಸಿಸ್ ಬದಲಿಗೆ ಮೊನೊಕೊಕ್ ಫ್ರೇಮ್‌ಗಳನ್ನು ಬಳಸಲಾಗಿದೆ. ಇವುಗಳನ್ನು ಭಾರತದಲ್ಲಿಯೂ ತಯಾರಿಸಲಾಗುತ್ತದೆ. ಇದರ ಜೊತೆಗೆ ಈ ಬಸ್ಸಿನಲ್ಲಿರುವ ಸಸ್ಪೆಂಷನ್ ಸಿಸ್ಟಂಗಳನ್ನು ಭಾರತದಲ್ಲಿಯೂ ತಯಾರಿಸಲಾಗುತ್ತದೆ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಈ ಮೂಲಕ ಡೆಕ್ಕನ್ ಆಟೋ ಕಂಪನಿಯು ಮಹೀಂದ್ರಾ, ಟಾಟಾ ಹಾಗೂ ಐಷರ್ ಬಸ್‌ಗಳಂತೆ ಸ್ಥಳೀಯತೆಗೆ ಆದ್ಯತೆ ನೀಡಿದೆ. ಭಾರತದಲ್ಲಿ ಈ ಕಂಪನಿಯು ವಿವಿಧ ನಗರಗಳಿಂದ ಬಸ್'ಗಳಿಗಾಗಿ ಆರ್ಡರ್'ಗಳನ್ನು ಪಡೆಯುತ್ತದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಕಂಪನಿಯ ಕಳಪೆ ಮಾರ್ಕೆಟಿಂಗ್ ತಂತ್ರದಿಂದಾಗಿ ಕೆಲವೇ ಕೆಲವು ಜನರಿಗೆ ಮಾತ್ರ ಈ ಕಂಪನಿಯ ಬಗ್ಗೆ ತಿಳಿದಿದೆ. ಸದ್ಯಕ್ಕೆ ಡೆಕ್ಕನ್ ಆಟೋ ಕಂಪನಿಯ ಕರೋನಾ ಬಸ್ಸುಗಳನ್ನು ಇಂದೋರ್‌ನಲ್ಲಿ ಬಳಸಲಾಗುತ್ತಿದೆ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಕಂಪನಿಯ ಬಸ್ಸುಗಳು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗುಜರಾತ್‌ಗಳಲ್ಲಿಯೂ ಕಾರ್ಯಾಚರಣೆ ನಡೆಸುತ್ತವೆ. ಡೆಕ್ಕನ್ ಆಟೋ ಕಂಪನಿಯು ನಾಲ್ಕು ಮಾದರಿಯಬಸ್ಸುಗಳನ್ನು ಉತ್ಪಾದಿಸುತ್ತದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಇವುಗಳಲ್ಲಿ ಸ್ಕೈಪ್ಯಾಕ್ 009, ಸ್ಕೈಪ್ಯಾಕ್ 009 ಬಿಆರ್‌ಡಿ, ಫಾರ್ಚೂನ್ 007 ಹಾಗೂ ಮಲ್ಟಿ ಪ್ಲಸ್ ಸ್ಲೀಪರ್ ಮಾದರಿಗಳು ಸೇರಿವೆ. ಏರ್ ಸಸ್ಪೆನ್ಷನ್‌ ಹೊಂದಿರುವ ಈ ಎಲ್ಲಾ ಬಸ್‌ಗಳಲ್ಲಿ ಕಮ್ಮಿನ್ಸ್‌ನ 5,900 ಸಿಸಿ ಸೂಪರ್ ರಿಫೈನ್ಡ್ ಎಂಜಿನ್ ಅಳವಡಿಸಲಾಗಿದೆ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೊನೊಕೊಕ್ ರಚನೆಯ ನಿರ್ಮಾಣವನ್ನು ಆರಂಭಿಸಿದ ಭಾರತದ ಕೆಲವೇ ಕೆಲವು ಕಂಪನಿಗಳಲ್ಲಿ ಡೆಕ್ಕನ್ ಆಟೋ ಸಹ ಸೇರಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಕಡಿಮೆ ಗುರುತ್ವಾಕರ್ಷಣೆಯನ್ನು ಹೊಂದಿರುವ ಕಾರಣಕ್ಕೆ ಕರೋನಾ ಬಸ್ಸುಗಳನ್ನು ಹೆದ್ದಾರಿಯಲ್ಲಿ ಹೆಚ್ಚು ಸ್ಥಿರವೆಂದು ಪರಿಗಣಿಸಲಾಗಿದೆ. ಹಿಂಭಾಗದ ಎಂಜಿನ್ ಹಾಗೂ ಬೆಳಕಿನ ರಚನೆಯಿಂದಾಗಿ ಕರೋನಾ ಬಸ್ಸುಗಳು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ.

ಕರೋನಾ ಹೆಸರಿನಲ್ಲಿ ಬಸ್ಸುಗಳನ್ನು ಮಾರಾಟ ಮಾಡುತ್ತದೆ ಭಾರತೀಯ ಮೂಲದ ಈ ಕಂಪನಿ

ಮೊದಲೇ ಹೇಳಿದಂತೆ ಡೆಕ್ಕನ್ ಆಟೋ ಕಂಪನಿಯ ದುರ್ಬಲ ಮಾರ್ಕೆಟಿಂಗ್ ತಂತ್ರದಿಂದಾಗಿ ಈ ಕಂಪನಿಯು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಲೇ ಇಲ್ಲ. ಕಂಪನಿಯು ಸದ್ಯಕ್ಕೆ ಬಸ್ಸುಗಳನ್ನು ಉತ್ಪಾದಿಸುತ್ತಿದೆಯೆ, ಇಲ್ಲವೇ ಎಂಬುದು ತಿಳಿದು ಬಂದಿಲ್ಲ.

Most Read Articles

Kannada
English summary
Deccan Auto manufactures buses in name of Corona. Read in Kannada.
Story first published: Monday, May 24, 2021, 10:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X